ಚಿಕ್ಕರಸಿನಕೆರೆ ಡೈರಿಗೆ ಹೊನ್ನಯ್ಯ ಅವಿರೋಧ ಆಯ್ಕೆ
ಮಂಡ್ಯ

ಚಿಕ್ಕರಸಿನಕೆರೆ ಡೈರಿಗೆ ಹೊನ್ನಯ್ಯ ಅವಿರೋಧ ಆಯ್ಕೆ

June 5, 2018

ಭಾರತೀನಗರ:  ಚಿಕ್ಕರಸಿನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಜ್ಜಿ ಹೊನ್ನಯ್ಯ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಕಜ್ಜಿ ಹೊನ್ನಯ್ಯ ಮಾತ ನಾಡಿ, ಹೈನುಗಾರಿಕೆಯಿಂದ ರೈತರು ನೆಮ್ಮದಿಯ ಜೀವನ ನಡೆಸಬಹುದು. 15 ದಿನಕ್ಕೊಮ್ಮೆ ಸಂಘಕ್ಕೆ ಹಾಲು ಸರಬರಾಜು ಮಾಡಿ ರೈತರು ಹಣ ಪಡೆಯಬಹುದು. ಆದ್ದರಿಂದ ರೈತರು ಹೆಚ್ಚಾಗಿ ಹೈನುಗಾರಿಕೆ ಯಲ್ಲಿ ತೊಡಗುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಸಲಹೆ ನೀಡಿದರು.

ನನ್ನ ಅಧಿಕಾರ ಅವಧಿಯಲ್ಲಿ ಸಂಘವನ್ನು ಅಭಿವೃದ್ಧಿಗೊಳಿಸುವ ಜೊತೆಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕ ವಾಗಿ ಒದಗಿಸುತ್ತೇನೆ. ಮತ್ತು ಎಲ್ಲಾ ನಿರ್ದೇ ಶಕರ ಸಹಕಾರ ಪಡೆದು ಉತ್ತಮ ಆಡಳಿತ ನಡೆಸಲು ಮುಂದಾಗುವುದಾಗಿ ಭರವಸೆ ನೀಡಿದರು.

ಕಾರ್ಯದರ್ಶಿ ಸಿ.ಎಂ.ಸೀನಪ್ಪ ಮಾತ ನಾಡಿ, ಸಂಘವನ್ನು ಅಭಿವೃದ್ಧಿಗೊಳಿಸಲು ನೂತನ ಅಧ್ಯಕ್ಷರು ಉತ್ಸಾಹದಿಂದ ಇದ್ದಾರೆ. ಅವರಿಗೆ ನಮ್ಮ ಸಹಕಾರ ನೀಡು ವುದರ ಜೊತೆಗೆ ಸಂಘ ಅಭಿವೃದ್ಧಿಗೊಳಿ ಸುತ್ತೇವೆ ಎಂದರು.ಈ ಸಂದರ್ಭ ಚುನಾವಣಾಧಿಕಾರಿ ಧರಣ , ಮುಖಂಡರಾದ ರಂಗಸ್ವಾಮಿ, ಶಿವ ರಾಮು, ನಾಡಗೌಡ ಜೋಗೀಗೌಡ, ರಾಜೇಶ್, ಸಂಘದ ಉಪಾಧ್ಯಕ್ಷ ಜಯರಾಮು, ನಿರ್ದೇಶಕರಾದ ನಟರಾಜು, ಚನ್ನಪ್ಪಾಜಿ, ಸಿ.ಕೆ.ಚನ್ನೇಗೌಡ, ಚಿಕ್ಕಣ್ಣ, ರಾಮಣ್ಣ, ರಾಜ ಶೇಖರ್, ಸಿ.ಎಂ.ವರುಣ್‍ಕುಮಾರ್, ವೆಂಕ ಟೇಶ್ ಸೇರಿದಂತೆ ಇತರರಿದ್ದರು.

Translate »