ರಾಮನಾಥಪುರ: ಇಲ್ಲಿಯ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಕಳೆದು 4 ದಿನಿಗಳಾದರೂ ಜಾತ್ರೆಗೆ ಜನ ಸಮೂಹ ಜನಾಕರ್ಷಣೆಯ ಕೇಂದ್ರವಾಗಿದೆ. ಕಾವೇರಿ ನದಿ ಪುಣ್ಯಸ್ಥಳ ಮತ್ತು ಸುಂದರ ನೋಟ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಿದ್ದಾರೆ. ಆದರೆ ಕಾವೇರಿ ನದಿಗೆ ಯಾವ ರೀತಿಯ ಮೂಲ ಸೌಲಭ್ಯವಿಲ್ಲದೆ ಬಂದ ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿದೆ.
ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಪಡೆದಿ ರುವ ರಾಮನಾಥಪುರದ ಕಾವೇರಿ ನದಿ ಯಲ್ಲಿ ಮಿಂದರೆ ಪಾಪ ಪರಿಹಾರವಾಗು ತ್ತದೆ ಎಂಬ ಕಾಲವೊಂದಿತ್ತು. ಆದರೆ ಈಗ ಮಿಂದೆದ್ದರೆ ಕಾಯಿಲೆ ಗ್ಯಾರಂಟಿ ಅನ್ನುತ್ತಿದೆ ಭಕ್ತ ಸಮೂಹ. ಇಲ್ಲಿಗೆ ಬರುವ ಕೆಲವು ಭಕ್ತರು ತಾವು ತಂದ ಹಳೆ ಬಟ್ಟೆಗಳು, ಪ್ಲಾಸ್ಟಿಕ್, ದೇವರ ಮರದ ಸಾಮಾನುಗಳು ಅಲ್ಲದೆ ಹಳೆ ಫೋಟೊಗಳನ್ನು ನದಿಗೆ ತಂದು ಹಾಕುತ್ತಿರುವುದರಿಂದ ನೈರ್ಮಲ್ಯದ ಕೊರತೆಯಿಂದಾಗಿ ಕಾವೇರಿ ನದಿ ಕಲುಷಿತ ಗೊಂಡಿದ್ದು, ಸ್ವಚ್ಛತೆ ಕಾರ್ಯ ಕೈಗೊಳ್ಳ ಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಖ್ಯಾತ ದೇವಾಲಯಗಳಾದ ಶ್ರೀ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ, ಅಗಸ್ಥೇಶ್ವರಸ್ವಾಮಿ, ಪಟ್ಟಾಭಿರಾಮಸ್ವಾಮಿ, ರಾಘವೇಂದ್ರ ಮಠ, ವರಧಾನ ಬಸವೇ ಶ್ವರಸ್ವಾಮಿ ಹೀಗೆ 65 ದೇವರ ಮೂರ್ತಿ ಗುಡಿಗಳನ್ನು ಕಾಣಬಹುದು. ರಾಮನಾಥ ಪುರವು ಹಾಸನ, ಮಡಿಕೇರಿ, ವಿರಾಜ ಪೇಟೆ, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರಿಗೆ ಹೋಗುವ ಹೆದ್ದಾರಿ ಬದಿ ಯಲ್ಲಿದೆ. ಈ ಕಾರಣದಿಂದಲೇ ಹೆದ್ದಾರಿ ಯಲ್ಲಿ ಸಂಚರಿಸುವ ಪ್ರವಾಸಿಗರು ದೇವ ಸ್ಥಾನ ಹಾಗೂ ವಿಶ್ರಾಂತಿ, ಉಟ ಉಪ ಚಾರಕ್ಕೆ ಹಾಗೂ ಕಾವೇರಿ ನದಿ ವೀಕ್ಷಣೆಗೆ ಇಲ್ಲಿಗೆ ಬರುತ್ತಾರೆ. ಬಂದ ಪ್ರವಾಸಿಗರಿಗೆ ಕಾವೇರಿ ನದಿ ದಂಡೆಯಲ್ಲಿ ಯಾವ ಮೂಲ ಸೌಲಭ್ಯವಿಲ್ಲದೇ ಮುಜರಾಯಿ ಇಲಾಖೆ ಹಾಗೂ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕಾವೇರಿ ನದಿ ಮೆಟ್ಟಿಲು ಭದ್ರವಾಗಿಲ್ಲ: ಭಕ್ತರು ರಾಮೇಶ್ವರಸ್ವಾಮಿ ದೇವಸ್ಥಾನದ ಹತ್ತಿರ ಕಾವೇರಿ ನದಿ ವಹ್ನಿ ಪುಷ್ಕರಣಿಯಲ್ಲಿ ರುವ ಮೀನುಗಳನ್ನು ನೋಡುವ ಜಾಗ ದಲ್ಲಿ ಮೆಟ್ಟಿಲುಗಳು ಇತ್ತೀಚೆಗೆ ಹಲ ವೆಡೆ ಸಡಿಲಗೊಂಡು ಬಿರುಕು ಬಿಟ್ಟಿದ್ದರೆ ಕೆಲವೆಡೆ ಬಿದ್ದಿವೆ. ಮೀನು ನೋಡಲು ಹಾಗೂ ಸ್ನಾನಕ್ಕೆ ಬಂದ ಭಕ್ತರು ಆಯ ತಪ್ಪಿದರೆ ನದಿಗೆ ಮುಗ್ಗರಿಸಿ ಬೀಳುವ ಅಪಾಯ ವಿದೆ. ಎಷ್ಟೋ ಸಾರಿ ಕೆಲವರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಅಲ್ಲದೆ ಇದರ ಪಕ್ಕದಲ್ಲಿ ಸುಳಿ ಇದ್ದು ಈಗಾಗಲೇ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯ ವಹ್ನಿ ಪುಷ್ಕರಣಿಗೆ ಇಳಿಯುವ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಮತ್ತೊಬ್ಬರ ಸಹಾಯ ಪಡೆ ಯಬೇಕಾದ ಪರಿಸ್ಥಿತಿಯಿದೆ. ಇಲ್ಲಿಯ ಮೆಟ್ಟಿಲುಗಳನ್ನು ಸರಿಪಡಿಸಬೇಕಾಗಿದೆ.
ಊಟದ ಭವನ ನಿರ್ಮಿಸಲು ಒತ್ತಾಯ: ಮಹಿಳೆಯರು ಬಟ್ಟೆ ಬದ ಲಿಸುವ ಸ್ಥಳ ವಿಲ್ಲದೆ ಬಯಲಿನಲ್ಲಿಯೇ ಬಟ್ಟೆ ಬದಲಾ ಯಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಲ್ಲದೆ ಭಕ್ತರು ತಮ್ಮ ಮನೆಗಳಿಂದ ಬಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ಮೇಲೆ ಭಕ್ತರು ತಾವು ಮನೆಯಿಂದ ತಂದಂತಹ ಊಟವನ್ನು ಸ್ಥಳ ಇಲ್ಲದೇ ಉರಿ ಬಿಸಿಲಿನಲ್ಲಿ ಉಟದ ವ್ಯವಸ್ಥೆ ಮಾಡಬೇಕಾಗಿದೆ. ಆದ್ದರಿಂದ ದೇವ ಸ್ಥಾನದ ಪಕ್ಕದಲ್ಲಿರುವ ಖಾಲಿ ಸ್ಥಳವಿದ್ದು ಅಲ್ಲಿ ಒಂದು ಭವನ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.