ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಫೆ.23ರಂದು ಚುನಾವಣೆ
ಮೈಸೂರು

ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಫೆ.23ರಂದು ಚುನಾವಣೆ

February 16, 2019

ಮೈಸೂರು: ತೆರವಾಗಿ ರುವ ಮೈಸೂರು ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಫೆ.23ರಂದು ಚುನಾ ವಣೆ ನಡೆಸಲು ಮೈಸೂರು ವಿಭಾಗದ ಪ್ರಾದೇ ಶಿಕ ಆಯುಕ್ತರು ದಿನಾಂಕ ನಿಗದಿಪಡಿಸಿದ್ದಾರೆ. ಮೈಸೂರು ಜಿಪಂನಲ್ಲಿ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸೇರಿ ಅಧಿಕಾರ ಹಂಚಿಕೊಂಡಿದ್ದವು. ಪರಸ್ಪರ ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಎಂದು ನಿರ್ಧರಿಸಿ ಅದರಂತೆ ಅಧಿಕಾರ ಹಂಚಿ ಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದು ಳಿದ ವರ್ಗ-ಎ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ನಯೀಮಾ ಸುಲ್ತಾನ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸ ಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಜಿ. ನಟರಾಜ್ ಆಯ್ಕೆಗೊಂಡಿದ್ದರು. ಇದೀಗ ಇವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಫೆ.23ರಂದು ಮಧ್ಯಾಹ್ನ 12ಕ್ಕೆ ಜಿಪಂ ಕಾರ್ಯಾಲಯದಲ್ಲಿ ಚುನಾವಣೆ ನಡೆ ಯಲಿದೆ. ಜಿ.ನಟರಾಜ್ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ 2018ರ ಡಿ.21ರಂದು ರಾಜೀನಾಮೆ ಯನ್ನು ಅಂದಿನ ಅಧ್ಯಕ್ಷೆ ನಯೀಮಾ ಸುಲ್ತಾನ ಅವರಿಗೆ ಸಲ್ಲಿಸಿದ್ದರು. 2019ರ ಜ.5ರಂದು ಇವರ ರಾಜೀನಾಮೆಯನ್ನು ಅಂದಿನ ಅಧ್ಯಕ್ಷೆ ನಯೀಮಾ ಸುಲ್ತಾನ ಅಂಗೀಕರಿಸಿದ್ದರು. ಅದೇ ರೀತಿ 2018ರ ಡಿ.22ರಂದು ನಯಿಮಾ ಸುಲ್ತಾನ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀ ನಾಮೆಯನ್ನು 2019ರ ಜ.7ರಂದು ಸರ್ಕಾರ ಅಂಗೀಕರಿಸಿತ್ತು. ರಾಜ್ಯ ಸರ್ಕಾರ 2016ರಲ್ಲಿ ಪ್ರಕಟಿಸಿದ ಮೀಸಲಾತಿಯೇ ಮುಂದಿನ ಅವಧಿಗೂ ಇರಲಿದ್ದು, ಫೆ.23ರಂದು ಬೆಳಿಗ್ಗೆ 8ರಿಂದ 10ರವರೆಗೆ ನಾಮಪತ್ರಗಳ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನಾಮಪತ್ರಗಳ ಪರಿ ಶೀಲನೆ ನಂತರ 10 ನಿಮಿಷ ನಾಮಪತ್ರ ಹಿಂತೆಗೆದು ಕೊಳ್ಳಲು ಅವಕಾಶ ನೀಡಲಾಗಿದೆ. ಮತದಾನ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತವನ್ನು ಚಲಾವಣೆ ಮಾಡಬೇಕಿದ್ದು, ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳ ನಡುವೆ ಸಮಾನ ಮತಗಳು ಚಲಾವಣೆಗೊಂಡರೆ ಚುನಾವಣಾಧಿಕಾರಿ ಆಗಿ ಕಾರ್ಯನಿರ್ವಹಿ ಸುವ ಪ್ರಾದೇಶಿಕ ಆಯುಕ್ತರು ಚೀಟಿ ಎತ್ತುವ ಮೂಲಕ ಆಯ್ಕೆಯನ್ನು ಪ್ರಕಟಿಸಲಿದ್ದಾರೆ.

Translate »