ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ
ಮೈಸೂರು

ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ

February 16, 2019

ಮೈಸೂರು: ಜಮ್ಮು ವಿನಲ್ಲಿ ಪಾಕ್ ಬೆಂಬಲಿತ ಉಗ್ರರು ಸಿಆರ್ ಪಿಎಫ್ ಬಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿ 44 ಯೋಧರು ಹುತಾತ್ಮರಾದ ಹಿನ್ನೆಲೆ ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂ ರಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಮೈಸೂರಿನ ಪ್ರಮುಖ ಸಾರ್ವಜನಿಕ ಸ್ಥಳ, ಪ್ರವಾಸಿ ತಾಣಗಳು ಹಾಗೂ ಸೂಕ್ಷ್ಮ ಸ್ಥಳ ಗಳೆಂದು ಗುರ್ತಿಸಿರುವ ಕಡೆಗಳಲ್ಲಿ ಹೆಚ್ಚು ವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋ ಜಿಸಿ ಭಾರೀ ಬಂದೋಬಸ್ತ್ ಮಾಡಿ ತೀವ್ರ ನಿಗಾ ವಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷ್ನರ್ ಕೆ.ಟಿ. ಬಾಲಕೃಷ್ಣ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಪ್ರಧಾನ ಕಚೇರಿ ನಿರ್ದೇಶನದ ಮೇರೆಗೆ ಗುರುವಾರ ರಾತ್ರಿ ಯಿಂದಲೇ ಮೈಸೂರು ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಸೂಕ್ಷ್ಮ ಪ್ರದೇಶ ಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಚರ್ಚ್, ಕೇಂದ್ರ ಸರ್ಕಾರಿ ಕಚೇರಿ ಕಟ್ಟಡಗಳು, ಉದಯಗಿರಿ, ಶಾಂತಿನಗರ, ಗೌಸಿಯಾನಗರ, ಮಂಡಿ, ಎನ್‍ಆರ್ ಮೊಹಲ್ಲಾಗಳಲ್ಲಿ ಸಿಬ್ಬಂದಿಗಳನ್ನು ನಿಯೋ ಜಿಸಲಾಗಿದೆ ಎಂದು ಹೇಳಿದರು.

ಪ್ರತೀ 3 ತಾಸಿಗೊಮ್ಮೆ ಸೂಕ್ಷ್ಮ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲಿಸುವ ಜತೆಗೆ ಆಯಾ ಠಾಣಾ ಪೊಲೀಸರು, ಲಾಡ್ಜ್‍ಗಳು, ಹೋಟೆಲ್‍ಗಳಲ್ಲಿ ವಾಸ್ತವ್ಯ ಹೂಡಿರುವ ಹಾಗೂ ಕೊಠಡಿ ಖಾಲಿ ಮಾಡುವವರ ಮೇಲೂ ನಿಗಾ ಇರಿಸಿ, ಸಂಶಯಾಸ್ಪದರ ವಿಚಾರಣೆ ಮಾಡುತ್ತಿದ್ದಾರೆ ಎಂದರು.

ಗರುಡ, ಚೀತಾ, ಕೋಬ್ರಾ, ಕೆ.ಆರ್. ಸರ್ಕಲ್, ಮಾರುಕಟ್ಟೆಗಳು, ಜಿಲ್ಲಾಧಿಕಾರಿ ಕಚೇರಿ, ಪ್ರಮುಖ ವಾಣಿಜ್ಯ ಸಂಕೀರ್ಣ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯ ಗುಪ್ತ ವಾರ್ತೆ, ಇಂಟೆಲಿಜೆನ್ಸ್ ಬ್ಯೂರೋ ದಂತಹ ಪೊಲೀಸ್ ಇಲಾಖೆಯ ಏಜೆನ್ಸಿಗಳೊಂ ದಿಗೆ ಸಮನ್ವಯ ಸಾಧಿಸಿ ಅಹಿತಕರ ಘಟನೆಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಕಮಿಷ್ನರ್ ತಿಳಿಸಿದರು.

ಶ್ವಾನ ದಳ, ದುಷ್ಕøತ್ಯ ನಿಗ್ರಹ ದಳದ ಸಿಬ್ಬಂದಿ ಪೊಲೀಸ್ ಕಂಟ್ರೋಲ್ ರೂಂ (ಪಿಸಿಆರ್) ವಾಹನಗಳು, ಎಸ್‍ಬಿ ಕಾನ್ಸ್ ಟೇಬಲ್‍ಗಳು ನಿರಂತರ ಪೆಟ್ರೋಲಿಂಗ್ ನಡೆಸುವಂತೆ ಸೂಚಿಸಲಾಗಿದೆ. ಹೊರಗಡೆ ಯಿಂದ ಮೈಸೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ಚೆಕ್‍ಪೋಸ್ಟ್‍ಗಳಲ್ಲಿ ತಪಾ ಸಣೆ ಮಾಡುವಂತೆ ನಿರ್ದೇಶನ ನೀಡಲಾ ಗಿದೆ ಎಂದು ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ಸರ್ಕಲ್‍ಗಳು, ಪ್ರಮುಖ ರಸ್ತೆಗಳಲ್ಲಿ ಅಳ ವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿಗಳನ್ನು ಪೊಲೀಸ್ ಕಮೀಷ್ನರ್ ಕಚೇರಿಯಲ್ಲಿರುವ ಮಾನಿಟರಿಂಗ್ ಸೆಂಟರ್ ನಲ್ಲಿ ವೀಕ್ಷಿಸಿ ಕಟ್ಟೆಚ್ಚರ ವಹಿಸಲಾಗಿದೆ. ಒಟ್ಟಾರೆ ಮೈಸೂರು ನಗರದಲ್ಲಿ ಅಹಿತಕರ ಘಟನೆ ಗಳಾಗದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರ ವಹಿಸಲಾಗಿದೆ.

Translate »