ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ
ಚಾಮರಾಜನಗರ

ಎಚ್1ಎನ್1 ಜ್ವರಕ್ಕೆ ಮಹಿಳೆ ಬಲಿ

October 31, 2018

ಚಾಮರಾಜನಗರ: ಎಚ್1 ಎನ್1 ಜ್ವರಕ್ಕೆ ಮಹಿ ಳೆಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಪಟ್ಟಣ ದಲ್ಲಿ ನಡೆದಿದೆ.
ಪಟ್ಟಣದ ಪಿಡಬ್ಲ್ಯುಡಿ ಕಾಲೋನಿ ನಿವಾಸಿ, ನಿವೃತ್ತ ಎಸ್‍ಐ ಶಿವಣ್ಣ ಅವರ ಪತ್ನಿ ನಾಗಮ್ಮ (58) ಮೃತಪಟ್ಟವರು. ಮೃತರು ಎರಡು ವಾರಗಳ ಹಿಂದೆ ಮೈಸೂರಿಗೆ ತೆರಳಿದ್ದರು. ಅಲ್ಲಿಂದ ಬಂದ ಬಳಿಕ ಅವರು ಎಚ್1ಎನ್1 ಜ್ವರಕ್ಕೆ ತುತ್ತಾಗಿ ದ್ದರು.

ಚಿಕಿತ್ಸೆಗಾಗಿ ನಾಗಮ್ಮ ಅವರನ್ನು ಅ.25ರಂದು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನ ಪ್ಪಿದ್ದಾರೆ. ಇದು ಜಿಲ್ಲೆಯಲ್ಲಿ ಈ ವರ್ಷ ಕಾಣಿಸಿಕೊಂಡ ಮೊದಲ ಎಚ್1ಎನ್1 ಪ್ರಕರಣ ಎನ್ನಲಾಗಿದೆ.

Translate »