ದಂಡ ವಸೂಲಿಗೆ ನಿಮ್ಮ ಮನೆಗೆ ಬರುತ್ತಾರೆ ಪೊಲೀಸರು…!
ಮೈಸೂರು

ದಂಡ ವಸೂಲಿಗೆ ನಿಮ್ಮ ಮನೆಗೆ ಬರುತ್ತಾರೆ ಪೊಲೀಸರು…!

June 13, 2020

ಮೈಸೂರು, ಜೂ.12(ಆರ್‍ಕೆ)- ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರೇ ಎಚ್ಚರ! ನೋಟಿಸ್ ಹಿಡಿದು ದಂಡ ಕಟ್ಟಿಸಿಕೊಳ್ಳಲು ಪೊಲೀಸರೇ ನಿಮ್ಮ ಮನೆಗೆ ಬರುತ್ತಿದ್ದಾರೆ.

ಪೋಸ್ಟ್‍ಮ್ಯಾನ್ ಮೂಲಕ ಕಳಿಸುತ್ತಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ನೋಟಿಸ್‍ಗಳನ್ನು ಇನ್ನು ಮುಂದೆ ಸಂಚಾರ ಠಾಣೆ ಎಎಸ್‍ಐಗಳೇ ಮನೆಗೆ ಬಂದು ನೀಡಿ, ದಂಡದ ಹಣ ವಸೂಲಿ ಮಾಡುತ್ತಾರೆ.

ಮೈಸೂರು ನಗರದಾದ್ಯಂತ ದ್ವಿಚಕ್ರ ವಾಹನಗಳಲ್ಲಿ ಮಾಸ್ಕ್, ಹೆಲ್ಮೆಟ್ ಧರಿಸದೇ ಇಬ್ಬರು, ಮೂವರು ಸವಾರಿ ಮಾಡುತ್ತಿರುವುದು ಕಂಡುಬಂದಿದ್ದು, ಸಾಮಾ ಜಿಕ ಅಂತರವಿಲ್ಲದೇ ಕೊರೊನಾ ಸೋಂಕು ಹರಡುವ ಭೀತಿ ಇರುವ ಕಾರಣ, ಸಂಚಾರ ಪೊಲೀಸರು ನಿಯಮ ಉಲ್ಲಂಘಿಸುತ್ತಿರುವ ವಾಹನಗಳನ್ನು ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಫೋಟೋ ತೆಗೆದುಕೊಂಡು ಅವು ಗಳ ರಿಜಿಸ್ಟ್ರೇಷನ್ ನಂಬರ್ ಮೂಲಕ ಆರ್‍ಸಿ ಮಾಲೀ ಕರ ವಿಳಾಸ ತಿಳಿದುಕೊಂಡು ಎಎಸ್‍ಐಗಳು ನೋಟಿಸ್ ನೊಂದಿಗೆ ಮನೆಗೇ ಹೋಗುವ ಹೊಸ ಯೋಜನೆ ಇಂದಿನಿಂದ ಮೈಸೂರು ನಗರದಲ್ಲಿ ಆರಂಭವಾಗಿದೆ.

ಪ್ರಮುಖ ಜಂಕ್ಷನ್, ರಸ್ತೆಗಳಲ್ಲಿ ತಪಾಸಣೆ ನಡೆಸ ಲಿರುವ ಸಂಚಾರ ಪೊಲೀಸರು, ನಿಯಮ ಉಲ್ಲಂ ಘಿಸುವವರಿಗೆ ಸ್ಥಳದಲ್ಲೇ ನೋಟಿಸ್ ನೀಡಿ ಈಗ ದಂಡ ವಸೂಲು ಮಾಡುತ್ತಿದ್ದಾರೆ. ಒಂದು ವೇಳೆ ವಾಹನ ನಿಲ್ಲಿಸದೇ ಹೊರಟು ಹೋದರೂ ಬಿಡದೆ ಪೊಲೀ ಸರು ನೋಟಿಸ್ ಹಿಡಿದು ಮನೆಗೆ ಹೋಗುತ್ತಿದ್ದಾರೆ.

ಪ್ರಮುಖವಾಗಿ ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಸವಾರಿ ಮಾಡುವವರ ಮೇಲೆ ತೀವ್ರ ನಿಗಾ ವಹಿಸು ತ್ತಾರೆ. ಮಾಸ್ಕ್, ಹೆಲ್ಮೆಟ್ ಧರಿಸದೇ ಟ್ರಿಬಲ್ ರೈಡಿಂಗ್ ಹೋಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ಮಹಾಮಾರಿ ಸೋಂಕು ಹರಡುವ ಭೀತಿ ಇರುವುದರಿಂದ ಸಂಚಾರ ಪೊಲೀಸರು ಈ ನೂತನ ತಪಾಸಣೆ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಕೆಲವರು ಸಂಚಾರ ನಿಯಮ ಉಲ್ಲಂಘಿಸಿ, ವಾಹನ ನಿಲ್ಲಿಸದೆಯೇ ಪರಾರಿಯಾಗುತ್ತಾರೆ. ಅವರನ್ನು ಬೆನ್ನತ್ತಿ ದರೆ ಅಪಘಾತಗಳಾಗುವ ಸಂಭವವಿದೆ ಎಂಬ ಕಾರಣಕ್ಕೆ ಕ್ಯಾಮರಾ, ಮೊಬೈಲ್‍ನಲ್ಲಿ ಫೋಟೋ ತೆಗೆದು ಆಟೋ ಮೇಷನ್ ಸೆಂಟರ್‍ನಲ್ಲಿ ನೋಟಿಸ್ ಜನರೇಟ್ ಆಗಿ ಆರ್‍ಟಿಓದಿಂದ ಆರ್‍ಸಿ ಮಾಲೀಕರ ವಿಳಾಸ ಪಡೆದು, ಅಂಚೆ ಮೂಲಕ ಇದುವರೆಗೆ ನೋಟಿಸ್ ತಲುಪಿಸ ಲಾಗುತ್ತಿತ್ತು. ಆದರೆ, ಸ್ವಯಂ ಪ್ರೇರಣೆಯಿಂದ ಬಂದು ದಂಡ ಪಾವತಿಸುವವರ ಸಂಖ್ಯೆ ಕಡಿಮೆ. ಅಂಚೆ ಮೂಲಕ ತಮಗೆ ನೋಟಿಸ್ ತಲುಪಿಲ್ಲ ಎಂಬ ಕಾರಣ ಹೇಳಿ ಕೆಲವರು ದಂಡ ಪಾವತಿಸುವುದರಿಂದ ತಪ್ಪಿಸಿಕೊಳ್ಳುತ್ತಿರು ವುದು ಕಂಡುಬಂದ ಹಿನ್ನೆಲೆಯಲ್ಲಿ ಎಎಸ್‍ಐಗಳನ್ನೇ ಮನೆಗೆ ಕಳುಹಿಸಿ ಸಂಚಾರ ನಿಯಮ ಉಲ್ಲಂಘಿಸಿದವ ರಿಂದ ದಂಡ ಸಂಗ್ರಹಿಸಲು ಮುಂದಾಗಿದ್ದೇವೆ ಎಂದು ಸಂದೇಶ್‍ಕುಮಾರ್ ತಿಳಿಸಿದರು.

ಇಂದಿನಿಂದ ಈ ಹೊಸ ಯೋಜನೆ ಆರಂಭಿಸಿದ್ದು, ಒಂದೇ ದಿನ 30ಕ್ಕೂ ಹೆಚ್ಚು ಮಂದಿಯಿಂದ ದಂಡ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

Translate »