ಭೂಮಿಗೀತದಲ್ಲಿ ಪರ್ವ ರಂಗಪ್ರಸ್ತುತಿ
ಮೈಸೂರು

ಭೂಮಿಗೀತದಲ್ಲಿ ಪರ್ವ ರಂಗಪ್ರಸ್ತುತಿ

March 26, 2021

ಮೈಸೂರು, ಮಾ.25(ವೈಡಿಎಸ್)- 3 ದಿನಗಳ ಯಶಸ್ವಿ ಪ್ರದರ್ಶನಗೊಂಡ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಮೇರು ಕೃತಿ `ಪರ್ವ’ ಕಾದಂಬರಿ ಆಧರಿಸಿದ ನಾಟ ಕದ ಮೊದಲ ಸಂಚಿಕೆ `ಆದಿಪರ್ವ’ ಗುರು ವಾರ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನಗೊಂಡಿತು. ಮಾ.26ರ ನಿಯೋಗ ಪರ್ವ, ಮಾ.27ರಂದು `ಯುದ್ಧಪರ್ವ’ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.28ರ ಬೆಳಗ್ಗೆ 10ಕ್ಕೆ `ಪರ್ವ’ ಪೂರ್ಣ ರಂಗ ಪ್ರಯೋಗ ಏರ್ಪಡಿಸಲಾಗಿದೆ.

ರಂಗಾಯಣ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಸಹಯೋಗದಲ್ಲಿ ರೂಪು ಗೊಂಡ ಈ ನಾಟಕವನ್ನು `ಆದಿ ಪರ್ವ’, `ನಿಯೋಗ ಪರ್ವ’ ಮತ್ತು `ಯುದ್ಧ ಪರ್ವ’ವಾಗಿ ವಿಂಗಡಿಸಲಾಗಿದೆ.

ಹೌಸ್‍ಫುಲ್: ಭೂಮಿಗೀತದಲ್ಲಿ 200 ಆಸನಗಳಿದ್ದು, ಗುರುವಾರ ಹೆಚ್ಚಿನ ಸಂಖ್ಯೆ ಯಲ್ಲಿ ರಂಗಪ್ರೇಮಿಗಳು ಆಗಮಿಸಿದ್ದರಿಂದ ಸಭಾಂಗಣ ಹೌಸ್‍ಫುಲ್ ಆಗಿತ್ತು. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಥರ್ಮಲ್ ಸ್ಕಾನಿಂಗ್ ಮಾಡಿ, ಸ್ಯಾನಿಟೈಸರ್ ಸಿಂಪಡಿಸಿ ನಾಟಕ ವೀಕ್ಷ ಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮಾಸ್ಕ್ ಧರಿಸಿ ಬಂದ ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಯಿತು.

ಶೇ.30 ಟಿಕೆಟ್ ಸೇಲ್: ಮಾ.3-4ರಂದು ಪರ್ವ ನಾಟಕದ ಪೂರ್ಣ ರಂಗಪ್ರಯೋಗ ವಿದ್ದು, ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರದರ್ಶನಗೊಳ್ಳಲಿದೆ. ಶೇ.30ರಷ್ಟು ಟಿಕೆಟ್ ಸೇಲ್ ಆಗಿವೆ ಎಂದು ರಂಗಾಯಣ ನಿರ್ದೇ ಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

Translate »