ಪ್ರಸ್ತುತ ದಿನಗಳಲ್ಲಿ ಜನ ಆಯುರ್ವೇದ ಔಷಧಿ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ
ಮೈಸೂರು

ಪ್ರಸ್ತುತ ದಿನಗಳಲ್ಲಿ ಜನ ಆಯುರ್ವೇದ ಔಷಧಿ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ

February 16, 2019

ಮೈಸೂರು: ಪ್ರಸ್ತುತ ದಿನಗಳಲ್ಲಿ ಬಹುತೇಕ ಜನರು ಆಯುರ್ವೇದ ಔಷಧಿಯನ್ನು ಬಳಸು ತ್ತಿದ್ದಾರೆ ಎಂದು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅಭಿಪ್ರಾಯಪಟ್ಟರು.

ಶುಕ್ರವಾರ ಆಲನಹಳ್ಳಿಯಲ್ಲಿರುವ ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, 1999ರಲ್ಲಿ ಬೆಂಗಳೂರಿನ ಹಿಮಾಲಯ ಫಾರ್ಮಸ್ಯೂಟಿಕಲ್‍ನ ನಿರ್ದೇಶಕರೊಬ್ಬರು ಸಭೆಯಲ್ಲಿ ಇನ್ನು 20ವರ್ಷಗಳಲ್ಲಿ ಜನರು ಆಯುರ್ವೇದ ಔಷಧಿಗೆ ಮರಳುತ್ತಾರೆ ಎಂದು ಹೇಳಿದ್ದರು. ಅದರಂತೆ ಇಂದು ಬಹುತೇಕ ಜನರು ಆಯುರ್ವೇದ ಔಷಧಿಯನ್ನೇ ಬಳಸುತ್ತಿದ್ದಾರೆ ಎಂದರು.

ಎಲ್ಲರಿಗೂ ಆರೋಗ್ಯ ಮತ್ತು ಸಮತೋಲನ ಕಾಯ್ದು ಕೊಳ್ಳಬೇಕು ಎನ್ನುವ ಹಂಬಲ ಇದೆ. ಇದಕ್ಕೆ ಆಯುರ್ವೇದ ಪೂರಕ. ಇದರಲ್ಲಿ ಹಿಮಾಲಯ ಮತ್ತು ಪತಂಜಲಿ ಕಂಪೆನಿ ಗಳ ಪಾತ್ರ ಮುಖ್ಯವಾಗಿದ್ದು, ಪ್ರಪಂಚದಲ್ಲೇ ಆಯು ರ್ವೇದದಿಂದ 8 ಬಿಲಿಯನ್ ಡಾಲರ್ ವ್ಯವಹಾರ ಇದೆ ಎಂದ ಅವರು, ಕಾಲೇಜಿನಲ್ಲಿ 700 ವಿದ್ಯಾರ್ಥಿಗಳಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ಹಲವರು ರ್ಯಾಂಕ್ ಪಡೆ ದಿರುವುದು ಸಂತೋಷದ ವಿಷಯ. ಶಿಕ್ಷಕರ ಜತೆ ವಿದ್ಯಾರ್ಥಿಗಳು ಸುಮಧುರ ಸಂಬಂಧ ಇರಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, 3 ದಿನಗಳ ಕಾಲ ಆಯೋಜಿಸಿದ್ದ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ ಯಶಸ್ವಿಯಾಯಿತು. ಸಾವಿರಾರು ಮಂದಿ ಇದರ ಪ್ರಯೋಜನ ಪಡೆದುಕೊಂಡರು. ಈ ಮೂಲಕ ಹೊಸದೊಂದು ಅವಕಾಶವನ್ನು ಸೃಷ್ಟಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಸಾಗಿ ಹೋಗುವ ವಿದ್ಯಾರ್ಥಿಗಳು ಹೊಸದೊಂದು ಜೀವನ ಆರಂಭಿಸುತ್ತಾರೆ. ಹಲವು ದೇಶಗಳಲ್ಲಿ ಆರೋಗ್ಯ ಸಂಬಂಧಿತ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗುತ್ತಿದ್ದು, ಕೆಲಸಕ್ಕೆ ಸೇರಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಜಾಗತೀಕರಣದ ಪದ ಚಿಕ್ಕದು. ಆದರೆ, ಚೀನಾ ಮೆಡಿಸಿನ್ ನಮಗೆ ಬಂದಿತು. ಆಯುರ್ವೇದ ಹೊರಕ್ಕೆ ಹೋಗಿದೆ. ಇದೆಲ್ಲವೂ ಜಾಗತೀಕರಣದ ದೊಡ್ಡ ಸವಾಲು. ದೇಶದಲ್ಲಿ ಅನೇಕ ಆಯುರ್ವೇದ ಕಾಲೇಜುಗಳಿದ್ದು, ಸ್ಪರ್ಧೆ ಇರುವುದರಿಂದ ಎದುರಿಸಿ ನಾವು ಯಶಸ್ಸು ಗಳಿಸಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ `ಸ್ಟಾರ್ ಆಫ್ ಮೈಸೂರ್’ ವ್ಯವ ಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ ಅವರು ಕಾಲೇಜಿನ ವಾರ್ಷಿಕ ಸಂಚಿಕೆ `ಸೌಪರ್ಣಿಕ’ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ಪ್ರಾಂಶು ಪಾಲರಾದ ಡಾ.ರಾಜೇಶ ಅ.ಉದಪುಡಿ, ಆಡಳಿತಾಧಿ ಕಾರಿ ವಿಕಾಸ್‍ನಂದಿ ಉಪಸ್ಥಿತರಿದ್ದರು.

Translate »