ಯುವ ಸೌರಭಕ್ಕೆ ಶಾಸಕ ಅಶ್ವಿನ್‍ಕುಮಾರ್ ಚಾಲನೆ
ಮೈಸೂರು

ಯುವ ಸೌರಭಕ್ಕೆ ಶಾಸಕ ಅಶ್ವಿನ್‍ಕುಮಾರ್ ಚಾಲನೆ

January 12, 2019

ತಿ.ನರಸೀಪುರ: ಗ್ರಾಮೀಣ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸೌರಭ ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಎಂ.ಅಶ್ವಿನ್‍ಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯುವ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮ ಯುವ ಸೌರಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಅನೇಕ ಪ್ರತಿಭೆಗಳಿದ್ದರೂ ಬೆಳಕಿಗೆ ಬಾರದೇ ಉಳಿಯುತ್ತಿದ್ದಾರೆ. ಅವರಿಗೊಂದು ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಮುಂಬರುವ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ದೊರಕಲಿದೆ ಎಂದರು.

ತಿ.ನರಸೀಪುರ ತಾಲೂಕು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿ ಕಲೆಗೆ ಸೂಕ್ತ ನೆಲೆ ಸಿಕ್ಕಿದೆ. ಅನೇಕರು ತಮ್ಮ ಪ್ರತಿಭೆಗಳ ಮೂಲಕ ತಾಲೂಕಿಗೆ ಗೌರವ ತಂದುಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ನಮ್ಮ ಯುವ ಸಮುದಾಯ ಕೂಡ ಮುನ್ನಡೆಯಬೇಕಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುತ್ತಿದ್ದು, ಅದನ್ನು ಬಳಸಿಕೊಳ್ಳುವತ್ತ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಮುಂದಾಗಬೇಕಿದೆ ಎಂದರು

ಜಿಪಂ ಸದಸ್ಯ ಜಯಪಾಲ್ ಭರಣಿ ಮಾತನಾಡಿ, ಉತ್ತಮ ಪ್ರದರ್ಶನ ನೀಡುವ ಮೂಲಕ ವಿವಿಧ ಹಂತಗಳಲ್ಲಿ ಭಾಗವಹಿಸಿ ತಾಲೂಕಿಗೆ ಗೌರವ ತರುವಂತೆ ಹಾರೈಸಿ ಶುಭಕೋರಿದರು.
ಇದೇ ವೇಳೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾ ತಂಡಗಳಾದ ಹಿಂದೂಸ್ತಾನಿ ಗಾಯನ, ಸುಗಮ ಸಂಗೀತ, ಜನಪದಗೀತೆ, ನೃತ್ಯ ರೂಪಕ, ಜಾನಪದ ನೃತ್ಯ, ವೀದಭದ್ರ ಕುಣಿತ, ಮಂಟೆಸ್ವಾಮಿ ಮಹಾಕಾವ್ಯ ಹಾಗೂ ನಾಟಕ ಪ್ರದರ್ಶನ ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲೆ ಕೆ.ನಾಗರತ್ನಮ್ಮ ವಹಿಸಿದ್ದರು. ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಜಿಪಂ ಸದಸ್ಯ ಟಿ.ಹೆಚ್.ಮಂಜುನಾಥ್ ಸೇರಿದಂತೆ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.

ತಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯುವ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮ ಯುವ ಸೌರಭಕ್ಕೆ ಶಾಸಕ ಎಂ.ಅಶ್ವಿನ್‍ಕುಮಾರ್ ಚಾಲನೆ ನೀಡಿದರು.

Translate »