ಗುರುವಾರವೇ ವಿಧಾನ ಮಂಡಲ ಅಧಿವೇಶನಕ್ಕೆ ತೆರೆ
ಮೈಸೂರು

ಗುರುವಾರವೇ ವಿಧಾನ ಮಂಡಲ ಅಧಿವೇಶನಕ್ಕೆ ತೆರೆ

December 9, 2020

ಬೆಂಗಳೂರು, ಡಿ.8(ಕೆಎಂಶಿ)- ಪ್ರಸಕ್ತ ನಡೆಯುತ್ತಿರುವ ವಿಧಾನ ಮಂಡಲದ ಅಧಿ ವೇಶನವನ್ನು ಗುರುವಾರವೇ ಸಮಾಪ್ತಿ ಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬ ಶಾಸ ಕರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಳಿಗಾಲದ ಅಧಿವೇಶನವನ್ನು ಕೇವಲ 4 ದಿನಕ್ಕೆ ಸೀಮಿತಗೊಳಿಸಿದ್ಧಾರೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಗದಿಯಂತೆ ಅಧಿವೇಶನ ಡಿ.15ರವರೆಗೆ ನಡೆಯಬೇಕಿತ್ತು. ಆದರೆ, ಇದೀಗ 3 ದಿನಗಳ ಕಾಲ ಅಧಿವೇಶನವನ್ನು ಮೊಟಕುಗೊಳಿಸಿ ಇರುವ ಸಮಯದಲ್ಲೇ ಕೆಲವು ಪ್ರಮುಖ ಮಸೂದೆಗಳನ್ನು ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಮಳೆಗಾಲದ ಅಧಿವೇಶನದ ಸಂದರ್ಭದಲ್ಲೂ ಕೋವಿಡ್-19ರ ಸೋಂಕಿನ ನೆಪದಲ್ಲಿ ಅಧಿವೇಶನದ ಅವಧಿ ಮೊಟಕುಗೊಳಿಸಲಾಗಿತ್ತು.

Translate »