ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಅರಕಲಗೂಡು, ರಾಮನಾಥಪುರ ವಿವಿಧೆಡೆ ಜಲಾವೃತ
ಹಾಸನ

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಅರಕಲಗೂಡು, ರಾಮನಾಥಪುರ ವಿವಿಧೆಡೆ ಜಲಾವೃತ

August 17, 2018
  •  ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ, ಶಾಸಕರ ಭೇಟಿ
  • ಸುರಕ್ಷಿತ ಸ್ಥಳಗಳಿಗೆ ಜನರನ್ನು ರವಾನಿಸಲು ಸೂಚನೆ
  • 4 ಗಂಜಿ ಕೇಂದ್ರ ತೆರೆಯುವಂತೆ ಡಿಸಿ ಸಲಹೆ

ಹಾಸನ: – ನಿರಂತರ ಮಳೆ ಹಾಗೂ ಕಾವೇರಿ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣದಿಂದ ಅರಕಲಗೂಡು, ರಾಮನಾಥಪುರ ವ್ಯಾಪ್ತಿಯ ವಿವಿಧೆಡೆ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕ ಎ.ಟಿ.ರಾಮಸ್ವಾಮಿ ಅವರು, ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತ ನಾಡಿ, ರಾಮನಾಥಪುರದಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿ ಸೂಕ್ತ ತಾತ್ಕಾಲಿಕ ಪುರ್ನವಸತಿ ಕಲ್ಪಿಸಬೇಕು ಎಂದ ಅವರು, ಪ್ರವಾಹ ಪೀಡಿತ ಸ್ಥಳಗಳಲ್ಲಿ ಮನೆಗಳು ಜಲಾವೃತಗೊಂಡಿರುವುದನ್ನು ಪರಿಶೀಲಿಸಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಮನೆ ಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನದಿ ಪಾತ್ರದುದ್ದಕೂ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿ ಅಪಾಯ ಎದುರಾಗ ಬಹುದಾದ ಸ್ಥಳಗಳನ್ನು ಗುರುತಿಸಿ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು.

ಇದೇ ವೇಳೆ ರಾಮನಾಥಪುರದಲ್ಲಿ ಸಮು ದಾಯ ಭವನದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಶಾಸಕ ಎ.ಟಿ. ರಾಮಸ್ವಾಮಿಯವರೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಲೆ ಇರುವುದರಿಂದ ಹಾಲಿ ಇರುವ ಗಂಜಿ ಕೇಂದ್ರದಲ್ಲಿ 250 ಮಂದಿಗೆ ಊಟ, ವಸತಿ ಕಲ್ಪಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಪ್ರವಾಹದ ಮಟ್ಟ ಇನ್ನೂ ಹೆಚ್ಚಬಹುದು. ಹಾಗಾಗಿ, ಇನ್ನೂ ಮೂರ ನಾಲ್ಕು ಗಂಜಿ ಕೇಂದ್ರಗಳನ್ನು ತೆರೆದು ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಎ.ಟಿ.ರಾಮಸ್ವಾಮಿ ಅವರು, ಗಂಜಿ ಕೇಂದ್ರದಲ್ಲಿ ಸ್ವತಃ ತಾವೇ ಸಂತ್ರಸ್ತ ರಿಗೆ ಊಟ ಬಡಿಸಿದರು. ಬಳಿಕ ಮಾತನಾಡಿದ ಅವರು, ಕಳೆದ 60 ವರ್ಷಗಳಲ್ಲಿ ಕಂಡರಿ ಯದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗ ಮಂಡಲ ಮತ್ತು ಹಾರಂಗಿ ಜಲಾಶಯ ದಿಂದ ನೀರು ಹರಿದು ಬರುತ್ತಿದ್ದು, 1-1.5 ಕ್ಯೂಸೆಕ್ ನೀರು ಹರಿಯುತ್ತಿರುವುದ ರಿಂದ ಸಾವಿರಾರು ಎಕರೆ ಕೃಷಿ ಮತ್ತು ತೋಟ ಗಾರಿಕಾ ಬೆಳೆ ಹಾನಿಗೀಡಾಗಿದ್ದು ಜಲಾವೃತ ಗೊಂಡಿದೆ. ಸದ್ಯಕ್ಕೆ ರಾಮನಾಥಪುರದಲ್ಲಿ ಗಂಜಿ ಕೇಂದ್ರ ತೆರೆದಿದ್ದು ಕೇರಳಾಪುರ, ಕಟ್ಟೆಪುರ, ಕೊಣನೂರುಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗುವುದು ಎಂದರು.
ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆಯಡಿ ಮನೆ ಒದಗಿಸಲಾಗುವುದು, ಸದ್ಯಕ್ಕೆ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.

ಕಟ್ಟೆಪುರ-ಗೊಬ್ಬಳಿಮಾದಪುರ, ಕೊಣ ನೂರು-ರಾಮನಾಥಪುರ, ರಾಮನಾಥ ಪುರ-ಸಾಲಿಗ್ರಾಮ ಮೂರು ಕಡೆಗಳಲ್ಲಿ ಪ್ರವಾಹದಿಂದ ರಸ್ತೆಗಳು ಬಂದ್ ಆಗಿವೆ ಎಲ್ಲಾ ಪ್ರಯಾಣಿಕರು, ಪಾದಚಾರಿಗಳು ಈ ರಸ್ತೆಗಳನ್ನು ದಾಟುವ ಸಾಹಸಕ್ಕೆ ಹೋಗದಂತೆ ಮನವಿ ಮಾಡಿದ್ದಾರೆ. ಅಪಾಯದ ಅಂಚಿನಲ್ಲಿರುವ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರೆಳಬೇಕು. ಈ ಕಾರ್ಯದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದೊಂದಿಗೆ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಎಲ್ಲಾ ರೀತಿಯ ಪರಿಹಾರ ಕ್ರಮ ಗಳನ್ನು ಕೈಗೊಂಡಿದೆ ಪ್ರವಾಹ ಪರಿಸ್ಥಿತಿ ಇಳಿಮುಖವಾದ ನಂತರ ಬೆಳೆಗಳಿಗೆ ಪರಿಹಾರ ಒದಗಿಸುವ ಬಗ್ಗೆ ಗಮನ ಹರಿಸ ಲಾಗುವುದು. ಯಾರು ಆತಂಕಕ್ಕೆ ಒಳಗಾಗ ಬಾರದು ಮತ್ತು ನದಿ ಸಮೀಪ ಹೋಗಬಾರದು ತಗ್ಗು ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಸುರಕ್ಷತಾ ಸ್ಥಳಗಳಿಗೆ ತೆರಳಬೇಕು ಎಂದು ಸಲಹೆ ನೀಡಿದರು.

 

ಇದೇ ವೇಳೆ ಕೇರಳಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಶಾಸಕರು ಅಲ್ಲಿಯ ಕಾವೇರಿ ನದಿ ನೀರಿನಿಂದ ರಸ್ತೆ ಹಾಗೂ ಹೊಲ ಗದ್ದೆಗಳು ಜಲಾವೃತ ಗೊಂಡಿರುವುದನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಸದ್ಯಕ್ಕೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜನ ಜಾನು ವಾರುಗಳ ಪ್ರಾಣ ರಕ್ಚಣೆ ನಿರಾಶ್ರಿತರಿಗೆ ವಸತಿ ಊಟೋಪಚಾರಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪ್ರವಾಹ ತಗ್ಗಿದ ನಂತರ ಬೆಳೆ ಹಾನಿ ಪರಿಹಾರ ಹಾಗೂ ರಸ್ತೆಗಳ ದುರಸ್ತಿ ಬಗ್ಗೆ ಕ್ರಮ ವಹಿಸಲಾಗುವುದು ಎಂದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್, ತಹಶೀಲ್ದಾರ್ ನಂದೀಶ್, ಇತರೆ ಅಧಿಕಾರಿಗಳು ಹಾಜರಿದ್ದರು.

ರಾಮನಾಥಪುರದ ಬಳಿ ಕಾವೇರಿ ನದಿ ಅಪಾಯದ ಮಟ್ಟ ತಲುಪುತ್ತಿದ್ದು ಪ್ರವಾಹದಿಂದ ಜನರನ್ನು ಸುರಕ್ಷತಾ ಪ್ರದೇಶಗಳಿಗೆ ಸ್ಥಳಾಂತರಿಸಲು ಕೇರಳಾಪುರ, ಬಸವಾಪಟ್ಟಣ, ರಾಮನಾಥಪುರ, ಕಟ್ಟೆಪುರ, ರುದ್ರಪಟ್ಟಣ, ಕೊಣನೂರಿನಲ್ಲಿ ಕಾಲೇಜು, ಹಾಸ್ಟಲ್, ಸಮುದಾಯ ಭವನದಲ್ಲಿ ಸ್ಥಳ ಕಾಯ್ದಿರಿಸಲಾಗಿದೆ ಎಂದು ಎ.ಟಿ. ರಾಮಸ್ವಾಮಿ ಅವರು ತಿಳಿಸಿದರು. -ಎ.ಟಿ.ರಾಮಸ್ವಾಮಿ, ಶಾಸಕ

ಆ.25 ರವರೆಗೆ ಶಿರಾಡಿಘಾಟ್ ಸಂಚಾರ ಬಂದ್
ಶಿರಾಡಿಯಲ್ಲಿ ನಿರಂತರ ಮಳೆ, ಭೂ ಕುಸಿತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ-48(75)ರ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಶಿರಾಡಿಘಾಟ್ ಬಳಿ ಭೂ ಕುಸಿತ, ರಸ್ತೆಗಳು ಬಿರುಕುಬಿಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಆ.25ರವರೆಗೆ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಸಕಲೇಶಪುರ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿದೆ. ಗುಡ್ಡಗಳು ಕುಸಿಯುತ್ತಿವೆ. ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದೆ. ರಸ್ತೆಬದಿಯ ಬೃಹತ್ ಗಾತ್ರದ ಮರಗಳು ಧರೆಗುರು ಳುತ್ತಿವೆ. ಪರಿಣಾಮ ಈ ಮಾರ್ಗದ ಸಂಚಾರ ಅಪಾಯವಾಗಿದ್ದು, ವಾಹನಗಳ ಸಂಚಾರ ವನ್ನು ಮುಂದಿನ 8 ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು-ಮಂಗಳೂರು ರಸ್ತೆಯ ಶಿರಾಡಿಘಾಟ್ ಭಾಗದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ಆ.13ರಂದು ಬಿರುಗಾಳಿ ಸಹಿತ ಸುರಿದ ಭಾರಿ ಪ್ರಮಾಣದ ಮಳೆಗೆ ರಸ್ತೆಗೆ ಬಾಗಿರುವ ಮರಗಳೊಂದಿಗೆ ಭಾರಿ ಪ್ರಮಾಣದ ಭೂಕುಸಿತ ಉಂಟಾ ಗಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುತ್ತದೆ. ಈ ಜಾಗದಲ್ಲಿ ಮಣ್ಣನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬಸ್‍ಗಳು, ಬುಲೆಟ್ ಟ್ಯಾಂಕರ್, ಷಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳ ಸಂಚಾರವನ್ನು ಆ. 25ರ ಬೆಳಿಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶಿಸಿದ್ದಾರೆ.

ಅಪಾಯದಲ್ಲಿ 16 ರೈಲ್ವೆ ಸಿಬ್ಬಂದಿ
ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಸಕಲೇಶಪುರದ ಎಡಕುಮೇರಿ ಬಳಿ ರೈಲ್ವೆ ಇಲಾಖೆಯ 16 ಮಂದಿ ಸಿಬ್ಬಂದಿ ಅಪಾಯಕ್ಕೆ ಸಿಲುಕ್ಕಿದ್ದಾರೆ.

ನಿಲ್ದಾಣದ ಸುತ್ತ ಬಾರಿ ಮಳೆ ಹಾಗೂ ಗುಡ್ಡ ಕುಸಿತಗಳಿಂದಾಗಿ ರೈಲ್ವೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಈ ಮಾರ್ಗದ ಮೂಲಕ ಯಾವುದೇ ಭಾಗಕ್ಕೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಿಬ್ಬಂದಿ ಆಶ್ರಯ ಪಡೆದಿರುವ ರೈಲ್ವೆ ನಿಲ್ದಾಣ ಕಟ್ಟಡವು ಅಪಾಯಕ್ಕೆ ಸಿಲುಕಬಹುದು. ಹಾಗಾಗಿ, ತಮ್ಮನ್ನು ರಕ್ಷಿಸುವಂತೆ ಅವರು ರೈಲ್ವೆ ಇಲಾಖೆ ಮೇಲಾಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಎಡಕುಮೇರಿಯಲ್ಲಿ ಅಪಾಯಕ್ಕೆ ಸಿಲುಕಿರುವ ರೈಲ್ವೆ ಇಲಾಖೆಯ ಸಿಬ್ಬಂದಿಗಳನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸಕಲೇಶಪುರ- ಸುಬ್ರಮಣ್ಯ ಮಾರ್ಗದಲ್ಲಿ 42 ಕಡೆಗಳಲ್ಲಿ ರೈಲ್ವೆ ಹಳಿಗಳ ಮೇಲೆ ಬಾರಿ ಪ್ರಮಾಣದ ಭೂಕುಸಿತ ಕಲ್ಲುಗಳು ಬಿದ್ದಿದ್ದು ಯಾವುದೇ ಸ್ಥಳಕ್ಕೂ 50 ರಿಂದ 100 ಮಿಟರ್‍ನಷ್ಟು ಚಲಿಸಲು ಸಾಧ್ಯವಾಗುತ್ತಿಲ್ಲ. ರೈಲ್ವೆ ನಿಲ್ದಾಣವು ಕೊಚ್ಚಿ ಹೋಗುವ ಅಪಾಯವಿರುವುದರಿಂದ ಕೂಡಲೇ ರೈಲ್ವೆ ಸಿಬ್ಬಂದಿಗಳನ್ನು ರಕ್ಷಿಸಲು ಅವರು ಮನವಿ ಮಾಡಿದ್ದಾರೆ.

ಇದ್ದಕ್ಕೆ ತಕ್ಷಣ ಸ್ಪಂದಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಅಪಾಯಕ್ಕೆ ಸಿಲುಕಿರುವ ರೈಲ್ವೆ ಸಿಬ್ಬಂದಿಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ವಹಿಸಿದ್ದಾರೆ. ಹೇಗಾದರೂ ಮಾಡಿ ಎಲ್ಲಾ ಸಿಬ್ಬಂದಿಗಳನ್ನು ಯಾವುದೇ ಅಪಾಯವಿಲ್ಲದಂತೆ ಆದಷ್ಟು ಶೀಘ್ರ ವಾಗಿ ಹೊರತರಲು ನಿರ್ದೇಶನ ನೀಡಿರುವ ಅವರು ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನ ವಿಪತ್ತು ನಿರ್ವಹಣೆ ಕೋಶಕ್ಕೆ ಮಾಹಿತಿ ರವಾನಿಸಲಾಗಿದೆ. ಹೆಲಿಕಾಪ್ಟ್‍ರ್ ಸಹಾಯವನ್ನು ಪಡೆದು ಅವರೆಲ್ಲರನ್ನು ಮೇಲೆತ್ತಿ ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಎಸ್.ಪಿ.ನೆರವು: ರೈಲ್ವೆ ಸಿಬ್ಬಂದಿ ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅವರು ರಕ್ಷಣೆಗೆ ಧಾವಿಸಿದ್ದಾರೆ. ನುರಿತ ಐವರು ಪೊಲೀಸರ ತಂಡವನ್ನು ಈಗಾಗಲೇ ಎಡಕುಮೇರಿ ಕಡೆಗೆ ಕಳುಹಿಸಿದ್ದಾರೆ. ತುರ್ತಾಗಿ ಬೇಕಾಗಿರುವ ನೆರವನ್ನು ಪೊಲೀಸ್ ಇಲಾಖೆ ವತಿಯಿಂದ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಹೇಮಾವತಿಯಿಂದ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 30,375 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ 6 ಕ್ರಸ್ಟ್‍ಗೇಟ್ ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಜಲಾ ಶಯಕ್ಕೆ 24,855 ಕ್ಯೂಸೆಕ್ ಒಳ ಹರಿವು ಇದ್ದು ನದಿ ಹಾಗೂ ನಾಲೆ ಸೇರಿದಂತೆ ಒಟ್ಟು 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ 1,443 ಕ್ಯೂಸೆಕ್ ಒಳ ಹರಿವಿದ್ದರೆ, ನದಿಗೆ ಒಂದು ಸಾವಿರ ಕ್ಯೂಸೆಕ್ ಮಾತ್ರ ಬಿಡಲಾಗುತ್ತಿತ್ತು. ಎರಡು ದಶಕದ ಬಳಿಕ ಇದೇ ಮೊದಲು ಆಗಸ್ಟ್‍ಗೆ ಜಲಾಶಯ ಭರ್ತಿಯಾಗಿ ಭಾರಿ ಪ್ರಮಾಣ ದಲ್ಲಿ ನೀರು ಹರಿಸಲಾಗುತ್ತಿದೆ.

Translate »