‘ಹೆಚ್1 ಎನ್1 ಬಗ್ಗೆ ಭಯ ಬೇಡ’ ಬೀದಿ ನಾಟಕಕ್ಕೆ ಡಿಎಚ್‍ಓ ಚಾಲನೆ
ಹಾಸನ

‘ಹೆಚ್1 ಎನ್1 ಬಗ್ಗೆ ಭಯ ಬೇಡ’ ಬೀದಿ ನಾಟಕಕ್ಕೆ ಡಿಎಚ್‍ಓ ಚಾಲನೆ

November 17, 2018

ಹಾಸನ:  ಹೆಚ್1 ಎನ್1 ಬಗ್ಗೆ ಭಯ ಬೇಡ ಆದರೇ ಎಚ್ಚರ ಇರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೀದಿ ನಾಟಕಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಅವರು ಹಸಿರು ಭಾವುಟ ಪ್ರದರ್ಶಿ ಸುವುದರ ಮೂಲಕ ಚಾಲನೆ ನೀಡಿದರು.

ನಗರದ ಪೆನ್‍ಷನ್ ಮೊಹಲ್ಲಾದಲ್ಲಿ ರುವ ಶಾದಿಮಹಲ್ ವೃತ್ತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ-2018 ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಆರೋಗ್ಯ ಇಲಾಖೆಯಿಂದ ಹೆಚ್1 ಎನ್1 ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರಾರಂಭಿಸಲಾಗಿದೆ. ಡೆಂಗ್ಯೂ ಮತ್ತು ಚಿಕನ್ ಗುನ್ಯ ಬಗ್ಗೆ ತಿಳು ವಳಿಕೆಯನ್ನು ಕೊಡುವ ನಿಟ್ಟಿನಲ್ಲಿ ಬೀದಿ ನಾಟಕವನ್ನು ಏರ್ಪಡಿಸಲಾಗಿದೆ ಎಂದರು. ಇದರ ಪ್ರಯೋಜನವನ್ನು ಸಾಮಾನ್ಯ ಜನರು ಪಡೆದುಕೊಂಡು ಇದರ ಲಾಭ ಪಡೆಯಬಹುದು. ರೋಗ ಯಾವ ರೀತಿ ಹರಡುತ್ತದೆ, ಹೇಗೆ ನಿಯಂತ್ರಿಸಬಹುದು, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ರೋಗದಿಂದ ದೂರ ಇರಬಹುದು ಎಂದು ಕಿವಿಮಾತು ಹೇಳಿದರು.

ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡು, ಚಳಿಯೂ ಇದ್ದು, ದೇಹ ಬಳಲುತ್ತದೆ. ಕೆಲಬಾರಿ ವಾಂತಿ ಮತ್ತು ಭೇದಿಯೂ ಆಗಬಹುದು ಜೊತೆಗೆ ಉಸಿ ರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಕೆಮ್ಮಿದಾಗ ಇತರರಿಗೆ ಈ ವೈರಸ್ ಹರಡುತ್ತದೆ. ವೈದ್ಯರ ಸಲಹೆ ಪಡೆದು ಔಷಧಿ ಮೂಳಕ ಗುಣಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕೆಮ್ಮುವಾಗ, ಸೀನುವಾಗ ಕರವಸ್ತ್ರ ಇಲ್ಲವೇ ಟಿಶ್ಯೂ ಪೇಪರ್‍ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಆಗಾಗ್ಗ ಕೈಗಳನ್ನು ಸಾಬೂನಿನಿಂದ ತೊಳೆದು, ವೈಯಕ್ತಿಕ ಪಾಲಿಸಿ, ಸ್ನಾ ಮಾಡಿ ಶುಭ್ರ ಬಟ್ಟೆ ಧರಿಸ ಬೇಕು. ಸೋಂಕು ಇದ್ದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರುವುದು ಸೂಕ್ತ ಎಂದು ಹೇಳಿದರು. ಸೋಂಕು ಇದ್ದಲ್ಲಿ ವಿಶ್ರಾಂತಿ ಪಡೆದು ಒತ್ತಡವನ್ನು ನಿಭಾಯಿಸಿ, ಪೌಷ್ಠಿಕ ಆಹಾರ ಸೇವಿಸಿ ಉಸಿರಾಟದ ತೊಂದರೆ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆದು, ಜನ ನಿಬಿಡ ಪ್ರದೇಶದಿಂದ ದೂರವಿರುವಂತೆ ಅರಿವು ಮೂಡಿಸಿದರು.

ಈಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಹಾಗೂ ಕಲಾವಿಧ ಬಿ.ಟಿ.ಮಾನವ ತಂಡದಿಂದ ಬೀದಿ ನಾಟಕ ಪ್ರದರ್ಶಿಸಿ ಹೆಚ್1 ಎನ್1 ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ಇದೆ ವೇಳೆ ವೈದ್ಯರಾದ ರಾಜಗೋಪಾಲ್, ಸಂತೋಷ್ ಹಾಗೂ ಉಷಾ, ಪ್ರಶಸ್ತಿ ವಿಜೇತ ಬಿ.ಟಿ.ಮಾನವ ಇತರರು ಉಪಸ್ಥಿತರಿದ್ದರು.

Translate »