ವಿಧಾನಸಭೆಯ ಕೊನೇ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್
ಮೈಸೂರು

ವಿಧಾನಸಭೆಯ ಕೊನೇ ಸಾಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಶಿಫ್ಟ್

July 4, 2018

ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಕೊನೇ ಸಾಲಿಗೆ ಶಿಫ್ಟ್ ಆಗಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಿಂದೆ ಕೂತು ಇರಿಸು ಮುರಿಸು ಅನುಭವಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ವಿಧಾನಸಭೆಯಲ್ಲಿ ಲಾಸ್ಟ್ ಬೆಂಚ್‍ಗೆ ಶಿಫ್ಟ್ ಆಗಿದ್ದಾರೆ. ಸಿದ್ದ ರಾಮಯ್ಯ ಸೋಮವಾರ ಕೂಡ ವಿಧಾನ ಸಭೆಯಲ್ಲಿ 2ನೇ ಸಾಲಿನಲ್ಲಿ ಕುಳಿತಿದ್ದರು. ಈ ಸಂಬಂಧ ಮಾಧ್ಯಮಗಳು ವರದಿ ಮಾಡಿತ್ತು. ಇದರಿಂದ ಮುಜು ಗರಕ್ಕೆ ತುತ್ತಾದ ಸಿದ್ದರಾಮಯ್ಯ ಇವತ್ತು ಹೋಗಿ ಕೊನೆಯ ಸಾಲಿನಲ್ಲಿ ಕುಳಿತ್ತಿ ದ್ದಾರೆ ಎನ್ನಲಾಗಿದೆ. ಶಾಸಕರಾಗಿದ್ದಾಗ ರಮೇಶ್ ಕುಮಾರ್ ಈ ಹಿಂದೆ ಕುಳಿತು ಕೊಳ್ಳುತ್ತಿದ್ದ ಆಸನದಲ್ಲಿ ಸಿದ್ದರಾಮಯ್ಯ ಹೋಗಿ ಆಸೀನರಾಗಿದ್ದಾರೆ. ಆದರೂ ಸಿದ್ದರಾಮಯ್ಯಗೆ ಡಿಮ್ಯಾಂಡ್ ಏನೂ ಕಮ್ಮಿ ಆಗಲಿಲ್ಲ. ಕಾಂಗ್ರೆಸ್ ಶಾಸಕರು ಸಿದ್ದ ರಾಮಯ್ಯರನ್ನು ಸುತ್ತುವರಿದಿದ್ದ ದೃಶ್ಯ ವಿಧಾನಸಭೆಯಲ್ಲಿ ಕಂಡು ಬಂದಿತ್ತು.

Translate »