ವಾಹನ ತಪಾಸಣೆ ವೇಳೆ ಬೈಕ್ ಸವಾರ ಸಾವು ಪ್ರಕರಣ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ  ಹರಿಹಾಯ್ದ ಪರಿಷತ್ ಸದಸ್ಯ ವಿಶ್ವನಾಥ್
ಮೈಸೂರು

ವಾಹನ ತಪಾಸಣೆ ವೇಳೆ ಬೈಕ್ ಸವಾರ ಸಾವು ಪ್ರಕರಣ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪರಿಷತ್ ಸದಸ್ಯ ವಿಶ್ವನಾಥ್

March 26, 2021

ಮೈಸೂರು,ಮಾ.25(ಎಂಟಿವೈ)- ವಾಹನ ತಪಾಸಣಾ ನೆಪದಲ್ಲಿ ಬೈಕ್ ಸವಾರನ ಸಾವಿಗೆ ಕಾರಣರಾದ ಪೆÇಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿರಾ? ನೀವು ಯಾವ ಸೀಮೆ ಪೆÇಲೀಸ್ ಕಮಿಷನರಯ್ಯ? ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ನಗರ ಪೊಲೀಸ್ ಆಯುಕ್ತರ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ರಿಂಗ್‍ರೋಡ್‍ನಲ್ಲಿ ಸಂಚಾರಿ ಪೆÇಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ದ್ವಿಚಕ್ರ ವಾಹನ ಸವಾರ, 45 ವರ್ಷದ ಇಂಜಿನಿಯರ್ ಮೃತಪಟ್ಟಿರುವ ಘಟನೆ ಖಂಡನೀಯ. ಮೃತರ ಕುಟುಂಬದ ಸದಸ್ಯರ ಪಾಡೇನು? ಅವರ ಮಕ್ಕಳಿಗೆ ಯಾರು ದಿಕ್ಕು? ಸಂಚಾರ ಪೊಲೀಸರ ವರ್ತನೆ ಖಂಡ ನೀಯ. ಅಟ್ಟಾಡಿಸಿ ವಾಹನ ಸವಾರರನ್ನು ಹಿಡಿಯಲು ಇವರಿಗೆ ಹಕ್ಕು ಕೊಟ್ಟವರು ಯಾರು? ಕಾನೂನಿನಲ್ಲಿ ವಾಹನ ಸವಾರ ರನ್ನು ಅಟ್ಟಾಡಿಸಿ ಹಿಡಿಯಲು ಅವಕಾಶ ಇದೆಯಾ? ಎಂದು ಪ್ರಶ್ನಿಸಿದರು.

ಮೈಸೂರು ನಗರಕ್ಕೆ ಪೆÇಲೀಸ್ ಆಯುಕ್ತ ರಾಗಿ ಬಂದು ಎರಡು ವರ್ಷ ಆಗಿದೆ. ಒಮ್ಮೆಯೂ ಬೀದಿಗೆ ಬಂದಿಲ್ಲ. ಕೇವಲ ಕಚೇರಿಯಲ್ಲಿ ಕುಳಿತುಕೊಂಡರೆ ಸಾಲದು. ಪೊಲೀಸ್ ಕಮೀಷನರ್ ಆದವರು ಸಿಟಿ ರೌಂಡ್ ಮಾಡಬೇಕು. ಕೇವಲ ಪೇದೆಗಳಿಗೆ ಆ ಜವಾಬ್ದಾರಿ ಬಿಟ್ಟರೆ ಸಾಲದು. ಡಿಸಿಪಿ, ಎಸಿಪಿಗಳು ಸೇರಿ ಎಲ್ಲರೂ ಏನು ಮಾಡ್ತಿ ದ್ದೀರಿ. ಹಿರಿಯ ಅಧಿಕಾರಿಗಳು ಹೊಣೆ ಗಾರಿಕೆಯಿಂದ ನುಣುಚಿಕೊಳ್ಳಬಾರದು. ಇವರಿಗೆ ಮಾನ-ಮರ್ಯಾದೆ ಇಲ್ಲ, ಗೂಂಡಾ ಗಿರಿ ಮಾಡ್ತಿದ್ದಾರೆ. ಕಮಿಷನರ್ ಸುಮ್ಮನೆ ಕೂರುವುದಲ್ಲ, ಹೊರಗೆ ಬರಬೇಕು. ಇದು ಪೆÇಲೀಸರ ಅಚಾತುರ್ಯದಿಂದ ನಡೆದ ಘಟನೆ. ಈ ವರ್ತನೆಯನ್ನು ಯಾರೂ P್ಷÀಮಿ ಸಲ್ಲ. ಪೆÇಲೀಸ್ ಕಾಯ್ದೆಯಲ್ಲಿ ಅಟ್ಟಾಡಿಸಿ ಕೊಂಡು ಹೋಗಿ ಬೈಕ್ ಸವಾರರನ್ನು ಹಿಡಿಯಿರಿ ಎಂದು ಹೇಳುತ್ತದೆಯೇ? ನಗರದಲ್ಲಿ ಪೆÇಲೀಸರು ದಾರಿ ತಪ್ಪುತ್ತಿ z್ದÁರೆ. ಜನರು ನಿಮ್ಮನ್ನು ಕ್ಷಮಿಸಲ್ಲ. ಈ ಸಂಬಂಧ ನಾನು ಗೃಹ ಸಚಿವರು, ಜಿ¯್ಲÁ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸು ತ್ತೇನೆ. ಇನ್ನು ಮುಂದೆಯಾದರೂ ಪೆÇಲೀಸ್ ವ್ಯವಸ್ಥೆ ಸುಧಾರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಜನಸಾಮಾನ್ಯರು, ವಾಹನ ಸವಾರರ ಜೀವದೊಂದಿಗೆ ಚೆಲ್ಲಾಟ ವಾಡಬಾರದು ಎಂದು ಎಚ್ಚರಿಸಿದರು.

ವಾಹನ ತಪಾಸಣೆಗಾಗಿ ಸರ್ಕಾರದ ಹಣದಿಂದಲೇ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕ್ಯಾಮರವುಳ್ಳ ಮೊಬೈಲ್ ನೀಡಲಾಗಿದೆ. ಎಲ್ಲಾ ವೃತ್ತಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಓಡಾಡಿಸಿ ಕೊಂಡು ವಾಹನ ಹಿಡಿಯುವುದನ್ನು ಮೊದಲು ಬಿಡಬೇಕು. ತಪ್ಪಿಸಿಕೊಂಡು ಓಡಿ ಹೋದರೆ ಕ್ಯಾಮೆರಾ, ಸಿಸಿ ಕ್ಯಾಮೆರಾ ಮೂಲಕ ವಾಹನ ಸಂಖ್ಯೆ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಬೈಕ್ ಸವಾರನ ಸಾವಿಗೆ ಕಾರಣರಾದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಟ್ಟಿರುವುದು ಸರಿ ಯಲ್ಲ. ಥೂ ನಿಮ್ಮ ಜನ್ಮಕ್ಕೆ, ಯಾರಿ ಕಮೀಷನರ್ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಮೈಸೂರಲ್ಲಿ ಪೊಲೀಸ್ ವ್ಯವಸ್ಥೆ ಫೇಲ್ಯೂರ್ ಆಗುತ್ತಿದೆ. ವಾಹನ ತಪಾಸಣೆ ಮಾಡಬೇಡಿ ಎಂದು ಹೇಳುವುದಿಲ್ಲ. ಅದಕ್ಕೆ ಒಂದು ರೀತಿ-ನೀತಿ ಇರುತ್ತದೆ. ಪ್ರಕರಣ ಆದ ಬಳಿಕ ನಾವು ತಡೆದಿಲ್ಲ, ಪೊಲೀಸರನ್ನು ನೋಡಿ ಯು-ಟರ್ನ್ ತೆಗೆದುಕೊಳ್ಳುವಾಗ ಅಪಘಾತಕ್ಕೀಡಾಗಿದ್ದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಘಟನೆಗೆ ಪೊಲೀಸರೇ ನೇರ ಕಾರಣ. ಮೈಸೂರಲ್ಲಿ ಯಾವುದೇ ಜನಪ್ರತಿನಿಧಿ ಗಳಿಗೂ ಪೊಲೀಸರು ಗೌರವ ಕೊಡುತ್ತಿಲ್ಲ ಎಂದು ದೂರಿದರು.

Translate »