ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ

February 11, 2021

ಕಳೆದ 4 ದಿನಗಳಲ್ಲಿ 7500 ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವಿಕೆ ಯಶಸ್ವಿ

ಮೈಸೂರು, ಫೆ.10(ವೈಡಿಎಸ್)- ಮುಂಚೂಣಿ ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವ ಅಭಿಯಾನವನ್ನು ಮೈಸೂರಿ ನಲ್ಲಿ ಜಿಲ್ಲಾಡಳಿತ ಮುಂದುವರಿಸಿದ್ದು, ಬುಧವಾರ ಮೈಸೂರು ಉಪವಿಭಾಗದ ಸಹಾಯಕ ಆಯುಕ್ತ ವೆಂಕಟರಾಜು ಮೇಟಗಳ್ಳಿಯಲ್ಲಿ ರುವ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆದರು. ಜತೆಗೆ ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹಲವು ನೌಕರರು ಸೇರಿ ದಂತೆ ಜಿಲ್ಲೆಯಲ್ಲಿಂದು 1090 ಮಂದಿ ಲಸಿಕೆ ಪಡೆದುಕೊಂಡರು.

ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ `ಕೋವಿಶೀಲ್ಡ್’ ಲಸಿಕೆ ನೀಡ ಲಾಗುತ್ತಿದ್ದು, ಕಳೆದ 3 ದಿನಗಳಿಂದ 7500 ಕೊರೊನಾ ವಾರಿ ಯರ್ಸ್ ಲಸಿಕೆ ಪಡೆದುಕೊಂಡಿದ್ದಾರೆ. ಬುಧವಾರ ಜಿಲ್ಲಾಸ್ಪತ್ರೆ ಯಲ್ಲಿ ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಂಡಿ ದ್ದೆವು. ಒಟ್ಟು 560 ಮಂದಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಬುಧವಾರ 3,985 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, 1090 ಮಂದಿ ಲಸಿಕೆ ಪಡೆದು ಕೊಂಡರು ಎಂದು ಆರ್‍ಎಂಒ ಡಾ.ನಯಾಜ್ ಪಾಷಾ ಹೇಳಿದರು.

ಮೈಸೂರಿನ ಕೆಆರ್‍ಎಸ್ ರಸ್ತೆಯ ಟ್ರಾಮಾ ಕೇರ್ ಸೆಂಟರ್, ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಹಾಗೂ ಬಹುತೇಕ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರವರೆಗೂ ಲಸಿಕೆ ನೀಡಲಾಗುತ್ತ್ತಿದೆ ಎಂದರು.

ನಾವು ಪಟ್ಟಿ ಮಾಡಿಕೊಂಡಿದ್ದ ಕೆಲ ಸಿಬ್ಬಂದಿಗಳ ಹೆಸರು ವೆಬ್‍ಪೋರ್ಟಲ್‍ನಲ್ಲಿ ಇಂದು ಗೋಚರಿಸಲಿಲ್ಲ. ಅಂತಹವರನ್ನು ವಾಪಸ್ ಕಳುಹಿಸಲಾಗಿದೆ. ಅವರೆಲ್ಲರ ಹೆಸರನ್ನು ಮತ್ತೊಮ್ಮೆ ದೆಹಲಿಯ ಯೂನಿಯನ್ ಹೆಲ್ತ್ ಮಿನಿಸ್ಟ್ರಿಗೆ(ಕೇಂದ್ರ ಆರೋಗ್ಯ ಸಚಿವಾಲಯಕ್ಕೆ) ಇ-ಮೇಲ್ ಮಾಡಿದ್ದು, ವೆಬ್‍ಪೋರ್ಟಲ್ ಅಪ್‍ಡೇಟ್ ಮಾಡಿದ ಬಳಿಕ, ಅಂದರೆ ಮುಂದಿನ 3-4 ದಿನ ಗಳಲ್ಲಿ ಅವರಿಗೂ ಲಸಿಕೆ ನೀಡಲಾಗುವುದು ಎಂದರು.

45 ಜನರಿಗೆ ಸೋಂಕು: ಮೈಸೂರು ಜಿಲ್ಲೆಯಲ್ಲಿ ಬುಧವಾರ 45 ಮಂದಿಗೆ ಕೊರೊನಾ ಸೋಂಕು ತಗುಲಿದೆ. 22 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 53,684ಕ್ಕೇರಿದೆ. ಇದೇ ವೇಳೆ 52,438 ಮಂದಿ ಗುಣಮುಖರಾದಂತಾಗಿದೆ. ಬುಧವಾರ ಕೊರೊನಾದಿಂದ ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ 1,027 ಮಂದಿ ಕೊರೊನಾದಿಂದ ಸಾವ ನ್ನಪ್ಪಿದಂತಾಗಿದೆ. ಜಿಲ್ಲೆಯಲ್ಲಿ ಸದ್ಯ 219 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮನೆಯಲ್ಲೇ 85 ಸೋಂಕಿತರು ಶುಶ್ರೂಷೆ ಪಡೆಯುತ್ತಿದ್ದು, ಸರ್ಕಾರಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ 17, ಖಾಸಗಿ ಆಸ್ಪತ್ರೆ ಹಾಗೂ ನಿಗಾ ಕೇಂದ್ರಗಳಲ್ಲಿ 117 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಲ್ಯಾಬ್‍ಗಳಲ್ಲಿ ಪರೀಕ್ಷೆ ಮಾಡಿಸಿಕೊಂಡಿರುವ 63,293 ಮಂದಿ ಸೇರಿದಂತೆ ಇದುವರೆಗೆ ಜಿಲ್ಲೆಯಲ್ಲಿ 8,33,067 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದಂತಾಗಿದೆ.

Translate »