ಸಾಲ ಯೋಜನೆ ಜಾರಿ
ಮೈಸೂರು

ಸಾಲ ಯೋಜನೆ ಜಾರಿ

January 26, 2019

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನವರಲ್ಲದೆ ಎಲ್ಲಾ ಬಗೆಯ ಬೀದಿ ಬದಿ ವ್ಯಾಪಾರಿ ಗಳಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಕಲ್ಪಿಸುವ ಯೋಜನೆ ಜಾರಿಗೆ ಬಂದಿದೆ. ರೈತ ಮುಖಂಡರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್, ಇದುವರೆಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಸಾಲ ಎಂಬುದೂ ಸೇರಿದಂತೆ ಕೆಲವು ಷರತ್ತುಗಳಲ್ಲಿ ಸಡಿಲಿಕೆ ಮಾಡಲಾಗಿದೆ ಎಂದರು.

ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳು ಆಧಾರ್ ಕಾರ್ಡ್, ತಾವು ವ್ಯಾಪಾರ ನಡೆಸುತ್ತಿರುವ ಸ್ಥಳದ ಫೋಟೋ ಮತ್ತು ಸ್ಥಳೀಯ ಸಂಸ್ಥೆ ಗುರುತಿನ ಚೀಟಿ ನೀಡಿ, ಡಿಸಿಸಿ ಬ್ಯಾಂಕ್ ಇಲ್ಲವೆ, ಸರ್ಕಾರ ನಿಗದಿಪಡಿಸಿದ ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದುಕೊಳ್ಳಬಹುದು. ಒಂದು ವೇಳೆ ನೋಂದಾ ಯಿಸದ ವ್ಯಾಪಾರಿಗಳಿದ್ದಲ್ಲಿ ಅಂತಹವರಿಗೂ ಬ್ಯಾಂಕ್ ಅಧಿಕಾರಿಗಳು, ವ್ಯಾಪಾರದ ಸ್ಥಳ ಪರಿಶೀಲಿಸಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಬಹುದು. ವ್ಯಾಪಾರಿಗಳು ತಾವು ಸಾಲ ಪಡೆಯಲಿಚ್ಛಿಸುವ ಸಹಕಾರಿ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ತೆರೆದು ವಹಿವಾಟು ನಡೆಸಬೇಕು. ಇಂತಹವರಿಗೆ ಸರ್ಕಾರ ನಿಗದಿಪಡಿಸಿದ ಗುರಿಯವರೆಗೂ ಅವರು ಸಾಲ ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಸರ್ಕಾರಿ ಆದೇಶದ ಗೊಂದಲದ ಕಾರಣ ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಪಾಟು ಆದೇಶ ಹೊರಡಿಸಿ, ಸರಳೀಕರಿಸಿ ಜಾರಿ ಗೊಳಿಸಲಾಗಿದೆ ಎಂದು ಕಾಶೆಂಪೂರ್ ಇದೇ ಸಂದರ್ಭ ದಲ್ಲಿ ತಿಳಿಸಿದರು. ಮೊದಲ ಹಂತದಲ್ಲಿ ರಾಜ್ಯದ ವಿವಿಧ ನಗರ-ಪಟ್ಟಣಗಳಲ್ಲಿ 50,000 ಬೀದಿ ಬದಿ ವ್ಯಾಪಾರಿಗಳಿಗೆ 10,000 ರೂ.ವರೆಗೂ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆ ಅನುಷ್ಠಾನ ನಂತರ ಅದರ ಪ್ರಗತಿ ಪರಿಶೀಲಿಸಿ ಮತ್ತಷ್ಟು ವ್ಯಾಪಾರಿಗಳಿಗೆ ಸೌಲಭ್ಯ ವಿಸ್ತರಣೆ ಮಾಡಲಾ ಗುವುದು. ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಮೊಬೈಲ್ ಬ್ಯಾಂಕ್ ಅನ್ನು ತೆರೆಯಲಾಗುತ್ತಿದೆ ಎಂದರು.

Translate »