ಕನ್ನಡ  ಪ್ರೇಮವನ್ನು ಉದ್ದೀಪನಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ: ಡಾ.ಪ್ರಭಾಕರ ಶಿಶಿಲ
ಮೈಸೂರು

ಕನ್ನಡ ಪ್ರೇಮವನ್ನು ಉದ್ದೀಪನಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ: ಡಾ.ಪ್ರಭಾಕರ ಶಿಶಿಲ

March 24, 2021

ಮೈಸೂರು, ಮಾ.23 – ಕನ್ನಡ ಪ್ರೇಮವನ್ನು ಉದ್ಧೀಪನಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಲೇಖಕ ರಾದ ಡಾ.ಬಿ.ಪ್ರಭಾಕರ ಶಿಶಿಲ ಅವರು ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾ ವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-16’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ಷೀಣಿಸಬಾರದು ಕನ್ನಡ ಪ್ರೀತಿ’ ಕುರಿತು ಉಪನ್ಯಾಸ ನೀಡುತ್ತಾ ಆಡುನುಡಿ ನಿಜವಾದ ಕನ್ನಡವಲ್ಲ. ಗ್ರಾಂಥಿಕ ಭಾಷೆ ನಿಜವಾದ ಕನ್ನಡ. ಆಯಾ ಪ್ರಾದೇಶಿಕ ಕನ್ನಡ ಭಾಷೆಗಳನ್ನೇ ನಾವು ಸಾಹಿತ್ಯ ರಚನೆಯಲ್ಲಿ ಬಳಸಬೇಕು. ನಾವು ಬಳಸುತ್ತಿರುವ ಕನ್ನಡ ಉಚ್ಛಾರ ದೋಷಗಳಿವೆ. ಶಬ್ದ ಸಂಪತ್ತಿನ ಕೊರತೆಯಿದೆ. ಕರ್ನಾಟಕದಲ್ಲಿ ಒಂದೊಂದು ಪ್ರಾಂತ್ಯಕ್ಕೆ ಒಂದು ಕನ್ನಡ ಭಾಷೆಯಿದೆ.

ಇಂಗ್ಲಿಷ್ ಮೋಹದಿಂದ ಅನೇಕ ಕನ್ನಡ ಪ್ರತಿಭೆಗಳು ಮುರುಟಿ ಹೋಗುತ್ತಿವೆ. ಬ್ರಿಟಿಷರು ಭಾರತವನ್ನು ದಾಸ್ಯದಲ್ಲಿಡಲು ಇಂಗ್ಲಿಷ್‍ನ್ನು ಬಿಟ್ಟುಹೋದರು. ಪ್ರಾಂತೀಯ ಭಾಷೆಯಲ್ಲಿ ಶಿಕ್ಷಣವನ್ನು ನೀಡಲು ಪ್ರಯತ್ನಿಸಬೇಕು. ಇಂದು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಕನ್ನಡದ ಸ್ಥಿತಿ ಶೋಚನಿಯವಾಗುತ್ತಿದೆ. ಇದಕ್ಕೆ ಕಾರಣ ಪೋಷ ಕರು ಮತ್ತು ನಮ್ಮನ್ನಾಳುವವರ ಇಂಗ್ಲಿಷ್ ವ್ಯಾಮೋಹವೇ ಕಾರಣ. ಒತ್ತಾಯ ಪೂರ್ವಕವಾಗಿ ಇಂಗ್ಲಿಷ್‍ನ್ನು ಮಕ್ಕಳ ಮೇಲೆ ಹೇರಲಾಗುತ್ತಿದೆ. ಇದರಿಂದ ಕನ್ನಡ ದುರ್ಬಲವಾಗುತ್ತಾ ಸಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಸಂಘ ಗಳು ವರದಿಗೆ ಮಾತ್ರ ಸೀಮಿತವಾಗಿವೆ. ಕನ್ನಡದಲ್ಲಿ ಪಿಎಚ್.ಡಿ ಮಾಡಿದ ಎಷ್ಟೋ ಮಂದಿಗೆ ಕುಮಾರವ್ಯಾಸನ ಒಂದು ಷಟ್ಪದಿ ಯನ್ನೂ ಬಿಡಿಸಿ ಹೇಳಲು ಬರುವುದಿಲ್ಲ. ನೆರೆ ರಾಜ್ಯ ಗಳು ಕನ್ನಡದ ಮೇಲೆ ಆಕ್ರಮಣ ಮಾಡುತ್ತಿವೆ. ಸರ್ಕಾರಕ್ಕೆ ಗಡಿಗಳ ಗೊಂದಲವನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಇಂಗ್ಲಿಷ್ ಅರ್ಥವಾಗು ವುದಿಲ್ಲ ಎಂಬ ಕಾರಣಕ್ಕೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವ ವಿದ್ಯಾರ್ಥಿ ಗಳಿದ್ದಾರೆ. ಇಂಥವರಿಂದ ಕನ್ನಡ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು. ಸರ್ಕಾರ ಕನ್ನಡದ ಬಗೆಗಿನ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.

ಆನ್‍ಲೈನ್ ಮೂಲಕ ನಡೆದ ಕಾರ್ಯಕ್ರಮ ದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಶ್ರೀಮತಿ ಸುಮಂಗಲಾ ಜಂಗಮಶೆಟ್ಟಿ ಪ್ರಾರ್ಥಿಸಿದರು. ಡಾ. ಮಹೇಂದ್ರ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

Translate »