ಬಡ್ಡಿ ವ್ಯವಹಾರ ವೈಷಮ್ಯ; ವ್ಯಕ್ತಿಗೆ ಚಾಕು ಇರಿತ
ಹಾಸನ

ಬಡ್ಡಿ ವ್ಯವಹಾರ ವೈಷಮ್ಯ; ವ್ಯಕ್ತಿಗೆ ಚಾಕು ಇರಿತ

September 8, 2018

ಅರಕಲಗೂಡು: ಬಡ್ಡಿ ವ್ಯವಹಾರದ ವೈಷಮ್ಯ ಹಿನ್ನೆಲೆ ಹಾಡಹಗಲೇ ವ್ಯಕ್ತಿಗೆ ಚಾಕುವಿನಿಂದ ಇರಿದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಕನಕ ನಗರದ ನಿವಾಸಿ ಶ್ಯಾಮ್ ಚಾಕು ಇರಿತಕ್ಕೊಳಗಾದವರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಶಾಹಿನ್ ಎಂಬಾತ ಕೃತ್ಯವೆಸಗಿದವ ಎನ್ನಲಾಗಿದೆ. ಶ್ಯಾಮ್ ಅವರು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದು, ಬಡ್ಡಿ ವ್ಯವಾಹರವಾಗಿ ವೈಷಮ್ಯ ಹಿನ್ನೆಲೆ ಶಾಮ್ ಮನೆಗೆ ನುಗ್ಗಿ ಶಾಹಿನ್ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಪರಿಣಾಮ ಹೊಟ್ಟೆ, ಕತ್ತಿನ ಭಾಗಕ್ಕೆ ತೀವ್ರ ಗಾಯವಾಗಿದೆ. ಸ್ಥಳೀಯರು ಶಾಹಿನ್‍ನನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Translate »