ನಗರಸಭೆಯಿಂದ ಬಿ.ಎಂ. ರಸ್ತೆಯ  ಒತ್ತುವರಿ ಕಟ್ಟಡಗಳ ತೆರವು  ವಿರೋಧಿಸಿ, ಪ್ರತಿಭಟನೆ ಮಾಡಿದವರ ಬಂಧನ
ಹಾಸನ

ನಗರಸಭೆಯಿಂದ ಬಿ.ಎಂ. ರಸ್ತೆಯ ಒತ್ತುವರಿ ಕಟ್ಟಡಗಳ ತೆರವು ವಿರೋಧಿಸಿ, ಪ್ರತಿಭಟನೆ ಮಾಡಿದವರ ಬಂಧನ

January 12, 2019

ಹಾಸನ: ನಗರದ ಬಿ.ಎಂ. ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡವರಿಗೆ ನಗರಸಭೆ ನೋಟಿಸ್ ಜಾರಿ ಮಾಡಿ ಗಡುವು ನೀಡಿದ್ದರೂ ಸ್ಪಂದಿಸದ ಕಾರಣ ಶುಕ್ರವಾರ ಜೆಸಿಬಿ ಮೂಲಕ ಪೊಲೀಸ್ ಸರ್ಪಗಾವಲಿನಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಯಿತು. ಇದನ್ನು ವಿರೋಧಿಸಿ ಬಿಗ್ ಬಜಾರ್ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮತ್ತು ಕಟ್ಟಡದ ಮಾಲೀಕರನ್ನು ಪೊಲೀಸರು ಬಂಧಿಸಿದರು.

ನಗರದ ಬಿ.ಎಂ.ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದ ಒತ್ತುವರಿದಾರರಿಗೆ ನಗರಸಭೆ ಈ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು. ಆದರೆ ಯಾರೊಬ್ಬರು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನ್ಯಾಯಾ ಲಯದ ಆದೇಶದ ಮೇರೆಗೆ ಒತ್ತುವರಿ ಮಾಡಿಕೊಂಡಿರುವ ಮಳಿಗೆಗಳ ತೆರವು ಕಾರ್ಯವನ್ನು ಯಾವ ಮುಲಾಜು ಇಲ್ಲದೇ ನಗರಸಭೆ ಆಯುಕ್ತ ಪರಮೇಶ್ ನೇತೃತ್ವದಲ್ಲಿ ಆರಂಭಿಸಿತು.

ಈಗಾಗಲೇ ಸರ್ವೇ ಕಾರ್ಯ ಮುಗಿ ದಿದ್ದು, ಕಟ್ಟಡ ಮಾಲೀಕರುಗಳಿಗೆ ಅಂಗಡಿ ಮುಂಗಟ್ಟುಗಳಲ್ಲಿರುವ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಅಂತಿಮ ಸೂಚನೆ ನೀಡಿ, ನಂತರ ಕಾರ್ಯಾಚರಣೆ ಪ್ರಾರಂಭಿಸಿತು. ಅನೇಕರು ಹೆದರಿ ಮೊದಲೇ ಅಂಗಡಿ ಮಳಿಗೆ ಒಳಗೆ ಇದ್ದ ಸಾಮಗ್ರಿ ಗಳನ್ನು ಖಾಲಿ ಮಾಡಿಕೊಂಡಿದ್ದರೇ, ಉಳಿದ ವರು ಶುಕ್ರವಾರ ಸ್ವಯಂ ಪ್ರೇರಿತವಾಗಿ ಖಾಲಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.

ಮೊದಲು ಬಿಗ್ ಬಜಾರ್ ಬೃಹತ್ ಕಟ್ಟಡದ 6 ಮೀಟರ್ ಒತ್ತುವರಿ ಜಾಗವನ್ನು ತೆರವು ಮಾಡಲು ಮುಂದಾದಾಗ ಕಟ್ಟಡದ ಮಾಲೀಕರು ಮತ್ತು ಬಿಜೆಪಿ ಕಾರ್ಯ ಕರ್ತರು ಮಳಿಗೆ ಮುಂದೆ ಕೆಲ ಸಮಯ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ನಗರ ಸಭೆ ಆಯುಕ್ತ ಪರಮೇಶ್ ಮತ್ತು ಪೊಲೀಸ್ ಅಧಿಕಾರಿಗಳು ತೆರವು ಮಾಡಲು ಅಡ್ಡಿಪಡಿಸ ಬಾರದು ಇದು ನ್ಯಾಯಾಲಯದ ಆದೇಶ ಎಂದು ತಿಳಿ ಹೇಳಿದರೂ ಇದಕ್ಕೆ ಒಪ್ಪದಿದ್ದರಿಂದ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಪೊಲೀಸ್ ಬಸ್‍ನಲ್ಲಿ ಕೊಂಡೊಯ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಸಭೆ ಸದಸ್ಯರ ಪತಿ ಪುನೀತ್, ಸದಸ್ಯ ಮೋಹನ್, ಪುರುಶಿ, ಉಮೇಶ್, ಬಿಗ್ ಬಜಾರ್ ಕಟ್ಟಡದ ಮಾಲೀಕರು ಇತರರೆ ಬಂಧಿತರು.

ಬಿಗ್ ಬಜಾರ್ ಪಕ್ಕದಲ್ಲಿಯೇ ಇದ್ದ ಮತ್ತೊಂದು ಅಕ್ರಮ ಕಟ್ಟಡದಲ್ಲಿ ಇದ್ದ ಫ್ಯಾಷನ್ ಶೋ ರೂಂ ಮುಂಭಾಗವನ್ನು ಮತ್ತೊಂದು ಜೆಸಿಬಿ ಮೂಲಕ ತೆರವುಗೊಳಿ ಸಲು ಮುಂದಾದರು. ಈ ವೇಳೆ 19ನೇ ವಾರ್ಡಿನ ನಗರಸಭೆ ಮಾಜಿ ಸದಸ್ಯ ರಮೇಶ್ ಬಾಬು ಅಡ್ಡಿಪಡಿಸಲು ಮುಂದಾದಾಗ ಆತನನ್ನು ಪೊಲೀಸರು ಎಳೆದೊಯ್ದರು.

2006ರ ಸಮ್ಮಿಶ್ರ ಸರ್ಕಾರದಲ್ಲಿ ನಗರದ ರೈಲ್ವೆ ನಿಲ್ದಾಣದಿಂದ ಎನ್‍ಆರ್‍ವೃತ್ತ, ತಣ್ಣೀರುಹಳ್ಳದವರಗೆ ಬಿಎಂ ರಸ್ತೆ ವಿಸ್ತರಣೆ ಮಾಡಲಾಗಿತ್ತು. ಅಂದು ಸರ್ಕಾರಿ ಭೂಮಿ ಯೊಂದಿಗೆ ಖಾಸಗಿ ಕಟ್ಟಡ ಮಾಲೀಕರಿಗೆ ಸೇರಿದ ಐದರಿಂದ ಹತ್ತು ಅಡಿಯಷ್ಟು ಜಾಗಕ್ಕೆ ಪರಿಹಾರ ನೀಡಲಾಗಿತ್ತು. ಪರಿಹಾರ ಪಡೆದೂ ರಾಜಕೀಯ ಪ್ರಭಾವ ಬೀರಿದ ಕೆಲವರು ತಮ್ಮ ಕಟ್ಟಡಗಳಿಗೆ ಹಾನಿಯಾಗ ದಂತೆ ಕಾಪಾಡಿಕೊಂಡಿದ್ದರು ಎನ್ನಲಾಗಿದೆ.

ಈ ಎಲ್ಲಾ ಕಾರಣದಿಂದ ಬಿಎಂ ರಸ್ತೆ ಕೆಲವೆಡೆ ಅಂಕುಡೊಂಕಾಗಿದ್ದು, ಇತ್ತೀಚಿನ ದಿನದಲ್ಲಿ ಜನಸಂಖ್ಯೆ ಹೆಚ್ಚಳ, ವಾಹನ ದಟ್ಟಣೆ ಸೇರಿದಂತೆ ಬಿಎಂ ರಸ್ತೆ ಸಂಚಾರ ದುಸ್ತರ ಎಂಬಂತಾಗಿ ದಿನ ನಿತ್ಯ ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಪಾದಚಾರಿ ರಸ್ತೆ ಗಳನ್ನು ಕೆಲ ಹೋಟೆಲ್ ಮತ್ತು ಅಂಗಡಿ ಮಾಲೀಕರು ತಮ್ಮ ಸ್ವತ್ತು ಎಂಬಂತೆ ಬಳಸಿಕೊಳ್ಳುತ್ತಿದ್ದರು. ನಗರದ ಬಿಗ್ ಬಜಾರ್ ಮಾಲೀಕರು ಪಾದಚಾರಿ ಮಾರ್ಗ ವನ್ನು ಗ್ರಾಹಕರ ದ್ವಿಚಕ್ರ ವಾಹನದ ಪಾರ್ಕಿಂಗ್ ಮಾಡಿಕೊಂಡಿದ್ದು, ಈ ಬಗ್ಗೆ ಕೆಲವರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅವರ ಗಮನಕ್ಕೂ ತಂದಿದ್ದರು.

ಈ ಸಂಗತಿಯನ್ನು ಮನಗಂಡ ಸಚಿವ ಹೆಚ್.ಡಿ. ರೇವಣ್ಣ ಬಿಎಂ ರಸ್ತೆಯ ಸಮಸ್ಯೆಗೆ ಮುಕ್ತಿದೊರಕಿಸಬೇಕು, ಈ ಹಿಂದೆ ಆಗಿರುವ ಲೋಪವನ್ನು ಸರಿಪಡಿಸಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಪರಿಣಾಮ ಇಂದು ರಸ್ತೆಗೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡ ತೆರವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

Translate »