ರಾಮನಾಥಪುರ: ಪಟ್ಟಣದಲ್ಲಿ ಡಿ. 12 ರಂದು ನಡೆಯುವ ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾರಥೋತ್ಸವದ ಮುನ್ನ ಗುರುವಾರ ಸಂಜೆ ವಾಹನೋತ್ಸವ ಶುಕ್ರವಾರ ಬೆಳಿಗ್ಗೆ ಪಂಚಮೀ ಉತ್ಸವ, ಮಹಾ ಪೂಜೆ, ಮಂಗಳ ವಿವಿಧ ವಾಧ್ಯಗಳೊಂದಿಗೆ ನಡೆಯಿತು. ರಾಮನಾಥಪುರದಲ್ಲಿ ನಡೆಯುತ್ತಿರುವ ರಥೋತ್ಸವದ ಪ್ರಯುಕ್ತ ದೇವಸ್ಥಾನವು ಮತ್ತು ಪಟ್ಟಣವು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರಗೊಂಡಿ ರುವ ಇಲ್ಲಿಯ ಕಾವೇರಿ ನದಿ ಮತ್ತು ದೇವಾಲಯಗಳಿಗೆ ರಾಜ್ಯ, ಜಿಲ್ಲೆ, ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶ ಗಳಿಂದ ಒಂದು ತಿಂಗಳುಗಳಿಂದ ಜನ ಸಾಗರವೇ ಹರಿದು…
ಸಾಲು ರಜೆ: ರಾಮನಾಥಪುರದಲ್ಲಿ ‘ಜನ’ಜಾತ್ರೆ
December 26, 2018ರಾಮನಾಥಪುರ: ಸಾಲು ಸಾಲು ರಜೆ ಪರಿಣಾಮ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಭಕ್ತ ಸಾಗರವೇ ಹರಿದು ಬಂದಿತು. ರಾಮನಾಥಪುರದಲ್ಲಿ ರಥೋತ್ಸವ ಮುಗಿದು ಹಲವು ದಿವಸಗಳೇ ಕಳೆದಿದ್ದರೂ ಜಾತ್ರೆಯಲ್ಲಿ ಜನಸಂದಣಿ ಸೇರುತ್ತಿರುವುದು ವಿಶೇಷವಾಗಿದೆ. ಶನಿವಾರ, ಭಾನು ವಾರ, ಮಂಗಳವಾರ ರಜೆ ಇದ್ದ ಕಾರಣ ಶೈಕ್ಷಣಿಕ ಪ್ರವಾಸ ಕ್ಕಾಗಿ ಆಗಮಿಸಿದ ರಾಜ್ಯದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ಕುಟುಂಬ ಸಮೇತ ರಾಗಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಬೆಳಿಗ್ಗೆ ಯಿಂದಲೇ ಶ್ರೀ ಕ್ಷೇತ್ರದತ್ತ ಧಾವಿಸಿದ್ದರಿಂದ…
ರಾಮನಾಥಪುರದಲ್ಲಿ ಕಲುಷಿತಗೊಳ್ಳುತ್ತಿದೆ ಕಾವೇರಿ ನದಿ
December 18, 2018ರಾಮನಾಥಪುರ: ಇಲ್ಲಿಯ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಕಳೆದು 4 ದಿನಿಗಳಾದರೂ ಜಾತ್ರೆಗೆ ಜನ ಸಮೂಹ ಜನಾಕರ್ಷಣೆಯ ಕೇಂದ್ರವಾಗಿದೆ. ಕಾವೇರಿ ನದಿ ಪುಣ್ಯಸ್ಥಳ ಮತ್ತು ಸುಂದರ ನೋಟ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಆದರೆ ಕಾವೇರಿ ನದಿಗೆ ಯಾವ ರೀತಿಯ ಮೂಲ ಸೌಲಭ್ಯವಿಲ್ಲದೆ ಬಂದ ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿದೆ. ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಪಡೆದಿ ರುವ ರಾಮನಾಥಪುರದ ಕಾವೇರಿ ನದಿ ಯಲ್ಲಿ ಮಿಂದರೆ ಪಾಪ ಪರಿಹಾರವಾಗು ತ್ತದೆ ಎಂಬ ಕಾಲವೊಂದಿತ್ತು. ಆದರೆ ಈಗ ಮಿಂದೆದ್ದರೆ…
ಶ್ರೀ ಕೊಳಲು ಗೋಪಾಲಸ್ವಾಮಿ ದೇವಸ್ಥಾನ ಲೋಕಾರ್ಪಣೆ
November 17, 2018ರಾಮನಾಥಪುರ: ಇಂತಹ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಬದುಕು ಕಾಣಲು ಸಾಧ್ಯ ಎಂದು ಮಾಜಿ ಸಚಿವ ಎ. ಮಂಜು ಹೇಳಿದರು. ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದಲ್ಲಿ ನೂತನ ಶ್ರೀ ಕೊಳಲು ಗೋಪಾಲ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಹಿರಿಯರ ವಿಚಾg Àದಾರೆಗಳನ್ನೂ ಅಳವಡಿಸಿಕೊಂಡು ಇಂತಹ ಪುಣ್ಯ ಕಾರ್ಯಗಳನ್ನು ಮಾಡಿ ಅವರ ತತ್ವ-ಅದರ್ಶಗಳನ್ನು ನಾವು ಜೀವನದಲ್ಲಿ ಅಳಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ…
ರಾಮನಾಥಪುರ ತಾಪಂ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಜೆ.ಸಿ.ಮಂಜೇಗೌಡ ಜಯಭೇರಿ.
November 1, 2018ರಾಮನಾಥಪುರ: ಇಂದು ನಡೆದ ರಾಮನಾಥಪುರ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗಂಗೂರು ಗ್ರಾಮದ ಜಿ.ಸಿ. ಮಂಜೇ ಗೌಡ ಅವರು ಸಮೀಪದ ಪ್ರತಿಸ್ವರ್ಧಿ ಬಿ.ಪಿ. ಶಿವೇಗೌಡ ಅವರಿಗಿಂದ 286 ಮತ ಗಳ ಅಂತರದಿಂದ ಗೆದ್ದು ಜಯಶೀಲರಾದರು. ತಾಲೂಕು ಪಂಚಾಯಿತಿಗೆ ಆಯ್ಕೆ ಯಾಗಿದ್ದ ಈ ಹಿಂದೆ ಗಂಗೂರು ಗ್ರಾಮದ ಶಿವೇಗೌಡ ಅವರು ಇತ್ತೀಚಗೆ ನಿಧನರಾದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಜೆಡಿಎಸ್‍ನಿಂದ ಜಿ.ಪಿ. ಶಿವೇಗೌಡ, ಕಾಂಗ್ರೆಸ್‍ನಿಂದ ಜಿ.ಸಿ. ಮಂಜೇಗೌಡ, ಬಿಜೆಪಿಯಿಂದ ನಾಗಣ್ಣ ಸ್ಪರ್ಧಿಸಿದ್ದರು….
ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ
October 21, 2018ರಾಮನಾಥಪುರ: ಕೃಷ್ಣರಾಜ ಅಣೆಕಟ್ಟೆಯ ಕಟ್ಟೇಪುರ ನಾಲೆ ಹಂತ, ಹಾರಂಗಿ, ಹೇಮಾವತಿ ನಾಲಾ ಹಂತದ ಬಯಲಲ್ಲಿ ಈ ಬಾರಿ ಭತ್ತದ ಬೆಳೆ ನಳ ನಳಿಸುತ್ತಿದ್ದು, ಅನ್ನದಾತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ವರ್ಷದಿಂದ ಮಳೆ ಇಲ್ಲದೇ ಬರದಿಂದ ಪರಿತಪಿಸುತ್ತಿದ್ದ ನಾಲಾ ವ್ಯಾಪ್ತಿಯ ಪ್ರದೇಶಗಳಲ್ಲಿ ಭತ್ತ ಬೆಳೆಯದೆ ಗದ್ದೆ ಪಾಳು ಬಿದ್ದಿತ್ತು. ಸದ್ಯ ಈ ಬಾರಿ ವರುಣನ ಕೃಪೆಯಿಂದ ಜಲಾಶಯಗಳು ಭರ್ತಿಯಾಗಿ ಕೆರೆ-ಕಟ್ಟೆಗಳು ಮತ್ತು ನಾಲೆ ಗಳಲ್ಲಿ ನೀರು ಸಮೃದ್ಧವಾಗಿ ಹರಿಯು ತ್ತಿದ್ದು, ಮೂರು ವರ್ಷಗಳಿಂದ ಬರಡಾಗಿದ್ದ ವಿಸ್ತಾರವಾದ…
ಸ್ವಚ್ಛತೆ, ಉತ್ತಮ ಕೆಲಸದಿಂದ ನೆಮ್ಮದಿಯ ಬದುಕು
August 24, 2018ರಾಮನಾಥಪುರ: ‘ದೇವಸ್ಥಾನ ಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳುವ ಜೊತೆಗೆ, ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನ ದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸ್ವಚ್ಛತಾ ಸಮಿತಿಯ ಸಂಚಾಲಕ ಎಸ್.ದಿವಾಕರ್ ಹೇಳಿದರು. ಪಟ್ಟಣದ ಶ್ರೀ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿ, ಪಟ್ಟಾಭಿರಾಮಸ್ವಾಮಿ ದೇವಸ್ಥಾನ ಗಳ ಪಕ್ಕದ ಪುಷ್ಕರಣಿಯಲ್ಲಿರುವ ಕಾವೇರಿ ನದಿಗೆ ಇಳಿಯುವ ಮೆಟ್ಟಿಲುಗಳನ್ನು ಸ್ವಚ್ಛಗೊಳಿ ಸಿದ ಬಳಿಕ ಅವರು ಮಾತನಾಡಿದರು. ಕೊಡಗಿನಲ್ಲಿ ಕಳೆದ ವಾರ ಸುರಿದ ಬಾರಿ ಮಳೆ…
ರಾಮನಾಥಪುರ: ಪ್ರವಾಹದಿಂದ 72.20 ಕೋಟಿ ರೂ. ಹಾನಿ
August 22, 2018ರಾಮನಾಥಪುರ: ಜೀವನದಿ ಕಾವೇರಿ ಪ್ರವಾಹದಿಂದ ಇಲ್ಲಿನ ವಿವಿಧ ಬಡಾವಣೆಗಳು ಹಾನಿಗೊಳಗಾಗಿ ಅಂದಾಜು 72.20 ಕೋಟಿ ರೂ. ನಷ್ಟ ಸಂಭವಿಸಿದ್ದು, ಇಂದೇ ಬೆಂಗಳೂರಿಗೆ ತೆರಳಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡುವೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ತಿಳಿಸಿದರು. ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರದಿಂದ ಶಿರದನ ಹಳ್ಳಿಯ ಕನಕಭವನದಲ್ಲಿ, ಐಬಿ ಸರ್ಕಲ್ ನಲ್ಲಿರುವ ಯಾತ್ರಿನಿವಾಸ, ವಿಶ್ವಕರ್ಮ ಸಮುದಾಯ ಭವನ, ಹಿರಿಯ ಪ್ರಾಥ ಮಿಕ ಶಾಲೆ, ಸಂಕ್ರಾಂತಿ ಕಲ್ಯಾಣ ಮಂಟಪ ಹಾಗೂ…
ಸಹಜ ಸ್ಥಿತಿಯತ್ತ ರಾಮನಾಥಪುರ
August 21, 2018ರಾಮನಾಥಪುರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕುಂಠಿತಗೊಂಡ ಹಿನ್ನೆಲೆ ಇಲ್ಲಿನ ನದಿ ಪ್ರವಾಹ ತಗ್ಗಿದ್ದು, ಜನ-ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಕೆಲ ದಿನಗಳಲ್ಲಿ ರಾಮನಾಥಪುರ ಗ್ರಾಮ ಜಲಾವೃತಗೊಂಡ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ಶುಕ್ರವಾರದಿಂದ ನದಿ ನೀರು ಹರಿಯುವಿನ ಪ್ರಮಾಣ ಸಾಕಷ್ಟು ಇಳಿದಿದ್ದು, ಮನೆ ತೊರೆದು ನೆರೆ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಕೊಂಚ ಮಟ್ಟಿಗೆ ನೆಮ್ಮದಿ ತಂದಿದೆ. ನೆರವಿನ ಮಹಾಪೂರ: ರಾಮನಾಥ ಪುರದ ಸರ್ಕಾರಿ ಶಾಲೆಯಲ್ಲಿ ತಾಲೂಕು ಆಡಳಿತ ನಿರಾಶ್ರಿತರಿಗೆ ತೆರೆದಿರುವ ನೆರೆ ಪರಿಹಾರ…
ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ
August 21, 2018ರಾಮನಾಥಪುರ: ಇಲ್ಲಿನ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಪ್ರಾಣಿಗಳಿಗೆ ನೀಡುವಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವ ನಡೆಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ರಾಮನಾಥಪುರದ ಸರ್ಕಾರಿ ಶಾಲೆಯೊಂದರಲ್ಲಿ ತೆರೆದಿದ್ದ ನೆರೆ ಪರಿಹಾರ ಕೇಂದ್ರಕ್ಕೆ ನಿರಾಶ್ರಿತ ಸಮಸ್ಯೆ ಆಲಿಸಲು ಶಾಸಕ ಎ.ಟಿ.ರಾಮಸ್ವಾಮಿ ಆವರೊಡನೆ ಸಚಿವ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರಿಗೆ ಬಿಸ್ಕೆಟ್ ಪ್ಯಾಕ್‍ಗಳನ್ನು ನೀಡಲು ಮುಂದಾದರು. ಆದರೆ ಇವರ ಬಿಸ್ಕೆಟ್ ವಿತರಿಸಿದ ಪರಿ ನೋಡುಗರನ್ನು ಮುಜುಗರಕ್ಕೀಡು ಮಾಡಿತು. ನಿರಾಶ್ರಿತರ ಕೈಗೆ…