ಇಂದು ಸುಬ್ರಹ್ಮಣ್ಯಸ್ವಾಮಿ ಷಷ್ಠಿ ರಥೋತ್ಸವ
ಹಾಸನ

ಇಂದು ಸುಬ್ರಹ್ಮಣ್ಯಸ್ವಾಮಿ ಷಷ್ಠಿ ರಥೋತ್ಸವ

January 12, 2019

ರಾಮನಾಥಪುರ: ಪಟ್ಟಣದಲ್ಲಿ ಡಿ. 12 ರಂದು ನಡೆಯುವ ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾರಥೋತ್ಸವದ ಮುನ್ನ ಗುರುವಾರ ಸಂಜೆ ವಾಹನೋತ್ಸವ ಶುಕ್ರವಾರ ಬೆಳಿಗ್ಗೆ ಪಂಚಮೀ ಉತ್ಸವ, ಮಹಾ ಪೂಜೆ, ಮಂಗಳ ವಿವಿಧ ವಾಧ್ಯಗಳೊಂದಿಗೆ ನಡೆಯಿತು.

ರಾಮನಾಥಪುರದಲ್ಲಿ ನಡೆಯುತ್ತಿರುವ ರಥೋತ್ಸವದ ಪ್ರಯುಕ್ತ ದೇವಸ್ಥಾನವು ಮತ್ತು ಪಟ್ಟಣವು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರಗೊಂಡಿ ರುವ ಇಲ್ಲಿಯ ಕಾವೇರಿ ನದಿ ಮತ್ತು ದೇವಾಲಯಗಳಿಗೆ ರಾಜ್ಯ, ಜಿಲ್ಲೆ, ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶ ಗಳಿಂದ ಒಂದು ತಿಂಗಳುಗಳಿಂದ ಜನ ಸಾಗರವೇ ಹರಿದು ಬರುತ್ತಿದೆ.

ಧಾರ್ಮಿಕ ವಿಧಿ-ವಿಧಾನ ಹಾಗೂ ವಿವಿಧ ಉತ್ಸವಾದಿಗಳೊಂದಿಗೆ ವಿಳಂಬಿ ಸಂವತ್ಸರದ ಉತ್ಸವಾದಿ ಗಳು ಈ ಜಾತ್ರೆಗೆ ಜನ ಸಾಗರವೇ ತುಂಬಿ ತುಳುಕ್ಕುತ್ತಿದೆ. ಗ್ರಾಮೀಣ ಪ್ರದೇಶದಿಂದ ಎತ್ತಿನಗಾಡಿ, ಟ್ಯಾಕ್ಷರ್‍ಗಳಲ್ಲಿ ಬಂದಂತಹ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಅವರಣದಲ್ಲಿ ಉತ್ಸವ ಮೂರ್ತಿ ಉತ್ಸವದಲ್ಲಿ ನಡೆದ ವಿವಿಧ ಮಂಗಳವಾಧ್ಯಗಳು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ದೇಗುಲವೇ ನಾದಮಯವಾಗಿ ನೆರೆದಿದ್ದ ಭಕ್ತರ ಮನಮುಟ್ಟಿ ಹೃದಯ ತಟ್ಟಿಸಿದ ವಿವಿಧ ವಾದ್ಯ ಪ್ರಕಾರಗಳು ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ಉತ್ಸವದಲ್ಲಿ ನಾದದ ಅಭಿಷೇಕವನ್ನು ಮಾಡಿ ದಂತೆ ಭಾಸವಾಯಿತು. ಪ್ರಥಮದಲ್ಲಿ ಪಟ್ಟಣದ ದೇವಸ್ಥಾನದ ರಸ್ತೆ, ಮುಖ್ಯ ರಸ್ತೆ ಮತ್ತು ದೇವಸ್ಥಾನದ ಸುತ್ತ ಉತ್ಸವದ ವೇಳೆ ದೇವರ ಮೂತಿಯನ್ನು ವಿಶೇಷವಾಗಿ ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಉತ್ಸವವನ್ನು ನೆರವೇರಿಸಲಾ ಯಿತು. ಇದೇ ಸಂದರ್ಭ ಅನೇಕ ಸುತ್ತು ದೇವಾಲಯವನ್ನು ಪ್ರದಕ್ಷಿಣೆಹಾಕುವ ಉತ್ಸವದ ವೇಳೆ ಪ್ರತಿಯೊಂದು ಸುತ್ತಿ ಗೊಂದರಂತೆ ಪ್ರತ್ಯೇಕ ವಾದ್ಯಪ್ರಕಾರದ ಮೂಲಕ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ನೆರೆವೇರಿಸುವುದು ಇಲ್ಲಿನ ವಿಶೇಷತೆಯಾಗಿದ್ದು ಸತತ ಮೂರು ಗಂಟೆ ಜರುಗುವ ಈ ಸಮಯ ವಿವಿಧ ರೀತಿಯ ವಾದ್ಯಗಳ ನಿನಾದವು ಸೇರಿದ್ದ ಭಕ್ತರನ್ನು ಪುಳಕಗೊಳಿಸಿ ಬೇರೆಯದೇ ಲೋಕಕ್ಕೆ ಕೊಂಡೊಯಿತು.

ಮೊದಲ ಸುತ್ತಿನಲ್ಲಿ ಕಂಬು-ಕಹಳೆ, ಪಂಚವಾದ್ಯ, ಎರಡನೇ ಸುತ್ತಿನಲ್ಲಿ ಮಂಗಳವಾದ್ಯ ಸದ್ದಿನೊಂದಿಗೆ, ಮೂರನೇ ಸುತ್ತಿನಲ್ಲಿ ಶಹನಾಯಿ, ನಾಲ್ಕನೇ ಸುತ್ತಿನಲ್ಲಿ ಸ್ಯಾಕ್ಸೋಫೋನ್ ಮತ್ತು ಕ್ಲಾರಿನಿಯೋಟ್, ಮಗದೊಂದು ಸುತ್ತಿನಲ್ಲಿ ಚಂಡೆವಾದ್ಯದ ನಿನಾದದೊಂದಿಗೆ ಶ್ರೀ ಸ್ವಾಮಿಯವರಿಗೆ ಭಕ್ತಿಗೀತೆಗಳ ಅರ್ಚನೆಮಾಡಿದ್ದು ಎಲ್ಲರ ಮನಗೆದ್ದಿತು. ಅಂತಿಮ ಪ್ರದಕ್ಷಿಣೆಯಲ್ಲಿ ಉತ್ಸವವನ್ನು ಕೂಡಿಕೊಂಡ ಉಡುಪಿಯ ಚಂಡೆವಾದ್ಯ ಭಕ್ತರ ಎದೆಯಲ್ಲಿ ಸಂಚಲನ ಮೂಡಿಸಿತು. ವಿವಿಧ ವಾದನದೊಂದಿಗೆ ಅವರು ಹಾಕಿದ ಲಯಬದ್ಧವಾದ ಕುಣಿತವು ಮತ್ತಷ್ಟು ಮುದನೀಡಿತು. ನಾದಪ್ರಿಯ ಶ್ರೀ ಸುಬ್ರಹ್ಮಣ್ಯನಿಗೆ ತಂಡೋಪತಂಡವಾಗಿ ನುಡಿಸಿದ ವಾದ್ಯ ಪ್ರಕಾರಗಳು ನಾದಾಭಿಷೇಕವನ್ನೇ ಮಾಡಿ ದವು. ನರೆದಿದ್ದ ಭಕ್ತರ ಮನವನ್ನು ಗೆದ್ದಿತು.

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯಮಠ ದಿವಾನರು ಶ್ರೀ ಸುದರ್ಶನ್‍ಜೋಯಿಸ್, ಇಲ್ಲಿಯ ದೇವಸ್ಥಾನದ ಪಾರ್‍ಪತ್ತೇಗಾರ್ ಶ್ರೀ ರಮೇಶ್‍ಭಟ್, ಭಾರತೀರಮಣ ಅಚಾರ್ಯ, ರಾಘವೇಂದ್ರಭಟ್, ಕಾತೀಕ್, ಶ್ರೀನಾಥ್ ಮುಂತಾದವರು ಉತ್ಸವದ ವೇಳೆ ಭಾಗವಹಿಸಿದ್ದರು.

Translate »