ಸಹಜ ಸ್ಥಿತಿಯತ್ತ ರಾಮನಾಥಪುರ
ಹಾಸನ

ಸಹಜ ಸ್ಥಿತಿಯತ್ತ ರಾಮನಾಥಪುರ

August 21, 2018

ರಾಮನಾಥಪುರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕುಂಠಿತಗೊಂಡ ಹಿನ್ನೆಲೆ ಇಲ್ಲಿನ ನದಿ ಪ್ರವಾಹ ತಗ್ಗಿದ್ದು, ಜನ-ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಕಳೆದ ಕೆಲ ದಿನಗಳಲ್ಲಿ ರಾಮನಾಥಪುರ ಗ್ರಾಮ ಜಲಾವೃತಗೊಂಡ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ಶುಕ್ರವಾರದಿಂದ ನದಿ ನೀರು ಹರಿಯುವಿನ ಪ್ರಮಾಣ ಸಾಕಷ್ಟು ಇಳಿದಿದ್ದು, ಮನೆ ತೊರೆದು ನೆರೆ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಕೊಂಚ ಮಟ್ಟಿಗೆ ನೆಮ್ಮದಿ ತಂದಿದೆ.

ನೆರವಿನ ಮಹಾಪೂರ: ರಾಮನಾಥ ಪುರದ ಸರ್ಕಾರಿ ಶಾಲೆಯಲ್ಲಿ ತಾಲೂಕು ಆಡಳಿತ ನಿರಾಶ್ರಿತರಿಗೆ ತೆರೆದಿರುವ ನೆರೆ ಪರಿಹಾರ ಕೇಂದ್ರಕ್ಕೆ ವಿವಿಧ ಸಂಘ ಸಂಸ್ಥೆ ಗಳಿಂದ ಅಗತ್ಯ ವಸ್ತುಗಳ ಮಹಾ ಪೂರವೇ ಹರಿದು ಬರುತ್ತಿದೆ. ಅಲ್ಲದೆ ಜಿಲ್ಲಾ ಸಚಿವ ಹೆಚ್.ಡಿ.ರೇವಣ್ಣ, ಶಾಸಕ ಎ.ಟಿ.ರಾಮ ಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾದೇವರಾಜು, ತಾಪಂ ಅಧ್ಯಕ್ಷೆ ವೀಣಾ ಮಂಜುನಾಥ್ ಸೇರಿದಂತೆ ಇತರೆ ಜನಪ್ರತಿನಿಧಿಗಳು ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ನೆರವಿಗೆ ಮುಂದಾಗಿರುವುದು ನೊಂದವರಲ್ಲಿ ಹೊಸ ಭರವಸೆ ಮೂಡಿಸಿದೆ.

ಮನೆಗಳಿಗೆ ವಾಪಸ್ಸಾಗಲು ಹಿಂದೇಟು: ಗ್ರಾಮದ ಶ್ರೀರಾಮೇಶ್ವರ ದೇವಾಲಯ ಸುತ್ತಮುತ್ತಲ ಜನ ವಸತಿ ಪ್ರದೇಶ ಪ್ರವಾಹ ದಿಂದ ಕಳೆದ ಕೆಲ ದಿನಗಳಿಂದಲೂ ಜಲಾವೃತಗೊಂಡಿತ್ತು. ಶನಿವಾರದಿಂದ ನೀರಿನಮಟ್ಟ ಇಳಿದಿದ್ದರೂ ಸಾಂಕ್ರಾಮಿಕ ರೋಗ ಹಾಗೂ ಮನೆ ಕುಸಿಯುವ ಭೀತಿ ಹಿನ್ನೆಲೆ ಭಯದಿಂದ ಮನೆಕಡೆ ಮುಖ ಮಾಡಿದ್ದ ಸಂತ್ರಸ್ತರು ಪುನಃ ಗಂಜಿ ಕೇಂದ್ರಗಳಿಗೆ ಹಿಂದಿರುಗಿದ್ದಾರೆ.

ಪರ್ಯಾಯ ವಸತಿಗೆ ಆಗ್ರಹ: ಪ್ರವಾಹ ಪೀಡಿತ ವಾಸದ ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಬಿಸಿಲಿನಿಂದ ಒಣಗಿದರೂ ಕೂಡ ವಾಸಕ್ಕೆ ಯೋಗ್ಯವಾಗಿಲ್ಲ. ಕೂಡಲೇ ಮನೆ ನಿರ್ಮಿಸಿಕೊಡಲು ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕೆಂದು ನಿರಾ ಶ್ರಿತರು ಆಗ್ರಹಿಸಿದ್ದಾರೆ.

ಸಂಚಾರ ಆರಂಭ: ರಾಮನಾಥಪುರ ಗ್ರಾಮದಲ್ಲಿ ಜಲಾವೃತಗೊಂಡಿದ್ದ ರಸ್ತೆಗಳು ಭಾನುವಾರದಿಂದ ಸಂಚಾರಕ್ಕೆ ಮುಕ್ತಗೊಂ ಡಿವೆ. ಇದರೊಂದಿಗೆ ರಾಮನಾಥಪುರ, ಕೊಣನೂರು, ಬಸವಾಪಟ್ಟಣ, ಕೇರಳಾಪುರ ರಸ್ತೆ ಸಂಚಾರ ಆರಂಭಗೊಂಡಿದೆ.

ಗ್ರಾಮದೇವತೆಗಳಿಗೆ ಪೂಜೆ: ಜಲ ಪ್ರವಾಹ ಕಡಿಮೆಯಾಗಿ ಜನರು ಸಂಕಷ್ಟದಿಂದ ಪಾರಾಗಲಿ ಎಂಬ ನಿಟ್ಟಿನಲ್ಲಿ ಇಲ್ಲಿಯ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಸುಬ್ರಹ್ಮಣ್ಯ ಸ್ವಾಮಿ, ಅಗಸ್ತ್ಯೇಶ್ವರಸ್ವಾಮಿ, ಪಟ್ಟಾಭಿ ರಾಮಸ್ವಾಮಿ, ರಾಮೇಶ್ವರಸ್ವಾಮಿ ಮುಂತಾದ ದೇವಸ್ಥಾನಗಳಲ್ಲಿ ಇಂದು ಮುಂಜಾನೆ ಆರಂಭವಾದ ರುದ್ರ ಹೋಮ, ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯ ಮಧ್ಯಾಹ್ನದವರೆವಿಗೂ ನಡೆದವು.

ಬ್ಲೀಚಿಂಗ್ ಪೌಡರ್ ಸಿಂಪಡಣೆ: ರೋಗ-ರುಜಿನದ ಅಸ್ಪದವಾಗದಂತೆ ಪ್ರವಾಹಕ್ಕೆ ತುತ್ತಾಗಿದ್ದ ಐಬಿ ಸರ್ಕಲ್ ಮತ್ತು ರಾಮೇ ಶ್ವರ ದೇವಸ್ಥಾನದ ಸುತ್ತಮುತ್ತಲ ಪ್ರದೇಶ ಗಳಲ್ಲಿ ಸರ್ಕಾರಿ ಮಹಿಳಾ ಕಾಲೇಜು ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಗ್ರಾಪಂ ಜನ ಪ್ರತಿನಿಧಿಗಳು, ಸಿಬ್ಬಂದಿ ವರ್ಗ, ಸ್ಥಳೀಯ ಸಂಘ-ಸಂಸ್ಥೆಗಳ ಸದಸ್ಯರು ಸೇರಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿ, ಸ್ವಚ್ಛಗೊಳಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು.

ಸ್ಥಳದಲ್ಲೇ ಶಾಸಕ ಮೊಕ್ಕಾಂ: ಅಧಿಕಾರಿಗಳೊಂದಿಗೆ ಮೊಕ್ಕಾಂ ಸ್ಥಳದಲ್ಲೇ ಹೂಡಿ ರುವ ಶಾಸಕ ಎ.ಟಿ.ರಾಮಸ್ವಾಮಿ ಅವರು ಸಮರೋಪದಿಯಲ್ಲಿ ಪರಿಹಾರ ಕಾರ್ಯ ರೂಪಿಸಿದ್ದು, ಸರ್ಕಾರಿ ಶಾಲೆಯ ಆವ ರಣದ ತೆರೆದಿದ್ದ ನೆರೆ ಪರಿಹಾರ ಕೆಂದ್ರ ವನ್ನು ಇಲ್ಲಿನ ಸಂಕ್ರಾಂತಿ ಕಲ್ಯಾಣ ಮಂಟಪಕ್ಕೆ ಬದಲಿಸಿದ್ದಾರೆ.

ಇನ್ನೂ 10 ದಿನಗಳ ಕಾಲ ನಿರಾ ಶ್ರಿತರಿಗೆ ತಂಗಲು ವ್ಯವಸ್ಥೆ ಮಾಡ ಲಾಗಿದೆ. ಜಿಪಂ ಅಧ್ಯಕ್ಷೆ ಬಿ.ಶ್ವೇತಾ ದೇವ ರಾಜ್, ಸದಸ್ಯ ಮಂಥರ್‍ಗೌಡ, ಗ್ರಾಪಂ ಅಧ್ಯಕ್ಷ ಯೋಗೇಶ್, ತಹಶೀ ಲ್ದಾರ್ ನಂದೀಶ್, ಇಓ ಯಶವಂತ್, ಉಪ ತಹಶೀಲ್ದಾರ್ ಜಿ.ಸಿ.ಚಂದ್ರು ರಾಜಸ್ವ ನೀರೀಕ್ಷಕ ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಧಮೇಶ್, ಪಿಡಿಓ ವಿಜಯಕುಮಾರ್, ಕಾರ್ಯದರ್ಶಿ ಕುಮಾರ್ ರೇವಣ್ಣ, ಟಿಹೆಚ್‍ಓ ಸ್ವಾಮಿಗೌಡ ಮುಂತಾದ ವರು ಗಂಜಿ ಕೇಂದ್ರದಲ್ಲಿದ್ದಕೊಂಡು ನಿರಾಶ್ರಿತರ ಸೇವೆಯಲ್ಲಿ ತೊಡಗಿದ್ದಾರೆ.

Translate »