ಅರಸೀಕೆರೆಯಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಆಗ್ರಹ
ಹಾಸನ

ಅರಸೀಕೆರೆಯಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಆಗ್ರಹ

July 24, 2019

ಅರಸೀಕೆರೆ: ಶಿವಮೊಗ್ಗ-ಯಶವಂತಪುರ ನಡುವೆ ನಿತ್ಯ ಸಂಚರಿಸು ತ್ತಿರುವ ಜನಶತಾಬ್ದಿ ರೈಲುಗಾಡಿಗೆ ನಗರದಲ್ಲಿ ನಿಲುಗಡೆ ನೀಡಬೇಕು ಮತ್ತು ರೈಲು ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮ ಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಅರಸೀ ಕೆರೆ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರೈಲ್ವೆ ಇಲಾಖೆ ಕೆಲ ವಿಚಾರಗಳಲ್ಲಿ ಮಲ ತಾಯಿ ಧೋರಣೆ ಅನುಸರಿಸುತ್ತಿದೆ. ಶಿವಮೊಗ್ಗ-ಯಶವಂತಪುರ ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ಅರಸೀ ಕೆರೆ ಜಂಕ್ಷನ್‍ನಲ್ಲಿ ನಿಲುಗಡೆ ಕೊಡಲು ಮೀನಾ-ಮೇಷ ಎಣಿಸುತ್ತಿದೆ. ನಿಲುಗಡೆಗೆ ಆಗ್ರಹಿಸಿ ಫೆ.9ರಂದು ಧರಣಿ ನಡೆಸÀಲಾಗಿತ್ತು. ಮನವಿಪತ್ರ ಸ್ವೀಕರಿಸಿದ ದಿನದಿಂದ ಈವರೆಗೂ ರೈಲ್ವೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರಸೀಕೆರೆ ನಗರ ಪ್ರಮುಖ ವಾಣಿಜ್ಯ ಕೇಂದ್ರ. ಈ ರೈಲು ನಿಲ್ದಾಣ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿ ಧೆಡೆಗೆ ಸಾವಿರಾರು ಪ್ರಯಾಣಿಕರು ಸಂಚ ರಿಸುತ್ತಾರೆ. ಕಡಿಮೆ ಸಂಖ್ಯೆಯಲ್ಲಿ ಸಂಚ ರಿಸುವ ರೈಲುಗಳ ಜತೆಗೇ ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ರೈಲಿಗೆ ನಿಲುಗಡೆ ನೀಡಿ ಪ್ರಯಾಣಿಕರಿಗೆ ಅನು ಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರೈಲ್ವೆ ಇಲಾಖೆಯ ಮಲತಾಯಿ ಧೋರಣೆ ಖಂಡಿಸಿ ರೈತ ಸಂಘ ಸೇರಿ ದಂತೆ ವಿವಿಧ ಸಂಘ ಸಂಸ್ಥೆಗಳ ಸಂಯು ಕ್ತಾಶ್ರಯದಲ್ಲಿ ಏ.26ರಂದು ನಗರದ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ಹಮ್ಮಿ ಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ವಿಶ್ವನಾಥ್ ಹುಲ್ಲೇನಹಳ್ಳಿ ಅವರು ಉಪಸ್ಥಿತರಿದ್ದರು.

ಮನವಿಪತ್ರ ಸ್ವೀಕರಿಸಿ ಮಾತನಾಡಿದ ರೈಲು ನಿಲ್ದಾಣದ ವ್ಯವಸ್ಥಾಪಕ ಆರ್.ರಘು ನಾಥನ್, ರೈತ ಸಂಘ, ವಿವಿಧ ಸಾವ ್ಜನಿಕ ಸಂಘ-ಸಂಸ್ಥೆಗಳು ಜನಶತಾಬ್ದಿ ರೈಲನ್ನು ಅರಸೀಕೆರೆ ನಗರದಲ್ಲಿ ನಿಲ್ಲಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಮನವಿಪತ್ರ ಸಲ್ಲಿಸಿರುವ ವಿಚಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮತ್ತು ನಿಲುಗಡೆ ಅವಶ್ಯಕತೆ ಇದೆ ಎಂದು ನಾವು ಕೂಡ ವರದಿಯನ್ನು ನೀಡಿದ್ದೇವೆ. ಈ ಎಲ್ಲ ಆಧಾರಗಳ ಮೇಲೆ ಅರಸೀಕೆರೆ ರೈಲ್ವೇ ಜಂಕ್ಷನ್ ಮೂಲಕ ಈಗಾಗಲೇ ಸಂಚರಿಸು ತ್ತಿರುವ ಶಿವಮೊಗ್ಗ ಮತ್ತು ಯಶವಂತ ಪುರ ಜನಶತಾಬ್ದಿ ರೈಲುಗಾಡಿ ನಿಲುಗಡೆಗೆ ಅತೀ ಶೀಘ್ರದಲ್ಲಿಯೇ ಅದೇಶ ಹೊರ ಬೀಳಲಿದೆ. ಈ ಅದೇಶವನ್ನು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಯ ಪಡಿಸಲಾಗುವುದು ಎಂದರು.

Translate »