ಅರಸೀಕೆರೆ: ಎಲ್ಲ ಶಿಕ್ಷಕರೂ ಪಾಂಡಿತ್ಯ ಹೊಂದಿರುವುದಿಲ್ಲ.ಅವರ ಅನುಭವ ಮತ್ತು ಬೋಧನೆಗಳೊಂದಿಗೆ ಹೊಸ ಹೊಸ ಅವಿಷ್ಕಾರಗಳು ಸಾಹಿತ್ಯ ಪಾಂಡಿತ್ಯಕ್ಕೆ ಮಾರ್ಗ ಮಾಡಿಕೊಡುತ್ತದೆ ಎಂದು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಡಾ.ಜಗದೀಶ್ ನಾಯಕ್ ಹೇಳಿದರು.
ನಗರದ ಶ್ರೀಕನ್ನಿಕಾ ಆಂಗ್ಲ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯ ಕ್ರಮಗಳಿಗೆ ಸಿದ್ದಗೊಳಿಸುತ್ತಲೇ ತಾವೂ ಪಠ್ಯೇತರ ಚಟುವಟಿಕೆಯಲ್ಲಿ ಶಿಕ್ಷಕರು ಪ್ರತಿಭೆ ಗಳಿಸುತ್ತಾರೆ. ಅಲ್ಲದೆ ಪ್ರತಿ ವರ್ಷ ತಮ್ಮ ಭೋಧನೆಯಲ್ಲಿ ಹೊಸ ಆವಿಷ್ಕಾರ ವನ್ನು ಅಳವಡಿಸಿಕೊಂಡು ಪರಿಣಾಮಕಾರಿ ಭೋಧನೆ ಮಾಡುವುದರಿಂದ ಪ್ರತಿಭೆ ಅರಿ ವಿಲ್ಲದಂತೆ ಬಂದಿರುತ್ತದೆ. ಇಂತಹ ಸ್ಪರ್ಧಾ ಕಾರ್ಯಕ್ರಮದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆ ಯಲ್ಲಿ ಶಿಕ್ಷಕರು ಭಾಗವಹಿಸಬೇಕು ಎಂದರು.
ಶಿಕ್ಷಣ ಸಂಯೋಜಕ ಗಿರೀಶ್ ಮಾತನಾಡಿ, ಶಿಕ್ಷಕರಲ್ಲಿರುವ ಪಠ್ಯೇತರ ಚಟುವಟಿಕೆಗಳ ಲ್ಲಿನ ಪ್ರತಿಭೆಯುಳ್ಳವರನ್ನು ಗುರುತಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಕಳಿ ಸುವುದಾಗಿದೆ. ಪಠ್ಯಗಳಿಗೆ ಸಂಬಂಧಿಸಿ ದಂತೆ ಕಲಿಕೋಪಕರಣಗಳನ್ನು ತಯಾರಿ ಸಬೇಕು. ಚಿತ್ರಕಲೆ ಸಹ ಶಿಕ್ಷಣ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿರಬೇಕು. ಇಂತಹ ಕೆಲ ಮಾನದಂಡಗತಳನ್ನು ಅನುಸರಿ ಸಿದರೆ ಮಾತ್ರ ಸ್ಪರ್ಧೆಗೆ ಅರ್ಥ ಬರುತ್ತದೆ. ಇಷ್ಟು ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಮತ್ತು ಸಲಹೆಗಳೇ ಕಾರಣ ವಾಗಿದೆ ಎಂದರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆ ತೋರಲು ಇದು ವೇದಿಕೆಯಾಗಿದೆ, ಈ ಬಾರಿ ಇದನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ ಬೆಂಗಳೂರಿನಲ್ಲಿ ನಡೆಯಲಿರುವ ಶಿಕ್ಷಕರ ಸನಿಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನಿಂದ ಶಿಕ್ಷಕರು ಹೊರಡಬೇಕೆಂದು ಮನವಿ ಮಾಡಿದರು.
ಗಂಡಸಿ ಹೋಬಳಿ ಶಿಕ್ಷಣ ಸಂಯೋಜಕ ನಾಗರಾಜನಾಯಕ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್‍ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯ ದರ್ಶಿ ಸದಾನಂದಮೂರ್ತಿ, ಕನ್ನಿಕಾ ಆಂಗ್ಲ ಶಾಲೆಯ ಮುಖ್ಯಶಿಕ್ಷಕಿ ಜಿ.ಪಿ.ಜಯಂತಿ. ಶಿಕ್ಷಕ ಹೆಚ್.ಡಿ.ದಿವಾಕರ್ ಅವರುಗಳು ಸ್ಪರ್ಧಾಳುಗಳಿಗೆ ಶುಭಕೋರಿದರು..