ಹುಲ್ಲಹಳ್ಳಿ ಭಾಗದ 18 ಸಾವಿರ ಎಕರೆ ಭೂಮಿಗೆ ನೀರುಣಿಸಲು ನುಗು ಏತನೀರಾವರಿ ಯೋಜನೆ ಜಾರಿಗೆ ಹೋರಾಟಕ್ಕೂ ಸಿದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಪತಃ
ಮೈಸೂರು

ಹುಲ್ಲಹಳ್ಳಿ ಭಾಗದ 18 ಸಾವಿರ ಎಕರೆ ಭೂಮಿಗೆ ನೀರುಣಿಸಲು ನುಗು ಏತನೀರಾವರಿ ಯೋಜನೆ ಜಾರಿಗೆ ಹೋರಾಟಕ್ಕೂ ಸಿದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಪತಃ

January 12, 2019

ನಂಜನಗೂಡು: ಹುಲ್ಲಹಳ್ಳಿ ಗ್ರಾಮದ ಮಳೆ ಆಶ್ರಿತ 18 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನುಗು ಏತನೀರಾವರಿ ಯೋಜನೆ ಪೂರ್ಣಗೊಳಿಸಲು ನನ್ನ ಜನರೊಂದಿಗೆ ಯಾವ ಮಟ್ಟದ ಹೋರಾಟಕ್ಕೂ ನಾನು ಸಿದ್ದನಿದ್ದೇನೆ ಎಂದು ಡಾ.ಹೆಚ್.ಸಿಮಹದೇವಪ್ಪ ತಿಳಿಸಿದ್ದಾರೆ.

ನಂಜನಗೂಡು ವಿಧಾನ ಸಭಾ ಕ್ಷೇತ್ರದ ಹುರ ಗ್ರಾಮದಲ್ಲಿರುವ ಶ್ರೀ ಗಾಯಿತ್ರಿ ವಿದ್ಯಾ ಮಂದಿರದ ಎಸ್‍ಜಿವಿ ಹಿರಿಯ ಪ್ರಾಧಮಿಕ ಶಾಲೆಯ 15ನೇ ವರ್ಷದ ವಾರ್ಷಿಕೋತ್ಸವ ಮತ್ತು ಪೋಷಕರ ದಿನಾಚರಣೆ ಸಮಾರಂ¨ ಉದ್ಘಾಟಿಸಿ ಅವರು ಮಾತನಾಡಿದರು.
ನಂಜನಗೂಡಿನ ತಾಲೂಕಿನವನಾದ ನಾನು ನನ್ನ ಜನರ ಋಣ ತೀರಿಸಲು ಆರುನೂರು ಕೋಟಿ ರೂ. ಅನುದಾನದಲ್ಲಿ ನಂಜನಗೂಡು ಕ್ಷೇತ್ರಕ್ಕೂ ಹಣ ಬಿಡುಗಗೊಳಿಸಿದ್ದು, ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಈ ಭಾಗದ ಜನರು ಕೃಷಿಗೆ ಮಳೆಯನ್ನೇ ಅವಲಂಭಿಸಿದ್ದು, ನುಗು ಏತ ನೀರಾವರಿ ಯೋಜನೆಯಿಂದ ಜನರು ಸ್ವಾಭಿಮಾನದಿಂದ ಬದುಕುವ ರೀತಿ ಮಾಡಬೇಕಾಗಿದೆ. ಹಿಂದುಳಿದ ಪ್ರದೇಶವಾಗಿರುವ ಈ ಭಾಗಗಳಿಗೆ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನೀಡಿದ್ದು, ಅವುಗಳ ಜೊತೆಗೆ ಈ ನುಗು ಏತ ನೀರಾವರಿಯನ್ನು ಪೂರ್ಣಗೊಳಿಸಲು ಎಲ್ಲರೂ ಸಜ್ಜಾಗಬೇಕೆಂದು ಕರೆ ನೀಡಿದರು.

ಎಸ್‍ಜಿವಿ ಹಿರಿಯ ಪ್ರಾಥಮಿಕ ಶಾಲೆಯು ಹಿಂದುಳಿದ ಪ್ರದೇಶವಾದ ಸ್ಥಳದಲ್ಲಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾರ್ಜನೆಯ ಮೂಲಕ ಸೇವೆ ಸಲ್ಲಿಸಿರುತ್ತಿರುವ ಇಂಥ ಸಂಸ್ಥೆಗೆ ಸರ್ಕಾರದಿಂದಾಗಲಿ ಅಥವಾ ವಯಕ್ತಿಕವಾಗಲಿ ಮುಂದಿನ ದಿನಗಳಲ್ಲಿ ಸಹಾಯ ಮಾಡುವುದಾಗಿ ಇದೇಎ ವೇಳೆ ಭರವಸೆ ನೀಡಿದರು.

ಸಮಾರಂಭದಲ್ಲಿ ಮಾದ ಪಟ್ಟಣದ ತೋಂಟದಾರ್ಯ ಮಹಾಸ್ವಾಮಿಗಳು, ಹಲ್ಲರೆ ಮಹೇಶ ಸ್ವಾಮಿಗಳು, ಆಶೀರ್ವಚನ ನೀಡಿದರು. ಜಿಪಂ ಸದಸ್ಯ ಹೆಚ್.ಎಸ್.ದಯಾನಂದ ಮೂರ್ತಿ, ಸಂಸ್ಥಾಪಕ ಕಾರ್ಯದರ್ಶಿ ಎಸ್.ನಟರಾಜ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ಬಿಎಸ್‍ಪಿ ಅಧ್ಯಕ್ಷ ಶ್ರಿಕಂಠು, ದೇವನೂರು ಮಹದೇವಪ್ಪ, ಗೋವಿಂದ ರಾಜನ್, ಇಂದನ್ ಬಾಬು ಸೇರಿದಂತೆ ಹಲವಾರು ಪ್ರಮುಖರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

Translate »