ಹಾಲಿ ಕುಮಾರಸ್ವಾಮಿಯವರ 12 ವರ್ಷದ ಹಿಂದಿನ ಗ್ರಾಮ ವಾಸ್ತವ್ಯದ ಭರವಸೆ ಈಡೇರುವ ನಿರೀಕ್ಷೆಯಲ್ಲಿ ಬಡ ಜೀವಗಳು
ಮೈಸೂರು

ಹಾಲಿ ಕುಮಾರಸ್ವಾಮಿಯವರ 12 ವರ್ಷದ ಹಿಂದಿನ ಗ್ರಾಮ ವಾಸ್ತವ್ಯದ ಭರವಸೆ ಈಡೇರುವ ನಿರೀಕ್ಷೆಯಲ್ಲಿ ಬಡ ಜೀವಗಳು

July 4, 2018

ಮೈಸೂರು:  ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ತಾವು ನೀಡಿದ್ದ ಭರವಸೆಗಳನ್ನು ಈಗಲಾದರೂ ಈಡೇರಿಸುವರೇ ಎಂದು ಮೈಸೂರಿನ ನೂರಾರು ಕುಟುಂಬ ಕಾದು ಕುಳಿತಿವೆ.

2006ರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ಮೈಸೂರಿನ ಮೇದರ್ ಬ್ಲಾಕ್‍ನ ಕೊಳಗೇರಿಯಲ್ಲಿರುವ ಲಕ್ಷ್ಮಮ್ಮ ಅವರ ಗುಡಿಸಲಲ್ಲಿ ವಾಸ್ತವ್ಯ ಹೂಡಿದ್ದರು. ಮುದ್ದೆ, ಸೊಪ್ಪಿನ ಸಾರು, ವಡೆ ಮತ್ತು ಪಾಯಸ ಸವಿದಿದ್ದ ಅವರು, ಅಲ್ಲಿನ ಜನರ ಸಮಸ್ಯೆ ಗಳನ್ನ ಆಲಿಸಿ, ಗುಡಿಸಲಿನಲ್ಲಿ ವಾಸ ಮಾಡುವ ಸುಮಾರು 140 ಕುಟುಂಬಗಳಿಗೆ ಮನೆ ಕೊಡಿಸುವ ಭರವಸೆ ನೀಡಿದ್ದರು. ಹೀಗೆಯೇ ರಾಜ್ಯದ ಹಲವು ಗ್ರಾಮಗಳಲ್ಲಿ ರಾತ್ರಿ ವಾಸ್ತವ್ಯ ಹೂಡಿ, ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದರು. ಆದರೆ ಈ ಸಂಬಂಧ ಕ್ರಮ ಕೈಗೊಳ್ಳುವ ಮುನ್ನವೇ ಸಮ್ಮಿಶ್ರ ಸರ್ಕಾರ ಮುರಿದುಬಿತ್ತು. ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಮುಖ್ಯಮಂತ್ರಿಯಾಗಿ, ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಈಗಲಾದರೂ ದಶಕದ ಹಿಂದೆ ತಾವೇ ನೀಡಿದ್ದ ಭರವಸೆಯನ್ನು ಈಡೇರಿಸುವರೆಂಬ ವಿಶ್ವಾಸದಲ್ಲಿ ಜನರಿದ್ದಾರೆ.

ಕುಮಾರಸ್ವಾಮಿ ಅವರಿಗೆ ಕೈಲಾದ ಮಟ್ಟಿಗೆ ಊಟೋಪಚಾರ ಮಾಡಿದ್ದ ಲಕ್ಷ್ಮಮ್ಮ ಅವರಲ್ಲಿರುವ ವಿಶ್ವಾಸ ಕಿಂಚಿತ್ತೂ ಕುಂದಿಲ್ಲ. ನಮ್ಮ ಗುಡಿಸಲಲ್ಲಿ ಉಳಿದುಕೊಂಡಾಗ ತುಂಬಾ ಸಂತೋಷ ವಾಗಿತ್ತು. ಆಗ ವಾಸಕ್ಕೆ ಮನೆ, ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡು ವಂತೆ ಮನವಿ ಮಾಡಿಕೊಂಡಿದ್ದೆವು. ಗುಡಿಸಲಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸ್ವಲ್ಪ ದಿನಗಳ ನಂತರ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿ ದರು. ಆದರೂ ನೆರವು ನೀಡುತ್ತಿದ್ದರೇನೋ ನಾವೇ ಭೇಟಿಯಾಗ ಲಿಲ್ಲ. ಆದರೆ ಮತ್ತೆ ಅವರು ಮುಖ್ಯಮಂತ್ರಿ ಯಾಗುತ್ತಾರೆಂಬ ನಿರೀಕ್ಷೆ ನಿಜವಾಗಿದೆ. ಇನ್ನು 15 ದಿನಗಳಲ್ಲಿ ಅವರನ್ನು ಕಂಡು, ಸಹಾಯ ಕೇಳುತ್ತೇವೆಂದು ಲಕ್ಷ್ಮಮ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Translate »