ಸಂಗೀತ, ನೃತ್ಯ ಕಲೆಗೆ ಕರ್ನಾಟಕದ ಕೊಡುಗೆ ಅಪಾರ
ಹಾಸನ

ಸಂಗೀತ, ನೃತ್ಯ ಕಲೆಗೆ ಕರ್ನಾಟಕದ ಕೊಡುಗೆ ಅಪಾರ

December 18, 2018

ಅರಸೀಕೆರೆ: ಕರ್ನಾಟಕವು ಸಂಗೀತ ಮತ್ತು ನೃತ್ಯ ಕಲೆಗಳಲ್ಲಿ ಮಹತ್ವ ವಾದ ಕೊಡುಗೆಗಳನ್ನು ನೀಡಿದೆ.ಅದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಕಲಾವಿದರಿಗೆ ಮತ್ತು ನಮ್ಮ ಸಂಸ್ಕøತಿಗೆ ಶಾಶ್ವತ ಸ್ಥಾನ ಗಳನ್ನು ನೀಡಲು ಸಾದ್ಯವಾಗುತ್ತದೆ ಎಂದು ಉದ್ಯಮಿ ಅರುಣ್‍ಕುಮಾರ್ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀ ವೆಂಕಟೇಶ್ವರ ಕಲಾ ಭವನ ದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾ ಡೆಮಿಯು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದೊಂದಿಗೆ ಆಯೋಜಿ ಸಿದ್ದ ‘ಸಂಗೀತ ನೃತ್ಯೋತ್ಸವ’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಮಹಾರಾಜರ ಆಳ್ವಿಕೆಯರೆಗೂ ನಮ್ಮ ರಾಜರು ಸಂಗೀತ ಮತ್ತು ನೃತ್ಯ ಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬಂದರು. ನಂತರ ಆದ ಬದ ಲಾವಣೆಗಳ ಪರಿಣಾಮ ಕಾಲ ಕ್ರಮೇಣ ನಮ್ಮ ಸಂಸ್ಕøತಿ ಮತ್ತು ಸಂಸ್ಕಾರಗಳನ್ನು ಬಿಂಬಿಸುವ ಪುರಾತನ ಕಲೆಗಳಿಗೆ ಪ್ರೋತ್ಸಾಹ ಕಡಿಮೆಯಾಯಿತಾದರೂ ಕಲಾ ರಸಿಕರು ಮತ್ತು ಅಭಿಮಾನಿಗಳು ಸ್ವಂತಃ ಸಂಘಟನೆ ಮೂಲಕ ಕಲೆಗಳನ್ನು ಉಳಿಸಿ ಪ್ರೋತ್ಸಾ ಹಿಸಿಕೊಂಡು ಬಂದಿರುವ ಪರಿಣಾಮ ಇಂದು ಆ ಕಲೆಗಳನ್ನು ಆಸ್ವಾಧಿಸುತ್ತಿದ್ದೇವೆ. ಈ ಕೆಲಗಳನ್ನು ಉಳಿಸುವ ಬೆಳಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಮ್ಮ ಸಂಸ್ಕøತಿ ಕಲೆಗಳನ್ನು ಪೋಷಿಸಿ ಬೆಳೆಸಿದಾಗ ಮಾತ್ರ ನಮ್ಮ ನಾಡು ನುಡಿಗೆ ಹೆಚ್ಚು ಶಕ್ತಿಯೂ ಬರುತ್ತದೆ ಮತ್ತು ವಿಶ್ವದಲ್ಲಿ ತನ್ನದೇ ಸ್ಥಾನ ಗಳನ್ನು ಗುರುತಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದರು.

ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಮಾತನಾಡಿ, ಅರಸೀಕೆರೆ ತಾಲೂಕು ಕಲಾ ಸಂಸ್ಕøತಿ ಲೋಕಕ್ಕೆ ತನ್ನ ಒಡಲಿನಿಂದ ಅನೇಕ ಕಲಾವಿದ ದಿಗ್ಗಜರನ್ನು ನೀಡಿದೆ. ಸ್ಥಳೀಯ ಜನತೆ ಅಂದಿನಿಂದಲೂ ಕಲೆ ಗಳಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಮುಂದೆಯೂ ಪ್ರೋತ್ಸಾಹ ನೀಡುತ್ತಾರೆ ಎಂಬ ನಂಬಿಕೆ ಕಲಾವಿದರಿಗೆ ಇದ್ದು ಅದನ್ನು ಹುಸಿ ಮಾಡದೇ ಯುವ ಜನತೆ ಸೇರಿದಂತೆ ಎಲ್ಲ ವಯೋಮಾನದವರು ನಮ್ಮ ರಾಜ್ಯದ ಕಲಾವಿದರಿಗೆ ಸದಾ ಪ್ರೋತ್ಸಾಹಿಸಬೇಕು ಎಂದರು.

ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ಅಧ್ಯಕ್ಷ ಫಯಾಜ್ ಖಾನ್ ಮಾತನಾಡಿ, ಆಕಾಡೆಮಿಯು ರಾಜ್ಯಾದ್ಯಂತ ಇರುವ ಕಲಾವಿದರನ್ನು ಒಗ್ಗೂಡಿಸಿ ರಾಜ್ಯದ ವಿವಿ ಧೆಡೆ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿದೆ. ಜೊತೆ ಜೊತೆಯಲ್ಲಿ ಸ್ಥಳಿಯ ಕಲಾವಿದರಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡು ವುದರ ಮೂಲಕ ಸ್ಥಳೀಯ ಕಲೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇಂದಿನ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಲಾ ದಿಗ್ಗಜರು ತಮ್ಮ ಕಲಾ ಪ್ರದರ್ಶನವನ್ನು ಪ್ರದರ್ಶಿಸಿದ್ದಾರೆ. ಇಂತಹ ಕಲಾವಿದರನ್ನು ನಮ್ಮ ಆಕಾ ಡೆಮಿಯು ಸದಾ ಪ್ರೋತ್ಸಾಹಿಸಿ ಉತ್ತೇ ಜಿಸುತ್ತಾ ಕಲಾ ರಂಗದಲ್ಲಿ ಉತ್ತುಂಗಕ್ಕೆ ಏರಲು ಎಲ್ಲ ಸಹಕಾರವನ್ನು ನೀಡುತ್ತಾ ಬಂದಿದೆ ಎಂದರು.

ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕಲಾಶ್ರೀ ವೈ.ಕೆ.ಮುದ್ದುಕೃಷ್ಣ, ಪಂಚಮ ಹಳಿಬಂಡಿ,ಸುನಿತಾ ಮತ್ತು ಶಶಿಕಲಾ ಇವರುಗಳು ನಡೆಸಿಕೊಟ್ಟ ಸುಗಮ ಸಂಗೀತವು ಸಭಿಕರ ಮನಸೂರೆಗೊಂಡರೆ, ಮತ್ತೊಂದೆಡೆ ತುರುವೆಕೆರೆ ಹುಲಿಕಲ್ ನಾಗರಾಜ್ ಮತ್ತು ತಂಡ, ತಿಪಟೂರಿನ ಸೌಮ್ಯಶ್ರೀ ಆತ್ಮಾರಾಮ್ ಇವರ ಗಮಕ, ಅರಸೀಕೆರೆಯ ಕೆಲ್ಲೆಂಗೆರೆ ಬಸವರಾಜು ಮತ್ತು ತಂಡದ ಸ್ಯಾಕ್ಸೋಫೋನ್ ವಾದನ, ರಾಯಚೂರಿನ ಪ್ರತಿಭಾ ಗೋ ನಾಳ್ ಮತ್ತು ತಂಡದ ವಚನ ಗಾಯನ, ಬಾಗಲಕೋಟೆಯ ಪಂಡಿತ್ ಅನಂತ ಕುಲಕರ್ಣಿ ಮತ್ತು ತಂಡದ ದಾಸವಾಣಿ ಹಾಗೂ ರಾಣೆಬೆನ್ನೂರಿನ ಕುಮಾರಿ ಪ್ರಿಯಾ ಸವಣೂರು ಮತ್ತು ತಂಡವು ನಡೆಸಿಕೊಟ್ಟ ನೃತ್ಯ ರೂಪಕ ಕಾರ್ಯ ಕ್ರಮಗಳು ಸಭಿಕರ ಮನ ರಂಜಿಸಿತು.ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಸಂಚಾಲಕ ಆನಂದ ಮಾದಲಗೆರೆ ಮಾತನಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್,ತಾ.ಅಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿ ಮಂಜುನಾಥ್, ಉಪಾ ಧ್ಯಕ್ಷೆ ಕುಸುಮ, ಕಸಬಾ ಹೋಬಳಿ ಅಧ್ಯಕ್ಷ ದೀವಾಕರ್ ಇನ್ನಿತರರು ಇದ್ದರು.

Translate »