ಇಂದಿನಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ
ಮೈಸೂರು

ಇಂದಿನಿಂದ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

November 8, 2021

ಮೈಸೂರು, ನ.೭(ಎಂಟಿವೈ)- ಕೊರೊನಾ ಅಲೆಯ ಕಾರಣ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ, ಯುಕೆಜಿ) ತರಗತಿ ಗಳು ನಾಳೆ (ನವೆಂಬರ್ ೮) ಯಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ೨೫೩೬ ವಿದ್ಯಾರ್ಥಿ ಗಳು ಎಲ್‌ಕೆಜಿಗೂ, ೩೩೪೦ ವಿದ್ಯಾರ್ಥಿಗಳು ಯುಕೆಜಿ ತರಗತಿಗೂ ಹಾಜರಾಗುವ ಸಂಭವವಿದೆ.

ಮೈಸೂರು ಜಿಲ್ಲೆಯಲ್ಲಿ ೧,೮೭೬ ಸರ್ಕಾರಿ ಪ್ರಾಥಮಿಕ ಶಾಲೆ, ೧೩೨ ಅನುದಾನಿತ, ೫೮೨ ಅನುದಾನ ರಹಿತ ಹಾಗೂ ಇನ್ನಿತರ ೩೧ ಶಾಲೆಗಳು ಸೇರಿದಂತೆ ೨,೬೨೫ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ೧೨ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಯುತ್ತಿದ್ದರೆ, ೩೧ ಶಾಲೆಗಳಲ್ಲಿ ಎಸ್‌ಡಿಎಂಸಿ ವತಿಯಿಂದ ಪೂರ್ವ ಪ್ರಾಥಮಿಕ ತರಗತಿಗಳು ನಡೆಯುತ್ತಿವೆ. ಒಟ್ಟು ೭೨೦ ವಿದ್ಯಾರ್ಥಿಗಳು ನಾಳೆಯಿಂದ ೪೩ ಸರ್ಕಾರಿ ಶಾಲೆಗಳಿಗೆ ಹಾಜರಾಗಲು ಹೆಸರು ನೋಂದಾಯಿಸಿಕೊAಡಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಎಸ್‌ಎಟಿಎಸ್ ತಂತ್ರಾAಶದ ಮೂಲಕ ಎಲ್‌ಕೆಜಿಗೆ ೨೫೩೬ ಹಾಗೂ ಯುಕೆಜಿಗೆ ೩೩೪೦ ವಿದ್ಯಾರ್ಥಿಗಳನ್ನು ಪ್ರಾಥಮಿಕ ಪೂರ್ವ ಶಿಕ್ಷಣಕ್ಕೆ ಕಳು ಹಿಸಿಕೊಡಲು ಮಕ್ಕಳ ಪೋಷಕರು ಹೆಸರು ನೋಂದಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಯುವ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಮಕ್ಕಳ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ. ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಡಿಡಿಪಿಐ ರಾಮಚಂದ್ರ ಅರಸ್, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಸ್‌ಡಿಎಂಸಿ ಹಾಗೂ ಶಾಲೆ ಸಮಿತಿ ವತಿಯಿಂದ ಒಟ್ಟು ೪೩ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ನಡೆಯಲಿವೆ. ಈ ಶಾಲೆಗಳಲ್ಲಿ ತಲಾ ೩೬೦ರಂತೆ ಎಲ್‌ಕೆಜಿ, ಯುಕೆಜಿಗೆ ೭೨೦ ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿಗೆ ೨೫೩೬ ಹಾಗೂ ಯುಕೆಜಿಗೆ ೩,೩೪೦ ವಿದ್ಯಾರ್ಥಿಗಳನ್ನು ಹಾಜರಾಗಲಿದ್ದಾರೆ. ಶಿಕ್ಷಕರಿಗೆ ೭ ಸಾವಿರ, ಸಹಾಯಕರಿಗೆ ೫ ಸಾವಿರ ಮಾಸಿಕ ಗೌರವ ಧನ ನೀಡುವಂತೆ ಕೆಪಿಎಸ್‌ಕೆಗೆ ಸೂಚಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.

Translate »