Tag: Vidhana Soudha

ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿರುವ ರೈತರು
ಮೈಸೂರು

ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿರುವ ರೈತರು

December 9, 2020

ಬೆಂಗಳೂರು, ಡಿ.8-ಇಂದು ಕೇಂದ್ರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಬೆಂಬಲ ವ್ಯಕ್ತವಾ ಯಿತು. ಬೆಂಗಳೂರಿನಲ್ಲಿ ರೈತ ಮತ್ತು ಕನ್ನಡಪರ ಸಂಘಟನೆ ಗಳು ಸೇರಿದಂತೆ ಇತರೆ ಸಂಘಟನೆಗಳು ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಿದವು. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ಇನ್ನೂ ಮೊದಲಾದವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆಗಳು ನಡೆದವು. ಬೆಳಗ್ಗೆಯಿಂದಶುರುವಾದ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಮುಕ್ತಾಯವಾಯಿತು. ನಾಳೆ ವಿಧಾನ ಸೌಧಕ್ಕೆ ರೈತರು ಮುತ್ತಿಗೆ ಹಾಕಲಿದ್ದಾರೆ. ಈ ಕುರಿತು ಮಾತನಾಡಿರುವ ಕೋಡಿಹಳ್ಳಿ…

ಗುರುವಾರವೇ ವಿಧಾನ ಮಂಡಲ ಅಧಿವೇಶನಕ್ಕೆ ತೆರೆ
ಮೈಸೂರು

ಗುರುವಾರವೇ ವಿಧಾನ ಮಂಡಲ ಅಧಿವೇಶನಕ್ಕೆ ತೆರೆ

December 9, 2020

ಬೆಂಗಳೂರು, ಡಿ.8(ಕೆಎಂಶಿ)- ಪ್ರಸಕ್ತ ನಡೆಯುತ್ತಿರುವ ವಿಧಾನ ಮಂಡಲದ ಅಧಿ ವೇಶನವನ್ನು ಗುರುವಾರವೇ ಸಮಾಪ್ತಿ ಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬ ಶಾಸ ಕರ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಳಿಗಾಲದ ಅಧಿವೇಶನವನ್ನು ಕೇವಲ 4 ದಿನಕ್ಕೆ ಸೀಮಿತಗೊಳಿಸಿದ್ಧಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಗದಿಯಂತೆ ಅಧಿವೇಶನ ಡಿ.15ರವರೆಗೆ ನಡೆಯಬೇಕಿತ್ತು. ಆದರೆ, ಇದೀಗ 3 ದಿನಗಳ ಕಾಲ ಅಧಿವೇಶನವನ್ನು ಮೊಟಕುಗೊಳಿಸಿ…

ವಿಧಾನಸಭೆಯಲ್ಲಿ 7927 ಕೋಟಿ ರೂ. ಪೂರಕ  ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪ
ಮೈಸೂರು

ವಿಧಾನಸಭೆಯಲ್ಲಿ 7927 ಕೋಟಿ ರೂ. ಪೂರಕ ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪ

October 11, 2019

ಬೆಂಗಳೂರು: 7927.23 ಕೋಟಿ ರೂಪಾಯಿ 2019-20ನೇ ಸಾಲಿನ ಪೂರಕ ಅಂದಾಜಿನ ಎರಡನೇ ಕಂತನ್ನು ಅಂಗೀಕರಿಸುವಂತೆ ಹಣಕಾಸು ಖಾತೆಯನ್ನು ಹೊಂದಿ ರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ದಿಂದ ಅರ್ಹ ರೈತರಿಗೆ ಸಹಾಯ ಧನ ನೀಡಲು 1000 ಕೋಟಿ ರೂ. ಜೊತೆಗೆ 489.14 ಕೋಟಿ ರೂಪಾಯಿ ಮರು ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರ ಜೊತೆಗೆ ಯೋಜನೆ ಅನುಷ್ಠಾನಕ್ಕಾಗಿ 1500 ಕೋಟಿ ರೂಗಳನ್ನ ಒದಗಿಸಲಾಗಿದೆ….

ಆಪರೇಷನ್ ಕಮಲ ಮುಂದುವರೆದಿದೆ
ಮೈಸೂರು

ಆಪರೇಷನ್ ಕಮಲ ಮುಂದುವರೆದಿದೆ

January 26, 2019

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವನ್ನು ಉರುಳಿಸುವ ಸಲುವಾಗಿ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಬಿಜೆಪಿ ಮುಂದು ವರೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕೂಡ ಕಾಂಗ್ರೆಸ್‍ನ ಶಾಸಕರೊಬ್ಬರಿಗೆ ಗಿಫ್ಟ್ ಎಲ್ಲಿಗೆ ಕಳುಹಿಸಬೇಕು ಎಂದು ಕರೆ ಮಾಡಿದ್ದರು. ಇದು ಅಂತಿಂತಹ ಗಿಫ್ಟ್ ಅಲ್ಲ, ಕಳೆದ ಬಾರಿಗಿಂತ ದೊಡ್ಡ ಮೊತ್ತದ್ದಾ ಗಿದೆ. ಅದನ್ನು ನೀವು ಕೇಳಿದರೆ…

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!
ಮೈಸೂರು

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!

July 4, 2018

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಸಾಲ ಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದ ವೇಳೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಶಾಸಕರು ಮೊಬೈಲ್ ವೀಕ್ಷಣೆ ತಲ್ಲೀನರಾಗಿದ್ದುದು ಕಂಡುಬಂತು. ರೈತರ ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡುತ್ತಿದ್ದರು. ಹೆಚ್.ಡಿ. ರೇವಣ್ಣ ಮಧ್ಯೆ ಎದ್ದು ನಿಂತರಾದರೂ, ಏನೂ ಮಾತನಾಡದೇ ಹಾಗೇ ಕುಳಿತುಕೊಂಡರು. ಮೊದಲ ಬಾರಿಗೆ ಶಾಸಕರಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ತಾವು ಭಾಗವಹಿಸಿರುವ ಚೊಚ್ಚಲ ಅಧಿವೇಶನದ…

ವಿಧಾನಸಭೆಯ ಕೊನೇ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್
ಮೈಸೂರು

ವಿಧಾನಸಭೆಯ ಕೊನೇ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್

July 4, 2018

ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಕೊನೇ ಸಾಲಿಗೆ ಶಿಫ್ಟ್ ಆಗಿದ್ದಾರೆ. ಸೋಮವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಿಂದೆ ಕೂತು ಇರಿಸು ಮುರಿಸು ಅನುಭವಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ವಿಧಾನಸಭೆಯಲ್ಲಿ ಲಾಸ್ಟ್ ಬೆಂಚ್‍ಗೆ ಶಿಫ್ಟ್ ಆಗಿದ್ದಾರೆ. ಸಿದ್ದ ರಾಮಯ್ಯ ಸೋಮವಾರ ಕೂಡ ವಿಧಾನ ಸಭೆಯಲ್ಲಿ 2ನೇ ಸಾಲಿನಲ್ಲಿ ಕುಳಿತಿದ್ದರು. ಈ ಸಂಬಂಧ ಮಾಧ್ಯಮಗಳು ವರದಿ ಮಾಡಿತ್ತು. ಇದರಿಂದ ಮುಜು ಗರಕ್ಕೆ ತುತ್ತಾದ ಸಿದ್ದರಾಮಯ್ಯ ಇವತ್ತು ಹೋಗಿ ಕೊನೆಯ ಸಾಲಿನಲ್ಲಿ ಕುಳಿತ್ತಿ ದ್ದಾರೆ ಎನ್ನಲಾಗಿದೆ….

ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ
ಅಂಕಣಗಳು, ಪ್ರಚಲಿತ

ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ

June 14, 2018

ಮಾನವೀಯತೆ ಜೊತೆಗೆ ಹೆಂಗರುಳು ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಬಡವರು-ಕಷ್ಟದಲ್ಲಿರುವವರನ್ನು ಕಂಡರೆ ಮನ ಕರಗಿ ಕಣ್ಣೀರು ಬರುತ್ತೆ. ದೇಹಿ ಎಂದು ಬಂದವರಿಗೆ ಕೈಲಾಗುವ ನೆರವು ನೀಡುವುದು, ಅಧಿಕಾರದಲ್ಲಿದ್ದಷ್ಟು ಕಾಲ ಜನ ಮೆಚ್ಚುವ ಕೆಲಸ ಮಾಡುವ ಕಳಕಳಿ ಇದ್ದಂತೆ ಕಾಣುತ್ತಿದೆ. ಗ್ರಾಮೀಣ ಜನರ ಜೀವನ ಹಾಗೂ ನಾಡಿ-ಮಿಡಿತಬಲ್ಲ ಅವರಿಗೆ ಸಹಾಯ ಮಾಡುವ ಹೃದಯ ಶ್ರೀಮಂತಿಕೆಯು ಇದೆ. ಶಕ್ತಿ ಕೇಂದ್ರವೆಂದು ಕರೆಯುವ ವಿಧಾನಸೌಧ ಹಾಗೂ ಅದರ ಸುತ್ತ ಮುತ್ತ ಇರುವ ಸರ್ಕಾರಿ ಕಛೇರಿ ಗಳು ಭ್ರಷ್ಟಾಚಾರದ ಗಂಗೋತ್ರಿ ಇದ್ದಂತೆ. ವಿಧಾನಸೌಧ ಒಂದು…

ಕುಮಾರಸ್ವಾಮಿಗೆ ವಿಶ್ವಾಸ ಮತ
ಮೈಸೂರು

ಕುಮಾರಸ್ವಾಮಿಗೆ ವಿಶ್ವಾಸ ಮತ

May 26, 2018

ಬೆಂಗಳೂರು:  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿದರು. ಆರು ತಿಂಗಳ ಮಟ್ಟಿಗೆ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ರಾಜ್ಯಪಾಲರು, ಕುಮಾರಸ್ವಾಮಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ಮುಖ್ಯಮಂತ್ರಿಯವರ ವಿಶ್ವಾಸ ಮತ ಮಂಡನೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ತಮ್ಮ ಪಕ್ಷದ ಸದಸ್ಯರೊಟ್ಟಿಗೆ…

ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ, ಕಾಂಗ್ರೆಸ್ ಮುಖಂಡರೇ ಸರ್ಕಾರ ರಚನೆ ಪ್ರಸ್ತಾಪ ಮುಂದಿಟ್ಟರು…
ಮೈಸೂರು

ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ, ಕಾಂಗ್ರೆಸ್ ಮುಖಂಡರೇ ಸರ್ಕಾರ ರಚನೆ ಪ್ರಸ್ತಾಪ ಮುಂದಿಟ್ಟರು…

May 26, 2018

ಬೆಂಗಳೂರು: ಸಂದಿಗ್ದ ಸನ್ನಿವೇಶದಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ಚುನಾವಣೆಗೂ ಮುನ್ನ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಿ, ರಾಜ್ಯಕ್ಕೆ ಮತ್ತು ನನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್‍ಗೆ ಇಡೀ ರಾಜ್ಯದಲ್ಲಿ ಒಳ್ಳೆ ಹೆಸರು ತಂದುಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಬಡವರು ಮತ್ತು ರೈತರ ಕಲ್ಯಾಣಕ್ಕೆ ನನ್ನ ಸರ್ಕಾರ ಸದಾ ಸಿದ್ಧ. ಮೈತ್ರಿ ಕಾಂಗ್ರೆಸ್ ನಾಯಕರೊಟ್ಟಿಗೆ ಚರ್ಚೆ ಮಾಡಿ, ರೈತರ ಸಾಲ ಮನ್ನಾ ಮಾಡುವುದಾಗಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಮತ್ತೆ ಪುನರುಚ್ಛಾರ ಮಾಡಿದರು. ಅಧಿಕಾರಕ್ಕೆ ಬರಲು ಕಾರಣಕರ್ತರಾದ ಕಾಂಗ್ರೆಸ್…

Translate »