ನಗರ್ಲೆ: ನಂಜನಗೂಡು ತಾಲೂಕು ನಗರ್ಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಸರ್ವೇಶ್ ಹಾಗೂ ಉಪಾಧ್ಯಕ್ಷೆಯಾಗಿ ಜಯಮ್ಮ ನಾಗರಾಜು ಆಯ್ಕೆಯಾದರು.
ನಂತರ ಅಧ್ಯಕ್ಷರಾದ ಸರ್ವೇಶ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರಲ್ಲದೆ, ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಮಹದೇವಯ್ಯ, ರಾಜನಾಯಕ, ಎನ್.ಬಿ. ವೀರೇಂದ್ರಸುರೇಶ್, ಎನ್.ಎನ್.ಶಂಭು, ಚಿನ್ನಪ್ಪ, ಹೆಚ್.ಜಿ.ಪುಟ್ಟಸ್ವಾಮಿ, ಜಯಮ್ಮ, ಎನ್.ಇ.ಗುರುಸ್ವಾಮಿ, ಮಹೇಶ್ವರಿ, ಸಾಕಮ್ಮ ಹಾಗೂ ರಿಟರ್ನಿಂಗ್ ಆಫೀಸರ್, ಡಿ.ಶಂಕರ್, ಕಾರ್ಯದರ್ಶಿ ಮಹದೇವಪ್ಪ, ಹಾಲು ಪರೀಕ್ಷಕ ಮಾದಪ್ಪ ಹಾಜರಿದ್ದರು.
ನಗರ್ಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಸರ್ವೇಶ್ ಮತ್ತು ಉಪಾಧ್ಯಕ್ಷೆಯಾಗಿ ಜಯಮ್ಮನಾಗರಾಜು ಆಯ್ಕೆಯಾದರು.