Tag: Arkalgud

ಬಡ್ಡಿ ವ್ಯವಹಾರ ವೈಷಮ್ಯ; ವ್ಯಕ್ತಿಗೆ ಚಾಕು ಇರಿತ
ಹಾಸನ

ಬಡ್ಡಿ ವ್ಯವಹಾರ ವೈಷಮ್ಯ; ವ್ಯಕ್ತಿಗೆ ಚಾಕು ಇರಿತ

September 8, 2018

ಅರಕಲಗೂಡು: ಬಡ್ಡಿ ವ್ಯವಹಾರದ ವೈಷಮ್ಯ ಹಿನ್ನೆಲೆ ಹಾಡಹಗಲೇ ವ್ಯಕ್ತಿಗೆ ಚಾಕುವಿನಿಂದ ಇರಿದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಕನಕ ನಗರದ ನಿವಾಸಿ ಶ್ಯಾಮ್ ಚಾಕು ಇರಿತಕ್ಕೊಳಗಾದವರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಶಾಹಿನ್ ಎಂಬಾತ ಕೃತ್ಯವೆಸಗಿದವ ಎನ್ನಲಾಗಿದೆ. ಶ್ಯಾಮ್ ಅವರು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಬಡ್ಡಿ ವ್ಯವಾಹರವಾಗಿ ವೈಷಮ್ಯ ಹಿನ್ನೆಲೆ ಶಾಮ್ ಮನೆಗೆ ನುಗ್ಗಿ ಶಾಹಿನ್ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಪರಿಣಾಮ ಹೊಟ್ಟೆ, ಕತ್ತಿನ ಭಾಗಕ್ಕೆ ತೀವ್ರ ಗಾಯವಾಗಿದೆ. ಸ್ಥಳೀಯರು ಶಾಹಿನ್‍ನನ್ನು ಹಿಡಿದು ಪೆÇಲೀಸರಿಗೆ…

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಅರಕಲಗೂಡು, ರಾಮನಾಥಪುರ ವಿವಿಧೆಡೆ ಜಲಾವೃತ
ಹಾಸನ

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಅರಕಲಗೂಡು, ರಾಮನಾಥಪುರ ವಿವಿಧೆಡೆ ಜಲಾವೃತ

August 17, 2018

 ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ, ಶಾಸಕರ ಭೇಟಿ ಸುರಕ್ಷಿತ ಸ್ಥಳಗಳಿಗೆ ಜನರನ್ನು ರವಾನಿಸಲು ಸೂಚನೆ 4 ಗಂಜಿ ಕೇಂದ್ರ ತೆರೆಯುವಂತೆ ಡಿಸಿ ಸಲಹೆ ಹಾಸನ: – ನಿರಂತರ ಮಳೆ ಹಾಗೂ ಕಾವೇರಿ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣದಿಂದ ಅರಕಲಗೂಡು, ರಾಮನಾಥಪುರ ವ್ಯಾಪ್ತಿಯ ವಿವಿಧೆಡೆ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕ ಎ.ಟಿ.ರಾಮಸ್ವಾಮಿ ಅವರು, ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು….

ಭಾರೀ ಮಳೆಗೆ ಕುಸಿದ ಬ್ಯಾರನ್
ಹಾಸನ

ಭಾರೀ ಮಳೆಗೆ ಕುಸಿದ ಬ್ಯಾರನ್

July 19, 2018

ಅರಕಲಗೂಡು: ತಾಲೂಕಿ ನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಗೆಸೊಪ್ಪಿನ ಬ್ಯಾರನ್, ವಾಸದ ಮನೆ ಕುಸಿದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಹಂಡ್ರಂಗಿ ಗ್ರಾಪಂ ವ್ಯಾಪ್ತಿಯ ಮಾಳೆನಹಳ್ಳಿಯ ಸ್ವಾಮಿ ಅವರಿಗೆ ಸೇರಿದ ಹೊಗೆಸೊಪ್ಪಿನ ಬ್ಯಾರನ್ ಸಂಪೂರ್ಣ ಕುಸಿದ ಪರಿಣಾಮ ಪಕ್ಕದಲ್ಲಿದ್ದ ವಾಸದ ಮನೆಯ ಗೋಡೆಗಳು ಸಹ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿಯಾಗಿದೆ.

ನಿಯಮಾನುಸಾರ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ
ಹಾಸನ

ನಿಯಮಾನುಸಾರ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ

July 14, 2018

ಅರಕಲಗೂಡು: ಪಟ್ಟಣದಲ್ಲಿಂದು ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಸುಮಾರು 4 ಗಂಟೆಗಳಿಗೂ ಅಧಿಕ ಕಾಲ 200ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಸರ್ವೇ, ಪೋಡಿ ದುರಸ್ತಿ, ಭೂ ಮಂಜೂರಾತಿ, ತಿದ್ದುಪಡಿ ಸೇರಿದಂತೆ ಹಲವರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಸಲ್ಲಿಸಿದ ವೈಯಕ್ತಕ ಮನವಿಗಳನ್ನು ಆಲಿಸಿದರು. ಆಶ್ರಯ ಮನೆ ಹಂಚಿಕೆ, ಸರ್ಕಾರಿ ಜಮೀನು ಒತ್ತುವರಿ ತೆರವು,…

ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ
ಹಾಸನ

ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ

May 30, 2018

ಅರಕಲಗೂಡು: ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿದ್ದ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ನೀಡಿ ರಕ್ಷಿಸಿದ್ದಾರೆ. ತಾಲೂಕಿನ ಮಲ್ಲಿಪಟ್ಟಣದಲ್ಲಿ ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಯೊಂದು ಸಿಲುಕಿ ಸುಮಾರು ನಾಲ್ಕು ಗಂಟೆಗಳ ಕಾಲ ನರಳಿದೆ. ಸುದ್ದಿ ತಿಳಿದ ಅರಣ್ಯಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಗೆ ಅರವಳಿಕೆ ನೀಡಿ ಸೆರೆ ಹಿಡಿಯು ವಲ್ಲಿ ಸಫಲರಾದರು. ಆಕ್ರೋಶ: ಈ ಘಟನೆ ನಂತರ ಗ್ರಾಮಸ್ಥರು ಮಾತ್ರ ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಚಿರತೆಗಳ ಓಡಾಟದ ಬಗ್ಗೆ…

ಓವರ್‍ಟೇಕ್: ಸೇತುವೆಗೆ ಬಸ್ ಡಿಕ್ಕಿ
ಹಾಸನ

ಓವರ್‍ಟೇಕ್: ಸೇತುವೆಗೆ ಬಸ್ ಡಿಕ್ಕಿ

May 30, 2018

ಅರಕಲಗೂಡು: ಎರಡು ಬಸ್‍ಗಳ ಚಾಲಕರು ಓವರ್‍ಟೇಕ್ ಮಾಡುವ ಧಾವಂತದಲ್ಲಿ ಕೆಎಸ್‍ಆರ್ ಟಿಸಿ ಬಸ್ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ತಾಲೂಕಿನ ಬೆಟ್ಟಸೋಗೆ ಗೇಟ್ ಬಳಿ ನಡೆದಿದೆ. ಇಂದು ಬೆಳಗ್ಗೆ ಮೈಸೂರು ಕಡೆಗೆ ಹೋಗುತ್ತಿದ್ದ ಬಸ್‍ಅನ್ನು ಮತ್ತೊಂದು ಬಸ್ ಓವರ್‍ಟೇಕ್ ಮಾಡಲು ಮುಂದಾಗಿ ಸೇತುವೆ ಕಡೆಗೆ ನುಗ್ಗಿದೆ. ಆದರೆ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಸೇತುವೆ ತಡೆಗೋಡೆಗೆ ಗುದ್ದಿ ಅಲ್ಲೆ ನಿಂತಿತು. ಎರಡು ಬಸ್ ಚಾಲಕರ ಅವಾಂತರ ದಿಂದಾಗಿ ಬಸ್‍ನಲ್ಲಿದ್ದ ಪ್ರಯಾಣ ಕರು ಕೆಲಕಾಲ ಆತಂಕಕ್ಕೊಳಗಾದರಲ್ಲದೆ, ಚಾಲಕರ…

Translate »