ಜನರ ದಿಕ್ಕೆಡಿಸುತ್ತಿರುವ ಪ್ರಧಾನಿ ಮೋದಿ: ದೇಮ ಟೀಕೆ
ಮೈಸೂರು

ಜನರ ದಿಕ್ಕೆಡಿಸುತ್ತಿರುವ ಪ್ರಧಾನಿ ಮೋದಿ: ದೇಮ ಟೀಕೆ

February 16, 2019

ಮೈಸೂರು: ಪ್ರಸ್ತುತ ರಾಜಕಾರಣ ಜಾದುವಿನಂತಾಗಿದ್ದು, ಪ್ರಧಾನಿ ಮೋದಿ ಒಬ್ಬ ಜಾದೂಗಾರರಂತೆ ದೇಶದ ಜನರನ್ನು ಮೋಡಿ ಮಾಡಿ ದಿಕ್ಕು ತಪ್ಪಿಸುತ್ತಿ ದ್ದಾರೆ ಎಂದು ಸಾಹಿತಿ ದೇವನೂರ ಮಹದೇವ ಕಿಡಿಕಾರಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಎಐಡಿವೈಒ ಸಂಘಟನೆಯಿಂದ ಫೆ.27ರ `ನಿರುದ್ಯೋಗದ ವಿರುದ್ಧ ಪಾರ್ಲಿಮೆಂಟ್ ಚಲೋ’ ಅಂಗ ವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನ ಸಮಾವೇಶದಲ್ಲಿ ಮಾತನಾಡಿದ ಅವರು, ಜಾದು ಸಮ್ಮೋಹನ ವಿದ್ಯೆ. ಕೆಲ ಜಾದೂ ಗಾರರು ವಿಮಾನವನ್ನು ಮಾಯ ಮಾಡ್ತಾ ರಂತೆ. ಖಾಲಿ ಪಾತ್ರೆಗೆ ಕೈಯಾಡಿಸಿ ಮೃಷ್ಟಾನ್ನ ಸೃಷ್ಟಿಸುತ್ತಾರಂತೆ. ಇದಕ್ಕೆ ಜನ ಕೂಡ ಮರುಳಾಗುತ್ತಾರೆ. ಇಂದಿನ ರಾಜಕಾರಣ ನೋಡಿದರೆ ಒಂದು ರೀತಿಯ ಜಾದೂ ಅನಿಸು ತ್ತಿದೆ. ಜಾದೂ ವಂಚನೆಯಲ್ಲ, ಕಣ್ಕಟ್ಟು ವಿದ್ಯೆ ಯಷ್ಟೇ. ಆದರೆ, ರಾಜಕಾರಣ ಕೂಡ ಜಾದೂ ವಾದರೆ, ಅದು ಮಹಾ ವಂಚನೆ, ಮಹಾ ದ್ರೋಹವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಿನ ರಾಜಕಾರಣ ಜನರ ಕಷ್ಟ-ಸುಖ, ದುಃಖ-ದುಮ್ಮಾನಕ್ಕೆ ಮುಖಾಮುಖಿಯಾಗು ತ್ತಿಲ್ಲ. ಜಾದೂ ರಾಜಕಾರಣದ ಮೂಲಕ ಜನರನ್ನು ಭ್ರಮೆಯಲ್ಲೇ ಸಂತೃಪ್ತರನ್ನಾಗಿ ಮಾಡಲಾಗುತ್ತಿದೆ. ಆದರೆ, ವಾಸ್ತವ ಬದುಕು ನರಕವಾಗಿದೆ. ಅಚ್ಛೇ ದಿನ ನೆಪದಲ್ಲಿ ಜನರು ಸಾಯಬೇಕಾಗಿದೆ. ಬಿಜೆಪಿಯ ದಲಿತ ಮುಖಂಡ ಡಿ.ಎಸ್.ವೀರಯ್ಯ ಸಂಪಾದ ಕತ್ವದ ಪತ್ರಿಕೆಯಲ್ಲಿ ಮೋದಿ ಅವರನ್ನು ಜಾದೂ ಗಾರ ಎಂದು ಹೇಳಲಾಗಿದೆ. ಕನ್ನಡದಲ್ಲಿ ಜಾದುಗೆ `ಮೋಡಿ ವಿದ್ಯೆ’ ಎಂದು ಕರೆಯು ತ್ತಾರೆ ನಿಜ. ಮೋದಿ ಅವರು ಜಾದೂ ಗಾರ ಎಂದು ನನಗೂ ಅನಿಸತೊಡಗಿದೆ. ಏಕೆಂದರೆ, ವಿದೇಶದಲ್ಲಿರುವ ಕಪ್ಪು ಹಣ ವನ್ನು ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂದು ಹೇಳಿದ್ದರು. ಇದನ್ನು ನಂಬಿದ ಖಾತೆದಾರರು ಆ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಕನಸು ಕಾಣುತ್ತಿದ್ದಾರೆ. ಇದರಿಂದ ಕಲ್ಪನೆಯ ಸುಖ ಮಾತ್ರ ಸಿಗುತ್ತ ದೆಯೇ ಹೊರತು, ಖಾತೆಗೆ ನಯಾ ಪೈಸವೂ ಬೀಳಲಿಲ್ಲ. ಇದು ಜಾದೂ ಅಲ್ಲವೇ? ಎಂದು ಪ್ರಶ್ನಿಸಿದರು.

ಮೋದಿ ಅವರು ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಕಣ್ಕಟ್ಟು ಮಾಡಿ ಗೆದ್ದು ಪ್ರಧಾನಿಯಾದರು. ಒಂದು ಕೋಟಿ ಉದ್ಯೋಗ ಸೃಷ್ಟಿ ಇರಲಿ, ಈವರೆಗೆ ಕಾಪಾಡಿ ಕೊಂಡು ಬಂದಿದ್ದ ಉದ್ಯೋಗವನ್ನೇ ನಾಶ ಮಾಡಿದ್ದಾರೆ. ಅವರು ಕೆಲಸವನ್ನು ಸೃಷ್ಟಿಸು ವುದಿರಲಿ, ಯಥಾಸ್ಥಿತಿಯನ್ನು ಮುಂದುವರಿ ಸುವ ಸಾಮಥ್ರ್ಯವೂ ಅವರಿಗೆ ಇಲ್ಲ. ಆದರೆ, ಈ ಬಗ್ಗೆ ಅವರಿಗೆ ಎಳ್ಳಷ್ಟ್ಟೂ ವಿಷಾದ, ನೋವು ಇಲ್ಲ. ಇದುವೇ ಭಯಾನಕ ಎಂದು ಕಿಡಿ ಕಾರಿದರು. ಜನಪರ ಸಂಘಟನೆಗಳು `ನಾವೊ ಬ್ಬರೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸು ತ್ತೇವೆ’ ಎನ್ನುವುದು ಸರಿಯಲ್ಲ. ಈ ಹೊತ್ತಿ ನಲ್ಲಿ ಎಲ್ಲರೂ ಒಂದಾಗಿ ಸಾಗಬೇಕಾಗಿದೆ. ಇಂತಹವೊಂದು ವಿವೇಕವನ್ನು ಹೋರಾಟ ಗಾರರು ಪ್ರದರ್ಶಿಸಬೇಕು. ಆಗಲೇ ಹೋರಾಟಗಳು ಫಲ ನೀಡಲು ಸಾಧ್ಯ ಎಂದು ಸಲಹೆ ನೀಡಿದರು.

ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ರಾಮಾಂ ಜನಪ್ಪ ಆಲ್ದಳ್ಳಿ ಮಾತನಾಡಿ, ನಿರುದ್ಯೋಗ ಸಮಸ್ಯೆ ದೇಶದಲ್ಲಿ ತೀವ್ರಗೊಳ್ಳುತ್ತಿದೆ. ಸರ್ಕಾ ರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಬ್ಯಾಕ್‍ಲಾಗ್ ಹುದ್ದೆಗಳು ಖಾಲಿಯಿವೆ. 2017-18ನೇ ಸಾಲಿನಲ್ಲಿ ನಿರುದ್ಯೋಗಿಗಳ ಸಂಖ್ಯೆ ಕಳೆದ 45 ವರ್ಷದಲ್ಲೇ ಅತಿ ಹೆಚ್ಚು ದಾಖಲಾಗಿದೆ. ಜಿಎಸ್‍ಟಿ, ನೋಟು ಅಮಾ ನ್ಯೀಕರಣದಿಂದಾಗಿ ಸುಮಾರು 2.34 ಲಕ್ಷ ಸಣ್ಣ ಕೈಗಾರಿಕೆಗಳು ಮುಚ್ಚಿವೆ. 70 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಅಸಂಘಟಿತ ವಲಯದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಜನ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ನಿತ್ಯ 2060 ರೈತರು, ಕೃಷಿ ಕಾರ್ಮಿಕರು ಕೃಷಿ ಕೆಲಸ ವನ್ನು ತೊರೆಯುತ್ತಿದ್ದಾರೆ. `ಉದ್ಯೋಗ ನೀಡುವ’ ಆಶ್ವಾಸನೆ ನೀಡಿದ್ದ ಬಿಜೆಪಿ ಯುವಜನ ತೆಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು. ಸಮಾವೇಶದಲ್ಲಿ ಸಂಘಟನೆಯ ರಾಜ್ಯಾ ಧ್ಯಕ್ಷೆ ಎಂ.ಉಮಾದೇವಿ, ಜಿಲ್ಲಾಧ್ಯಕ್ಷ ಎಸ್. ಹೆಚ್.ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Translate »