ಡಾ.ವೆಂಕಟೇಶ್ ಸೇರಿ 42 ಐಎಎಸ್ ಅಧಿಕಾರಿಗಳ ವರ್ಗಾವಣೆ
ಮೈಸೂರು

ಡಾ.ವೆಂಕಟೇಶ್ ಸೇರಿ 42 ಐಎಎಸ್ ಅಧಿಕಾರಿಗಳ ವರ್ಗಾವಣೆ

February 14, 2021

ಮೈಸೂರು, ಫೆ.13(ಆರ್‍ಕೆ)-ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಜಿಲ್ಲಾ ಪಂಚಾಯ್ತಿ ಸಿಇಓ ಪಿ.ಎ. ಪರಮೇಶ, ಚಾಮರಾಜನಗರ ಡಿಸಿ ಡಾ. ಎಂ.ಆರ್.ರವಿ, ಮಂಡ್ಯ ಡಿಸಿ ಡಾ. ಎಂ.ವಿ. ವೆಂಕಟೇಶ, ಹಾಸನ ಜಿಪಂ ಸಿಇಓ ಡಿ. ಭಾರತಿ ಸೇರಿದಂತೆ ರಾಜ್ಯದ 42 ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾ ವಣೆ ಮಾಡಿ ಆದೇಶ ಹೊರಡಿಸಿದೆ.

ಮೈಸೂರು ಪಾಲಿಕೆ ಆಯುಕ್ತ ಗುರು ದತ್ ಹೆಗ್ಡೆಯವರನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ ಶಕರನ್ನಾಗಿ ವರ್ಗಾವಣೆ ಮಾಡಿದ್ದು, ಮೈಸೂರು ಮಹಾನಗರ ಪಾಲಿಕೆಗೆ ಆಯುಕ್ತರನ್ನು ನಿಯೋಜಿಸಿಲ್ಲ. ಮೈಸೂರು ಜಿಪಂ ಸಿಇಓ ಪರಮೇಶ್ ಅವರನ್ನು ಹಾಸನ ಜಿಪಂ ಸಿಇಓ ಆಗಿ ವರ್ಗಾವಣೆ ಮಾಡಿದ್ದು, ಅಲ್ಲಿದ್ದ ಡಿ.ಭಾರತಿ ಅವರನ್ನು ಕೃಷಿ ಮಾರುಕಟ್ಟೆ ನಿಗಮದ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಸಕಾಲ ಮಿಷನ್ ಅಡಿಷನಲ್ ಡೈರೆಕ್ಟರ್ ಆಗಿ ವರ್ಗಾಯಿಸಿದ್ದು, ಅವರ ಸ್ಥಳಕ್ಕೆ ಡಾ. ಬಿ.ಸಿ.ಸತೀಶ ಅವರನ್ನು ನಿಯೋ ಜಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶರನ್ನು ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರಾಗಿ ವರ್ಗಾ ಯಿಸಿದ್ದು, ಅವರ ಸ್ಥಳಕ್ಕೆ ಶ್ರೀಮತಿ ಎಸ್. ಅಶ್ವತಿ ಅವರನ್ನು ನಿಯೋಜಿಸಲಾಗಿದೆ.

Translate »