ದಸರಾ ವಸ್ತುಪ್ರದರ್ಶನ ಆವರಣದಲ್ಲಿ ರಾಧೆ ಕೃಷ್ಣ ವೇಷಧಾರಿ ಚಿಣ್ಣರ ಕಲರವ
Uncategorized, ಮೈಸೂರು

ದಸರಾ ವಸ್ತುಪ್ರದರ್ಶನ ಆವರಣದಲ್ಲಿ ರಾಧೆ ಕೃಷ್ಣ ವೇಷಧಾರಿ ಚಿಣ್ಣರ ಕಲರವ

August 31, 2021

ಮೈಸೂರು, ಆ.೩೦(ಆರ್‌ಕೆಬಿ)- ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸೋಮವಾರ ಇಡೀ ಆವರಣ ಶ್ರೀಕೃಷ್ಣ ವೇಷಧಾರಿ ಚಿಣ್ಣ ರಿಂದಲೇ ತುಂಬಿ ಹೋಗಿತ್ತು. ಶ್ರೀ ಕೃಷ್ಣ ಜಯಂತಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕ್ಯೂಟ್ ಬೇಬಿ ಮತ್ತು ಲಕ್ಕಿ ಬೇಬಿ ಪಾರಂಪರಿಕ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ೭ ವರ್ಷ ದೊಳಗಿನ ೧೦೦ಕ್ಕೂ ಹೆಚ್ಚು ಮಕ್ಕಳು ಕೃಷ್ಣ-ರಾಧೆಯರ ವೇಷ ತೊಟ್ಟು ನಲಿದರು. ಕೃಷ್ಣ-ರಾಧೆಯ ವೇಷ ತೊಟ್ಟ ತಮ್ಮ ಮಕ್ಕಳೊಂದಿಗೆ ಪೋಷಕರೂ ಸಂಭ್ರಮಿಸಿದರು.

ಕೈಯ್ಯಲ್ಲಿ ಕೊಳಲು, ತಲೆಯಲ್ಲಿ ನವಿಲು ಗರಿ, ಪುಟ್ಟ ಕಿರೀಟ, ನಡುವಿಗೆ ಡಾಬು, ಬೆಣ್ಣೆ ಕೃಷ್ಣ, ವಾಸುದೇವ ಕೃಷ್ಣ, ರಾಧಾ ಕೃಷ್ಣ, ಗೋಪಿಕೃಷ್ಣ ಹೀಗೆ ನಾನಾ ರೀತಿಯ ಪುಟ್ಟ ಕೃಷ್ಣವೇಷಧಾರಿಗಳು ಭಗವ ದ್ಗೀತೆಯಲ್ಲಿನ ಕೃಷ್ಣನ ಸಂದೇಶಗಳನ್ನು ಸಾರಿದರು. ಹಾಡಿ ನಲಿದರು. ಇವೆಲ್ಲ ವನ್ನು ತದೇಕಚಿತ್ತದಿಂದ ನೋಡುತ್ತಿದ್ದ ಸಭಿಕರು ಆನಂದಿಸಿದರು. `ಕ್ಯೂಟ್ ಬೇಬಿ, ಲಕ್ಕಿ ಬೇಬಿ ಸ್ಪರ್ಧೆ’ಗೆ ಮೇಯರ್ ಸುನಂದಾ ಪಾಲನೇತ್ರ ಚಾಲನೆ ನೀಡಿ ಮಾತನಾಡಿ, ಜಾತಿ ಭೇದವಿಲ್ಲದೇ ಜಗತ್ತಿನಾದ್ಯಂತ ಕೃಷ್ಣ ನನ್ನು ಆರಾಧಿಸಲಾಗುತ್ತಿದೆ. ಭಗವದ್ಗೀತೆ ಯಲ್ಲಿ ಶ್ರೀಕೃಷ್ಣನ ವಿಚಾರಗಳು ಪ್ರಸ್ತುತ ವಾಗಿವೆ. ಚತುರ ಕೃಷ್ಣನ ಮಾರ್ಗದರ್ಶ ನದಿಂದ ಮಹಾಭಾರತದಲ್ಲಿ ಪಾಂಡವರು ಗೆಲುವು ಸಾಧಿಸಲು ಸಾಧ್ಯವಾಯಿತು. ಯಾದವ ಕುಲದಲ್ಲಿ ಹುಟ್ಟಿ ಮಾನವ ದೈವ ಸ್ವರೂಪನಾಗಿರುವುದಕ್ಕೆ ಕೃಷ್ಣ ಉದಾಹರಣೆಯಾಗಿದ್ದಾನೆ. ಇದಕ್ಕೆ ಯಾದವ ಕುಲ ಬಾಂಧವರು ಹೆಮ್ಮೆ ಪಡಬೇಕು. ಕೃಷ್ಣನ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಿಂದ ನಮ್ಮ ಜೀವನಕ್ಕೆ ಪ್ರೇರಣೆ ಸಿಗಬೇಕು ಎಂದರು.

ಇದೇ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಪತ್ರಕರ್ತ ರವೀಂದ್ರ ಜೋಶಿ, ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವ ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಮ ನಿರ್ದೇಶಿತ ನಿರ್ದೇ ಶಕಿ ರೇಣುಕಾ ರಾಜ್,ಮೃಗಾಲಯ ಪ್ರಾಧಿ ಕಾರದ ಸದಸ್ಯೆ ಜ್ಯೋತಿ ರೇಚಣ್ಣ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಅಜಯ್‌ಶಾಸ್ತಿç, ನವೀನ್ ಕೆಂಪಿ, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥ ಸಾರಥಿ, ಎಂ.ಆರ್.ಬಾಲಕೃಷ್ಣ, ಅಪೂರ್ವ ಸುರೇಶ್, ರಂಗನಾಥ್, ವಿದ್ಯಾ, ಮಾಲಿನಿ ಇನ್ನಿತರರು ಉಪಸ್ಥಿತರಿದ್ದರು.

ವಿಜೇತ ಚಿಣ್ಣರು: ಅಶ್ಮಿತ್ (೬.೫ ವರ್ಷ)- ಜಯನಗರದ ಅರುಣ್-ಸ್ಮಿತಾ ಪುತ್ರ (ಮೊದಲನೇ ಬಹುಮಾನ), ಸುರುವಿರಾಜ್ (೫ ವರ್ಷ)- ಜೆಎಸ್‌ಎಸ್ ಲೇಔಟ್ ಸುನೀಲ್ ಕುಮಾರ್-ಸವಿತಾ ದಂಪತಿ ಪುತ್ರಿ (ದ್ವಿತೀಯ), ಪ್ರಮಿತಾ ಜಿ.ಶೆಣೈ (೪ ವರ್ಷ)- ವಿಜಯ ನಗರ ನಿವಾಸಿ ಗಣೇಶ್ ಶೆಣೈ-ಲಾವಣ್ಯ ಪುತ್ರಿ (ತೃತೀಯ). ಕುವೆಂಪುನಗರದ ಪ್ರದೀಪ್ ಕಶ್ಯಪ್-ರಶ್ಮಿ ದಂಪತಿ ಪುತ್ರಿ ೨.೫ ವರ್ಷದ ಆದ್ಯ ಕಶ್ಯಪ್, ಕೃಷ್ಣಮೂರ್ತಿಪುರಂ ನಿವಾಸಿ ವಿದ್ಯಾ ಪ್ರದೀಪ್ ಮಂಜುನಾಥ್, ಶ್ರೀವಿದ್ಯಾ ಪುತ್ರಿ ೧.೨ ವರ್ಷದ ಪುಷ್ಕಲ ಪಿ.ಕಶ್ಯಪ್, ಮಂಡಿ ಮೊಹಲ್ಲಾದ ನಾಗೇಂದ್ರ ಕುಮಾರ್ ಪವನ್, ಭವಾನಿ ದಂಪತಿ ಪುತ್ರ ೧ ವರ್ಷದ ವಿಶ್ರುತ (ಸಮಾಧಾನ ಬಹುಮಾನ).

Translate »