ಎಲ್ಲಿ ಹೋದವು ಹಾಸ್ಯಭರಿತ, ವಿದ್ವತ್‌ಪೂರ್ಣ ಚರ್ಚೆಗಳು…!
ಬಿಚ್ಚು ನುಡಿ

ಎಲ್ಲಿ ಹೋದವು ಹಾಸ್ಯಭರಿತ, ವಿದ್ವತ್‌ಪೂರ್ಣ ಚರ್ಚೆಗಳು…!

August 31, 2021

ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಮಾರಾಮಾರಿ ದೃಶ್ಯಗಳಿಗೆ ಹಲವರು ಸಾಕ್ಷಿಯಾದರು. ವಿರೋಧ ಪಕ್ಷದ ನಾಯಕರು ಮಾರ್ಷಲ್‌ಗಳನ್ನು ತಳ್ಳಿ, ತಮ್ಮ ಕೈಯ್ಯಲ್ಲಿದ್ದ ಕಾಗದ ಪತ್ರಗಳನ್ನು ಹರಿದೆಸೆದರು. ಸದನದ ಬಾವಿಗಿಳಿದು ಮನಬಂದAತೆ ಕಿರುಚಲು ಆರಂಭಿಸಿದರು. ಕೊನೆಗೆ ಸದನ ರಣಾಂಗಣವಾಯಿತು.
ಸAಸತ್ ಅಧಿವೇಶನಗಳಲ್ಲಿ ಸಾಮಾನ್ಯವಾಗಿ ಜ್ಞಾನ, ಆಲೋಚನಾ ಶಕ್ತಿ, ಹಾಸ್ಯ, ಸತ್ಯ ಸಂಗತಿಗಳ ಒಳಗೊಂಡ ವಾದ ಮಂಡಿಸಿ ತಮ್ಮ ಎದುರಾಳಿಯ ದೃಷ್ಟಿಕೋನವನ್ನು ಬದಲಾಯಿಸುವ ಪ್ರಯತ್ನ ಮಾಡುವುದು ವಾಡಿಕೆ.

ಆದರೆ ಈಗ ನಾವು ನೋಡುತ್ತಿರುವುದೇನು? ಜನರು ಗುಂಪಾಗಿ ಅರೆ ವೃತ್ತದಲ್ಲಿ ಕುಳಿತು, ಕಿಂಡರ್‌ಗಾರ್ಟನ್ ತರಗತಿಯಲ್ಲಿ ಮಕ್ಕಳು ಅರಚುವಂತೆ ಅರಚಾಡುವುದು, ಅಲ್ಪ ಬುದ್ಧಿ, ಕಡಿಮೆ ಗ್ರಹಿಕೆ, ಕಿರುಚಾಟ ಮತ್ತು ಅಸಭ್ಯ ವರ್ತನೆ ಈ ಎಲ್ಲವೂ ನಮ್ಮ ಕಣ ್ಣಗೇ ಕಾಣುತ್ತಿದೆ.
ಕುತೂಹಲಕಾರಿ ಸಂಗತಿ ಎಂದರೆ, ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಅತ್ಯುತ್ತಮ ಸಂಸದೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಾ, “ಸಂಸತ್ತಿನ ಕಲಾಪದಲ್ಲಿ ಹಾಸ್ಯ ಮತ್ತು ಬುದ್ಧಿಮತ್ತೆ ಮರೆಯಾಗುತ್ತಿದೆ. ಆದ ಕಾರಣ ಸದಸ್ಯರಿಗೆ ತಾವು ಆಡುವ ಪ್ರತಿ ಮಾತಿಗೂ ೨೪x೭ ಮಾಧ್ಯಮಗಳು ಯಾವ ರೀತಿ ಅರ್ಥ ಕಲ್ಪಿಸುತ್ತವೆ ಎಂಬುದರ ಅರಿವಿರಬೇಕು’’ ಎಂದು ಸಣ್ಣದಾಗಿ ಎಚ್ಚರಿಸಿದ್ದರು.

ಸರಿ, ಆದರೆ ಪ್ರಧಾನಮಂತ್ರಿಗಳೇ ಆಶ್ಚರ್ಯಪಡುವಂತಹ ಸಂಗತಿ ಯೆಂದರೆ, ಇಂದು ಯಾವುದೇ ರಾಜಕಾರಣ ತಮಾಷೆ ಮಾಡಬಹುದೇ? ಅವರ ದಾರಿಯಲ್ಲಿ ‘ಅಹಂ’ ಅಡ್ಡಿ ಆಗುವುದಿಲ್ಲವೆ? ಎಷ್ಟರ ಮಟ್ಟಿಗೆ ಅಂದರೆ ವ್ಯಂಗ್ಯ ಚಿತ್ರಗಳನ್ನೂ ಸಹ ರಾಜಕಾರಣ ಗಳು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಜಕಾರಣ ಗಳ ಬುದ್ಧಿ ಮತ್ತು ಹಾಸ್ಯಪ್ರಜ್ಞೆಯನ್ನು ತಡೆಯುವುದು ೨೪x೭ ಮಾಧ್ಯಮಗಳಲ್ಲ, ಬದಲಾಗಿ ಅವರ ಆಲೋಚನಾ ಶಕ್ತಿಯ ಕೊರತೆ ಮತ್ತು ದುರಹಂಕಾರದ ಭಂಡಾರ. ಇವು ಅವರ ಬುದ್ಧಿ, ಹಾಸ್ಯವನ್ನು ತಡೆಯುವ ಕೆಲಸ ಮಾಡುತ್ತವೆ.

ಡಾ.ಮನಮೋಹನ್ ಸಿಂಗ್ ಭ್ರಷ್ಟರಲ,್ಲ ಆದರೆ ಅವರ ಸರ್ಕಾರ ಭ್ರಷ್ಟವಾಗಿತ್ತು ಎಂಬುದನ್ನು ಹೇಳಲು ಪ್ರಧಾನಿ ನರೇಂದ್ರ ಮೋದಿ ಸಾದೃಶ್ಯವನ್ನು ಬಳಸಿದ ನಂತರ ಕಾಂಗ್ರೆಸ್ ಹೇಗೆ ಸಂಸತ್ತನ್ನು ಬಹಿಷ್ಕರಿಸಿತ್ತು ಎಂದು ಅನೇಕರು ನೆನಪಿಸಿಕೊಳ್ಳುತ್ತಾರೆ. ನರೇಂದ್ರ ಮೋದಿ ಹೇಳಿದ ಮಾತುಗಳು, `ಡಾ. ಸಾಹೇಬರಿಗೇ ಬಾತ್‌ರೂಂನಲ್ಲಿ ಸ್ನಾನ ಮಾಡುವಾಗ ರೇನ್ ಕೋಟ್ ಬಳಸುವ ಕಲೆಯ ಬಗ್ಗೆ ತಿಳಿದಿರುವುದು’. ಕಲಾಪವನ್ನು ಬಹಿಷ್ಕರಿಸಲು ಕಾಂಗ್ರೆಸಿಗೆ ಈ ಮಾತೊಂದೇ ಸಾಕಾಗಿತ್ತು.

ಇದನ್ನು ಓದಿದಾಗ ನೆಹರೂ ಅವರ ಪ್ರಸಂಗವೊAದು ಜ್ಞಾಪಕಕ್ಕೆ ಬರುತ್ತದೆ. ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಒಮ್ಮೆ ಸಂಸತ್ತಿನಲ್ಲಿ `ನೆಹರು ಹೇಳಿಕೊಳ್ಳುವಂತೆ ಅವರು ಶ್ರೀಮಂತರಲ್ಲ’ ಎಂದಿದ್ದರು. ಲೋಹಿಯಾ ಮುಂದುವರೆದು, “ಪ್ರಧಾನಮಂತ್ರಿ ಅವರ ತಾತ ಮೊಘಲರ ಆಸ್ಥಾನದಲ್ಲಿ ‘ಚಪರಾಸಿ’(ಸೇವಕ) ಆಗಿ ಕೆಲಸ ಮಾಡುತ್ತಿದ್ದರು ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ” ಎಂದು ಹೇಳಿದ್ದರು. ಅಚ್ಚರಿ ಎಂದರೆ ಆಗ ಕಾಂಗ್ರೆಸ್ ಕಲಾಪವನ್ನು ಬಹಿಷ್ಕರಿಸುವ ಯಾವುದೇ ನಿರ್ಧಾರ ಮಾಡಿರಲಿಲ್ಲ. ಬದಲಾಗಿ ಅವರ ನಾಯಕ ನೆಹರು ಒಂದು ಮುಗುಳ್ನಗೆಯೊಂದಿಗೆ ಉತ್ತರಿಸಿದ್ದು ಹೀಗೆ, “ಗೌರವಾನ್ವಿತ ಸದಸ್ಯರು ನಾನು ಹಲವು ವರ್ಷದಿಂದ ಹೇಳಲು ಪ್ರಯತ್ನಿಸುತ್ತಿರುವು ದನ್ನು ಕೊನೆಗೂ ಒಪ್ಪಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ನಾನು ಜನರ ನಾಯಕ” ಎಂದು ಸಮರ್ಥಿಸಿಕೊಂಡಿದ್ದರು.

ಸಂಸತ್ತಿನಲ್ಲಿ ನಡೆದ ಜಟಾಪಟಿಯಲ್ಲಿ ನನಗೆ ಇಷ್ಟವಾಗಿದ್ದರಲ್ಲಿ ಇದೂ ಒಂದು. ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ, ಫಿರೋಜ್ ಗಾಂಧಿ ಅವರನ್ನು ನೆಹರುವಿನ ‘ಲ್ಯಾಪ್ ಡಾಗ್’ (ತೊಡೆಯ ಮೇಲಿರುವ ನಾಯಿ) ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಫಿರೋಜ್ ಗಾಂಧಿ, “ಕೃಷ್ಣಮಾಚಾರಿ ಅವರು ತಮ್ಮನ್ನು ಈ ರಾಷ್ಟçದ ಆಧಾರ ಸ್ತಂಭ ಎಂದು ಭಾವಿಸಿದ್ದಾರೆ. ಅಂಥ ಸ್ತಂಭವನ್ನು ಕಂಡು ನಾಯಿ ಏನು ಮಾಡುತ್ತದೆಯೋ ಅದನ್ನೇ ಅವರು ಸಹಾ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.
ನಾಯಿಗಳ ವಿಚಾರದಲ್ಲಿ ಹೇಳುವುದಾದರೆ, ಪೀಲೂ ಮೋದಿ, ಸ್ವತಂತ್ರ ಪಕ್ಷದ ಸಂಸದ ಹಾಗೂ ಟಾಟಾ ಸ್ಟೀಲ್ ಅಧ್ಯಕ್ಷರಾಗಿದ್ದ ರುಸ್ಸಿ ಮೋದಿ ಅವರ ಸಹೋದರ. ಒಮ್ಮೆ ಸಂಸತ್ತಿನಲ್ಲಿ ಪೀಲೂ ಮೋದಿ ಮಾತನಾಡು ವಾಗ, ಕಾಂಗ್ರೆಸ್ ಸಂಸದ ಜೆ.ಸಿ.ಜೈನ್ ಪದೇ-ಪದೆ ಮಧ್ಯ ಪ್ರವೇಶಿಸು ತ್ತಿದ್ದರು, ಅಂತಿಮವಾಗಿ ಕೆರಳಿದ ಪೀಲೂ “ಬೊಗಳುವುದ ನಿಲ್ಲಿಸು” ಎಂದು ಅಬ್ಬರಿಸಿದ್ದರು. ಕೂಡಲೇ ಜೈನ್ ಸಭಾಧ್ಯಕ್ಷರಿಗೆ ದೂರು ನೀಡಿದರು. “ಸರ್, ಇವರು ನನ್ನನ್ನು ನಾಯಿ ಎಂದು ಕರೆಯುತ್ತಿದ್ದಾರೆ, ಇದು ಅಸಂಸದೀಯ ಪದ” ಎಂದು ಹೇಳಿದರು. ಇದಕ್ಕೆ ಪೀಲೂ ಮೋದಿ ಕ್ಷಮೆ ಯಾಚಿಸಿ, ನಂತರ “ಸ್ಟಾಪ್ ಬ್ರೇಯಿಂಗ್” (ಕತ್ತೆಯಂತೆ ಕಿರುಚುವುದ ನಿಲ್ಲಿಸು) ಎಂದರು. ಅಚ್ಚರಿ ಎಂದರೆ, ಅದಕ್ಕೆ ಜೈನ್ ಯಾವ ಆಕ್ಷೇಪ ಎತ್ತಲಿಲ್ಲ. ಕೊನೆಗೆ ಅದು ದಾಖಲೆಗಳಲ್ಲಿ ಉಳಿಯಿತು.

ಅಂದಿನ ಕಾಲದ ಸದಸ್ಯರಲ್ಲಿ ಇಂದಿನ ರಾಜಕಾರಣ ಗಳಿಗಿರುವಂತೆ ‘ಅಹಂ’ ಇರಲಿಲ್ಲ, ತಮ್ಮ ವಾದದ ಸಮರ್ಥನೆಗಾಗಿ ಸ್ವಯಂ ತಮ್ಮ ವಿಚಾರವಾಗಿಯೇ ಹಾಸ್ಯ ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಒಂದು ಉದಾಹರಣೆ; ೧೯೬೨ರಲ್ಲಿ ಚೀನಾದೊಂದಿಗಿನ ಯುದ್ಧದ ಕುರಿತು ಸಂಸತ್ತಿನಲ್ಲಿನ ಚರ್ಚೆ ನಡೆಯುತ್ತಿತ್ತು. ಅಕ್ಸಯ್ ಚಿನ್ ಕಳೆದುಕೊಂಡಿದ್ದಕ್ಕಾಗಿ ನೆಹರು ಅವರನ್ನು ತರಾಟೆಗೆ ತೆಗೆದುಕೊಂಡಾಗ, ಈ ವಿಷಯದ ಪ್ರಾಮುಖ್ಯತೆ ಯನ್ನು ಕಡಿಮೆ ಮಾಡಲು ನೆಹರು ಹೇಳಿದ್ದು ಹೀಗೆ, “ಈ ಪ್ರದೇಶದಲ್ಲಿ ಒಂದು ಹುಲ್ಲುಕಡ್ಡಿ ಸಹಾ ಬೆಳೆಯುವುದಿಲ್ಲ”.

ಇದಕ್ಕೆ ಅವರದೇ ಪಕ್ಷದ ಸಂಸದ ಮಹಾವೀರ್ ತ್ಯಾಗಿ ತಕ್ಷಣ ಎದ್ದು ನಿಂತು ತನ್ನ ಬೋಳು ತಲೆಯನ್ನು ನೇವರಿಸುತ್ತಾ, “ನನ್ನ ತಲೆಯಲ್ಲೂ ಒಂದು ಕೂದಲು ಸಹಾ ಬೆಳೆಯುವುದಿಲ್ಲ, ಹಾಗಂತಾ ನನ್ನ ತಲೆಯ ಕತ್ತರಿಸಿ ಕೊಡಬೇಕು ಎಂದು ಅದರರ್ಥನಾ? ಎಂದು ಪ್ರಶ್ನಿಸಿದರು.
ಆ ದಿನಗಳಲ್ಲಿ ಪಕ್ಷದ ನಾಯಕರು ಅಹಂಕಾರ ಪುರುಷರಾಗಿರಲಿಲ್ಲ. ಬಲವಾದ ಆಲೋಚನಾ ಶಕ್ತಿ, ಬುದ್ಧಿವಂತಿಕೆ ಮತ್ತು ಉನ್ನತ ವಿಚಾರಧಾರೆ ಗಳನ್ನು ಹೊಂದಿದ್ದ ಪುರುಷರಾಗಿದ್ದರು.

ಕೆಲವೊಮ್ಮೆ ತೀಕ್ಷ÷್ಣ ಪ್ರತಿಕ್ರಿಯೆಯೂ ಬಲವಾದ ಪುಷ್ಟಿ ನೀಡಿ, ನಿರ್ಧಾರಗಳನ್ನು ಬದಲಾಯಿಸುವ ಹಾಗೇ ಮಾಡುತ್ತದೆ. ಉದಾಹರಣೆಗೆ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಸಿ.ರಾಜಗೋಪಾಲಚಾರಿ ಅವರು ಒಮ್ಮೆ ವಿದೇಶಾಂಗ ನೀತಿಯ ಕುರಿತು ಚರ್ಚಿಸುತ್ತಿರುವಾಗ, ರಾಜಾಜಿ (ರಾಜಗೋಪಾಲಚಾರಿ ಅವರನ್ನು ಹೀಗೆ ಕರೆಯಲಾಗುತ್ತಿತ್ತು), ನೆಹರು ಅವರ ಪ್ರಸ್ತಾಪವೊಂದಕ್ಕೆ ಅಸಮ್ಮತಿ ತೋರಿದರು. ಬದಲಾಗಿ ತಮ್ಮದೇ ಸ್ವಂತ ಪ್ರಸ್ತಾಪವನ್ನು ಮಂಡಿಸುವುದು ಸರಿ ಎಂದು ರಾಜಾಜಿ ಅಂದುಕೊAಡಿದ್ದರು. ಇದಕ್ಕೆ ನೆಹರು, “ನೋಡಿ ರಾಜಾಜಿ ನನಗೆ ಬಹುಜನರ ಬೆಂಬಲವಿದೆ” ಅಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಗೋಪಾಲಚಾರಿ, “ಹೌದು ಜವಾಹರಲಾಲ್, ನಿಮಗೆ ಬಹು ಜನರ ಬೆಂಬಲವಿದೆ. ಆದರೆ ನನ್ನ ಬಳಿ ಲಾಜಿಕ್ (ತರ್ಕ) ಇದೆ” ಎಂದಿದ್ದರು. ಕೊನೆಗೆ ಒಪ್ಪಿಕೊಂಡ ನೆಹರು, ರಾಜಾಜಿ ಅವರ ಪ್ರಸ್ತಾಪವನ್ನು ಪುರಸ್ಕರಿಸಿದರು.

ಒಮ್ಮೆ ಮಾಜಿ ರಾಷ್ಟçಪತಿ ಕೆ.ಆರ್.ನಾರಾಯಣನ್ ಹೀಗೆ ಹೇಳಿದ್ದರು; ಸಂಸತ್ತು, ಅರ್ಥಪೂರ್ಣ ಚರ್ಚೆಗಳು, ಹಾಸ್ಯಭರಿತ, ಚುಟುಕು ಮಾತುಗಳಿಂದ ಕೂಡಿದ ಉತ್ತಮವಾದ ಸ್ಥಳವಾಗಿದೆ. ಲೋಕಸಭಾ ಮತ್ತು ರಾಜ್ಯಸಭಾ ವೆಬ್‌ಸೈಟ್‌ಗಳಲ್ಲಿ “ಹಾಸ್ಯ, ಚುಟುಕು, ಕವಿತೆ ಮತ್ತು ದ್ವಿಪದಿಗಳು ಎಂಬ ವಿಭಾಗಗಳು ಕಾಣಸಿಗುತ್ತವೆ. ಸಂಸತ್ತಿನಲ್ಲಿ ಪ್ರಸ್ತಾಪವಾದ ದ್ವಿಪದಿ, ಚುಟುಕು, ಹಾಸ್ಯಭರಿತ ಪ್ರಸಂಗಗಳ ಒಳಗೊಂಡ ವಿಶೇಷವಾದ ಪುಸ್ತಕವನ್ನು ಪ್ರಕಟಿಸಲು ಒಬ್ಬ ಪ್ರಧಾನ ಕಾರ್ಯದರ್ಶಿಯೂ ಸಹಾ ಇರುತ್ತಾರೆ. ದುರದೃಷ್ಟಕರ ಸಂಗತಿಯೆAದರೆ, ಕಳೆದ ಮೂರು ವರ್ಷಗಳಲ್ಲಿ ಕೇವಲ ೩ ಹಾಸ್ಯ ಪ್ರಕರಣಗಳಷ್ಟೇ ದಾಖಲಾಗಿವೆ’’.

ಹಾಸ್ಯ, ಚುಟುಕು ಮತ್ತು ಬುದ್ಧಿವಂತಿಕೆ ಇಲ್ಲದ ಯಾವ ರಾಜಕೀಯ ಚರ್ಚೆ ಅರ್ಥರಹಿತ. ನಿಮ್ಮಲ್ಲಿ ಬುದ್ಧಿವಂತಿಕೆ ಮತ್ತು ಹಾಸ್ಯವಿದ್ದರೆ ಅಹಂ ಬಾಗಿಲಿನಿಂದ ಹೊರಗಿರುತ್ತದೆ, ಆರೋಗ್ಯಕರ ಚರ್ಚೆಗಳು ಒಳಗೆ ಬರುತ್ತವೆ. ನೀವು “ಇನ್ನಿತರರ ಅಭಿಪ್ರಾಯ”ಗಳಿಗೆ ಅವಕಾಶ ಮಾಡಿಕೊಡುತ್ತೀರಿ.

ಇತ್ತೀಚಿನ ವರ್ಷಗಳಲ್ಲಿ ನಾನೂ ವಿಧಾನಮಂಡಲ, ಸಂಸತ್ ಕಲಾಪಗಳನ್ನು ನೋಡುತ್ತಲೇ ಬರುತ್ತಿದ್ದೇನೆ. ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ವಿನಾಕಾರಣ ಹರಿಹಾಯುವುದು, ಆಡಳಿತ ಪಕ್ಷ ವಿರೋಧ ಪಕ್ಷಗಳ ಹಿತಾಸಕ್ತಿ ಹತ್ತಿಕ್ಕುವ ಸಲುವಾಗಿ ಪ್ರತಿತಂತ್ರಗಳ ರೂಪಿಸುವುದು ನಡೆದುಕೊಂಡು ಬರುತ್ತಿದೆ. ಹೀಗೆ ಸರ್ಕಾರ ಉಳಿಸುವ-ಉರುಳಿಸುವ ಆಡಳಿತ ಮತ್ತು ವಿರೋಧ ಪಕ್ಷಗಳ ಮೇಲಾಟ ಜನರನ್ನಂತೂ ಸಂಕಷ್ಟದಲ್ಲಿ ಮುಳುಗಿಸಿದೆ.

ಈಗಿನ ನಮ್ಮ ಜನಪ್ರತಿನಿಧಿಗಳಲ್ಲಿ ದೊಡ್ಡ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಬುದ್ಧಿವಂತಿಕೆ ಎಲ್ಲಿದೆ ಹೇಳಿ? ಹೌದು, ಸದ್ಯಕ್ಕೆ ಲೋಕಸಭೆಯಲ್ಲಿ ಕೊಂಚ ಹಾಸ್ಯ ಮತ್ತು ಚುಟುಕು, ಕವಿತೆ ಹಾಗೂ ದ್ವಿಪದಿಗಳ ಬಳಕೆಯಾಗುತ್ತಿದೆ. ಬಹುಶಃ ೧೩೧-ಬಿ ರೂಂನಲ್ಲಿ ಕುಳಿತು ಎಲ್ಲವನ್ನು ಟಿಪ್ಪಣ ಮಾಡಿಕೊಳ್ಳುತ್ತಿರುವ ಪ್ರಧಾನ ಕಾರ್ಯದರ್ಶಿಯನ್ನು ಕಾಣುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ “ಹಾಸ್ಯ ಕಾರ್ಯದರ್ಶಿ” ಬದಲಿಗೆ ಸಂಸತ್ತಿನಲ್ಲಿ ಶಿಷ್ಟಾಚಾರ ತರಬೇತಿದಾರನ ಅಗತ್ಯವಿದೆ. ಚುಟುಕು, ಹಾಸ್ಯ ಮತ್ತು ಚರ್ಚೆಯನ್ನು ಸರಿಯಾಗಿ ನಡೆಸುವ ಸಾಮರ್ಥ್ಯ ಉಳ್ಳ ನಾಯಕರ ಅಗತ್ಯವಿದೆ. ಆದರೆ, ಮಾರ್ಷಲ್‌ಗಳ ಮೇಲೆ ಮುಗಿಬಿದ್ದು, ಕಾಗದಪತ್ರಗಳನ್ನು ಹರಿದು ತೂರುವ ನಾಯಕರಲ್ಲ.
ಇ-mಚಿiಟ: viಞಡಿಚಿm@sಣಚಿಡಿoಜಿmಥಿsoಡಿe.ಛಿom

Translate »