ಪಂಚಲಿಂಗ ದರ್ಶನ; ಸ್ಥಳೀಯರಿಗಷ್ಟೇ ಅವಕಾಶ
ಮೈಸೂರು

ಪಂಚಲಿಂಗ ದರ್ಶನ; ಸ್ಥಳೀಯರಿಗಷ್ಟೇ ಅವಕಾಶ

December 9, 2020

ಮೈಸೂರು, ಡಿ.8(ವೈಡಿಎಸ್)- ತಲಕಾಡಿನ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಪ್ರವೇಶ ನೀಡಲು ಜಿಲ್ಲಾಧಿ ಕಾರಿ ರೋಹಿಣಿ ಸಿಂಧೂರಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಚಲಿಂಗ ದರ್ಶನಕ್ಕೆ ತಲ ಕಾಡು, ಬಿ.ಶೆಟ್ಟಹಳ್ಳಿ, ಹೊಳೆಸಾಲು ಗ್ರಾಪಂ ವ್ಯಾಪ್ತಿ ಸ್ಥಳೀಯರೇ 35 ಸಾವಿರ ಜನರು ಇರುವುದರಿಂದ ಹೊರಗಿನವರಿಗೆ ಪ್ರವೇಶ ಇರುವುದಿಲ್ಲ. ಈ ಸ್ಥಳೀಯರಿಗೂ ಮಧ್ಯಾಹ್ನ 3 ಗಂಟೆಯೊಳಗೆ ಮಾತ್ರ ದರ್ಶನಕ್ಕೆ ಅವ ಕಾಶ ನೀಡಲು ತೀರ್ಮಾನಿಸಲಾಯಿತು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಗ್ರಾಪಂ ಚುನಾ ವಣೆಗೆ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯ ಇರುವುದರಿಂದ ಪಂಚಲಿಂಗ ದರ್ಶನಕ್ಕೆ ಹೆಚ್ಚು ಸಿಬ್ಬಂದಿ ನಿಯೋಜಿಸುವುದು ಕಷ್ಟ. ಆದ್ದರಿಂದ ಪಂಚಲಿಂಗ ದರ್ಶನಕ್ಕೆ 2 ಪಾಳಿ ಯಲ್ಲಿ ಮಾತ್ರ ಸಿಬ್ಬಂದಿ ನಿಯೋಜಿಸಲಾಗು ವುದು. ಮಧ್ಯಾಹ್ನ 3 ಗಂಟೆಯೊಳಗೆ ಬಂದ ವರಿಗೆ ಪ್ರವೇಶಾವಕಾಶ ನೀಡಿದರೆ ದರ್ಶನ ಮುಗಿಸಿ ಹೊರಬರುವ ವೇಳೆಗೆ ಸಂಜೆ ಯಾಗಿರುತ್ತದೆ ಎಂದರು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಮೇರೆಗೆ ಪ್ರತಿ ದಿನ 1000 ಜನರಿಗೆ ಡಿ.14ರಂದು 1500 ಜನರಿಗೆ ಅವಕಾಶ ಕಲ್ಪಿಸಲಾಗುವುದು. ದರ್ಶ ನಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್ -19ರ ಆರ್‍ಟಿಪಿಸಿಆರ್ ಪರೀಕ್ಷೆ ವರದಿ ತರಬೇಕು ಎಂದರು. ಭದ್ರತಾ ದೃಷ್ಟಿಯಿಂದ 9 ಕಡೆ ಚೆಕ್‍ಪೆÇೀಸ್ಟ್ ತೆರೆಯಲಾಗುವುದು. ಭಕ್ತಾದಿಗಳು ನದಿಗೆ ಇಳಿಯಬಾರದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ಅಮರನಾಥ್ ಮಾತನಾಡಿ, ಆರೋಗ್ಯ ಇಲಾಖೆ ವೈದ್ಯರನ್ನೊಳಗೊಂಡ 10 ಜನರ ತಂಡ ನಿಯೋಜಿಸಿದ್ದು, ಎಲ್ಲಾ ದೇವ ಸ್ಥಾನಗಳ ಬಳಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. 5 ಆಂಬುಲೆನ್ಸ್, 2 ಅಗ್ನಿ ಶಾಮಕ ದಳದ ವಾಹನ ಇರಲಿವೆ. ದೋಣಿ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು. ಉಪವಿಭಾಗಾಧಿಕಾರಿ ಎನ್.ಸಿ.ವೆಂಕಟರಾಜು, ತಿ.ನರಸೀಪುರ ತಹಸಿಲ್ದಾರ್ ನಾಗೇಶ್ ಇದ್ದರು.

Translate »