ಸಚಿವ ಜಿ.ಟಿ.ದೇವೇಗೌಡ ಮಹತ್ವಾಕಾಂಕ್ಷೆಯ ಉಂಡುವಾಡಿ ಕುಡಿಯುವ ನೀರು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ನಿರೀಕ್ಷೆ
ಮೈಸೂರು

ಸಚಿವ ಜಿ.ಟಿ.ದೇವೇಗೌಡ ಮಹತ್ವಾಕಾಂಕ್ಷೆಯ ಉಂಡುವಾಡಿ ಕುಡಿಯುವ ನೀರು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ನಿರೀಕ್ಷೆ

July 4, 2018

ಮೈಸೂರು:  ಮೈಸೂರು ನಗರ ಸೇರಿದಂತೆ ಸಮೀಪದ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಉಂಡುವಾಡಿ ಬಳಿಯ ಉದ್ದೇಶಿತ ಯೋಜನೆ, ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಈ ಮಹತ್ವದ ಯೋಜನೆ ಅನುಷ್ಠಾನ ಕ್ಕಾಗಿ ಹಿಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಒತ್ತಾಸೆ ಮೇರೆಗೆ, ಬಜೆಟ್‍ನಲ್ಲಿ ಸೇರ್ಪಡೆಯಾಗಿದೆ. ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಜು.5ರಂದು ಮಂಡಿಸಲಿರುವ ಬಜೆಟ್ ನಲ್ಲಿ ಯೋಜನೆ ಸಂಬಂಧ ಪ್ರಸ್ತಾಪಿಸ ಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ರಾಜಧಾನಿ ಬೆಂಗಳೂರಿನಿಂದ ಕೇವಲ 140 ಕಿಮೀ ಅಂತರದಲ್ಲಿರುವ ಪಾರಂ ಪರಿಕ ನಗರ ಮೈಸೂರಿನಲ್ಲಿ ಹಲವು ಪ್ರವಾಸ ಕ್ಷೇತ್ರಗಳು, ಶೈಕ್ಷಣಿಕ ಕೇಂದ್ರಗಳು, ಕೈಗಾರಿಕೆ ಗಳ ಸಂಸ್ಥೆಗಳಿವೆ. ಉತ್ತಮವಾದ ಹೆದ್ದಾರಿ, ರೈಲ್ವೇ ಹಾಗೂ ವಿಮಾನ ಸಂಪರ್ಕ ವ್ಯವಸ್ಥೆಯನ್ನು ಒಳಗೊಂಡಿದೆ. ನಗರ ಸೇರಿದಂತೆ ಸುತ್ತಮುತ್ತಲಿನÀ 92 ಹಳ್ಳಿಗಳಲ್ಲಿ ಸುಮಾರು 16 ಲಕ್ಷ ಜನ ವಾಸಿಸುತ್ತಿದ್ದಾರೆ. ನಗರಾಭಿವೃದ್ಧಿ ಯೋಜನಾ ನಕ್ಷೆಯನ್ವಯ ಮಧ್ಯಂತರ ಯೋಜನಾ ವರ್ಷ 2036ಕ್ಕೆ 24 ಲಕ್ಷ ಹಾಗೂ ಅಂತಿಮ ಯೋಜನಾ ವರ್ಷವಾದ 2051ರ ವೇಳೆಗೆ 34.50 ಲಕ್ಷ ಜನಸಂಖ್ಯೆ ನಿರೀಕ್ಷಿಸಲಾಗಿದೆ. ಈ ಹಂತದಲ್ಲಿ 750 ಎಂ.ಎಲ್.ಡಿ ಪ್ರಮಾಣದ ಕುಡಿಯುವ ನೀರಿನ ಅವಶ್ಯತೆ ಇರುತ್ತದೆ.

ಸದ್ಯ ಕಾವೇರಿ ನದಿಯ ಮೂರು ಹಾಗೂ ಕಬಿನಿ ನದಿಯ ಒಂದು ಮೂಲದ ಯೋಜನೆಯಿಂದ ಒಟ್ಟು 300 ಎಂ.ಎಲ್.ಡಿ ಸಾಮಥ್ರ್ಯದ ನೀರು ಪೂರೈಸಲಾಗುತ್ತಿದೆ. ಈ ಮೂಲಗಳಿಂದ 2051ರ ವೇಳೆಗೆ 150 ಎಂಎಲ್‍ಡಿ ಹೆಚ್ಚುವರಿ ನೀರು ಪೂರೈಕೆ ಮಾಡಬಹುದು. ಇನ್ನೂ ಅಗತ್ಯ ವಾಗುವ 150 ಎಂಎಲ್‍ಡಿ ನೀರು ಪೂರೈಕೆಗೆ ಉಂಡುವಾಡಿ ಬಳಿಯ ಉದ್ದೇಶಿತ ಯೋಜನೆ ಅವಶ್ಯಕವಾಗಿದೆ. ಮೊದಲ ಹಂತದಲ್ಲಿ 150 ಸೇರಿದಂತೆ ಒಟ್ಟು 300 ಎಂಎಲ್‍ಡಿ ಪ್ರಮಾಣದ ನೀರು ಪೂರೈಕೆಯ ಯೋಜನೆಯ ಪ್ರಸ್ತಾವನೆ ಇದೀಗ ಬಜೆಟ್ ಸೇರಿದೆ. ಅಲ್ಲದೆ ಯೋಜನೆಯಡಿ 2.1 ಟಿ.ಎಂ.ಸಿ ಪ್ರಮಾಣದ ನೀರು ಬಳಕೆಗೆ ಜಲಸಂಪನ್ಮೂಲ ಇಲಾಖೆ ಕಾರ್ಯ ದರ್ಶಿಗಳು ಅನುಮೋದನೆ ದೊರೆತಿದೆ.

ಕೆಆರ್‍ಎಸ್ ಅಣೆಕಟ್ಟೆ ಹಿನ್ನೀರಿನ ಹಳೇ ಉಂಡವಾಡಿ ಬಳಿ ಮೂಲಸ್ಥಾವರದ ನಿರ್ಮಾಣ, ಯಂತ್ರಗಾರ ಅಳವಡಿಕೆ, ಬೀಚನ ಕುಪ್ಪೆ ಬಳಿ ಜಲಶುದ್ಧೀಕರಣ ಘಟಕದ ನಿರ್ಮಾಣ, ನೀರು ಸರಬರಾಜು ಕೊಳವೆ ಮಾರ್ಗಗಳು, ಅಗತ್ಯ 122 ಎಕರೆ ಜಮೀನಿನ ಭೂಸ್ವಾಧೀನ ಸೇರಿದಂತೆ ಒಟ್ಟು ಯೋಜನೆಯ ಅಂದಾಜು ಮೊತ್ತ 545 ಕೋಟಿ ರೂ.ಗಳಾಗಿದ್ದು, ಈ ಸಂಬಂಧ ವಿಸ್ತ್ರøತ ಯೋಜನಾ ವರದಿಯನ್ನು 2015ರಲ್ಲಿ ಜಲ ಮಂಡಳಿಯ 259ನೇ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

Translate »