ಆಪರೇಷನ್ ಕಮಲ ಮುಂದುವರೆದಿದೆ
ಮೈಸೂರು

ಆಪರೇಷನ್ ಕಮಲ ಮುಂದುವರೆದಿದೆ

January 26, 2019

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವನ್ನು ಉರುಳಿಸುವ ಸಲುವಾಗಿ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಬಿಜೆಪಿ ಮುಂದು ವರೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕೂಡ ಕಾಂಗ್ರೆಸ್‍ನ ಶಾಸಕರೊಬ್ಬರಿಗೆ ಗಿಫ್ಟ್ ಎಲ್ಲಿಗೆ ಕಳುಹಿಸಬೇಕು ಎಂದು ಕರೆ ಮಾಡಿದ್ದರು. ಇದು ಅಂತಿಂತಹ ಗಿಫ್ಟ್ ಅಲ್ಲ, ಕಳೆದ ಬಾರಿಗಿಂತ ದೊಡ್ಡ ಮೊತ್ತದ್ದಾ ಗಿದೆ. ಅದನ್ನು ನೀವು ಕೇಳಿದರೆ ಬೆಚ್ಚಿ ಬೀಳುತ್ತೀರಿ.

ಸಮಯ ಬಂದಾಗ ಎಲ್ಲವನ್ನೂ ಬಹಿ ರಂಗ ಪಡಿಸುತ್ತೇನೆ. ಪಾಪ ಆ ಶಾಸಕರು ಹೆದರಿ ನನ್ನ ಬಳಿ ಬಂದು ಬಿಜೆಪಿ ಆಫರ್ ಬಗ್ಗೆ ವಿವರ ನೀಡಿದ್ದಲ್ಲದೆ, ಕರೆ ಮಾಡಿ ದವರಿಗೆ ಗಿಫ್ಟ್ ನಿರಾಕರಿಸಿ, ನಾನು ಮಾರಾಟದ ವಸ್ತು ಅಲ್ಲ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಆಪರೇಷನ್ ಕಮಲ ಮಾಡು ವುದು ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಚಾಳಿಯಾಗಿದೆ, 2008ರಿಂದಲೂ ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಅದನ್ನು ಈಗಲೂ ಮುಂದುವರಿಸಿದ್ದಾರೆ. ಅವರ ಕೆಲಸ ಅವರು ಮಾಡಿಕೊಳ್ಳಲಿ, ನಾನು ಬೇಡ ಎನ್ನುವುದಿಲ್ಲ.

ಫೆಬ್ರವರಿ 8ರಂದು 2019-20ನೇ ಸಾಲಿನ ಮುಂಗಡಪತ್ರವನ್ನು ಮಂಡಿಸ ಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾನು ಆ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನನ್ನ ಸರ್ಕಾರಕ್ಕೆ ಧಕ್ಕೆ ಇಲ್ಲ, ಇವರ ಆಪರೇಷನ್‍ಗೂ ಹೆದರುವುದಿಲ್ಲ ಎಂದು ಬೆಳಿಗ್ಗೆ ರಾಜ್ಯಪಾಲ ವಜೂಭಾಯ್ ವಾಲಾ ಅವರನ್ನು ಭೇಟಿ ಮಾಡಿ ಫೆಬ್ರವರಿ 6ರಂದು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡು ವಂತೆ ಆಹ್ವಾನ ನೀಡಿ ಬಂದಿದ್ದೇನೆ.

Translate »