ರಾಮನಾಥಪುರ: ಇಂತಹ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಬದುಕು ಕಾಣಲು ಸಾಧ್ಯ ಎಂದು ಮಾಜಿ ಸಚಿವ ಎ. ಮಂಜು ಹೇಳಿದರು.
ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದಲ್ಲಿ ನೂತನ ಶ್ರೀ ಕೊಳಲು ಗೋಪಾಲ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಹಿರಿಯರ ವಿಚಾg Àದಾರೆಗಳನ್ನೂ ಅಳವಡಿಸಿಕೊಂಡು ಇಂತಹ ಪುಣ್ಯ ಕಾರ್ಯಗಳನ್ನು ಮಾಡಿ ಅವರ ತತ್ವ-ಅದರ್ಶಗಳನ್ನು ನಾವು ಜೀವನದಲ್ಲಿ ಅಳಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ. ನಿತ್ಯ ಒಡನಾಡುವ ಜನರ ಭಾವನೆಗಳನ್ನು ಗೌರವಿಸಿದಾಗ ಸಂಘರ್ಷ ರಹಿತ ಬದುಕು ನಮ್ಮದಾಗು ತ್ತದೆ. ನವ ಸಮಾಜದ ನಿರ್ಮಾಣವಾಗ ಬೇಕಾದರೆ ಇಂತಹ ಪುಣ್ಯ ಧಾರ್ಮಿಕ ದೇವಸ್ಥಾನದ ನಿರ್ಮಾಣಗಳ ಬಗ್ಗೆ ಜನರು ಸಹ ಗ್ರಾಮೀಣ ಜನರ ಒಡನಾಟ ಇಟ್ಟುಕೊಂಡು ಧಾರ್ಮಿಕ ಕಾರ್ಯಗಳು, ಇಂತಹ ಅಳುವಿನಲ್ಲಿರುವ ದೇವಸ್ಥಾನಗಳ ಬಗ್ಗೆ ನಾವುಗಳು ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು.
ಸನ್ಮಾನ: ನೂತನ ಶ್ರೀ ಗೋಪಾಲಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ ಮಾಜಿ ಸಚಿವ ಎ.ಮಂಜು ಸುಮಾರು 10 ಲಕ್ಷ ರೂ ಹಾಗೂ ಗ್ರಾಮಸ್ಥರ ಸಹಕಾರದಿಂದ ಸೇರಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಕ್ಕೆ ಸಹಕರಿಸಿದ ಮಾಜಿ ಸಚಿವ ಎ.ಮಂಜು ಹಾಗೂ ಅವರ ಪತ್ನಿ ತಾರಾ ಮಂಜು ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರ ಪತ್ನಿ ತಾರಾಮಂಜು, ತಾ.ಪಂ. ಸದಸ್ಯ ಡಾ.ಮಂತರ್‍ಗೌಡ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ಗ್ರಾಮಸ್ಥರಾದ ಯ.ಸೋಮಣ್ಣ, ಶೇಖರ್, ಈಶ್ವರೇಗೌಡ, ರಮೇಶ್, ಸತ್ಯ, ಅನು, ಎಚ್.ಎಲ್.ಕೃಷ್ಣ, ಸೂದರ್, ಮಂಜು, ಗ್ರಾ.ಪಂ ಮಾಜಿ ಅಧ್ಯಕ್ಷ ಗುಂಡಣ್ಣ ಮುಂತಾದವರು ಉಪಸ್ಥಿತರಿದ್ದರು.