ಒಬ್ಬರ ತಪ್ಪಿಗೆ ಇಡೀ ಸಮುದಾಯ ದೂಷಿಸದಿರಿ
ಹಾಸನ

ಒಬ್ಬರ ತಪ್ಪಿಗೆ ಇಡೀ ಸಮುದಾಯ ದೂಷಿಸದಿರಿ

July 24, 2019

ಹಾಸನ: ಸಮಾಜದಲ್ಲಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಸಮುದಾ ಯಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಹೇಳಿದರು.

ನಗರದ ಸರಕಾರಿ ಆಸ್ಪತ್ರೆ ಬಳಿ ಇರುವ ಸ್ವಾಭಿ ಮಾನಿ ಭವನದಲ್ಲಿ `ಸಂಗಮ್ ಸಮರ್ಥ್’ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ವಕಾಲತು ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಮಾಜ ದಲ್ಲಿ ತೃತೀಯ ವರ್ಗವೊಂದು ಇರುವ ಬಗ್ಗೆ ಮನವರಿಕೆಯಾಗಿದೆ. ಮಾಹಿತಿ ಕೊರತೆ ಯಿಂದ ಸಂಘರ್ಷಕ್ಕೆ ಕಾರಣವಾಗಿದೆ. ಅನೇಕ ಪೊಲೀಸ್ ಸಿಬ್ಬಂದಿಗಳಿಗೆ ತಿಳಿಯದ ವಿಚಾರಗಳನ್ನು ತಿಳಿಸಿಕೊಡುವ ಸಲುವಾಗಿ ಒಂದೆಡೆ ಸೇರಿಸಿ ತರಬೇತಿ ಕೊಡುವ ಕೆಲಸ ಆಗಬೇಕಿದೆ. ಶೀಘ್ರದಲ್ಲಿಯೇ ಏರ್ಪಡಿಸಲಾಗುವುದು ಎಂದರು.

ನಮ್ಮ ಒತ್ತಡದ ಕೆಲಸದಲ್ಲಿ ಇವರನ್ನು ಎಲ್ಲೊ ಒಂದು ಕಡೆ ಕಡೆಗಣಿಸಿದ್ದೇವೆ ಎನಿಸುತ್ತಿದೆ. ಸರಕಾರ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಟ್ಟು ಮುಖ್ಯವಾಹಿನಿಗೆ ತರಬೇಕೆಂದು ಹೊರಟಿತು. ಅದರಂತೆ ಇವರನ್ನೂ ಮುಖ್ಯವಾಹಿನಿಗೆ ತರುವಂತಾಗಬೇಕು. ನಮ್ಮ ಇಲಾಖೆಯಿಂದ ಇವರಿಗೆ ಸಹಕಾರ ಇರುತ್ತದೆ. ಈ ಸಮುದಾಯಕ್ಕೆ ತೊಂದರೆ ಯಾಗದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ತಿಳಿಹೇಳಿ ಎಚ್ಚರಿಕೆ ವಹಿಸಲಾಗು ವುದು ಎಂದು ಭರವಸೆ ನೀಡಿದರು. ಲೇಖಕಿ ಭಾನುಮುಫ್ತಾಕ್ ಮಾತನಾಡಿ, ತೃತೀಯ ಲಿಂಗದವರು ಯಾವ ತಪ್ಪೂ ಮಾಡದೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಒಬ್ಬರ ತಪ್ಪಿಗಾಗಿ ಇಡೀ ಸಮುದಾಯವನ್ನು ಧೂಷಿಸುವಂತಾಗಬಾರದು. ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಮುಂದೆ ತಪ್ಪು ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಸಂಗಮ್ ಸಮರ್ಥ್ ಸಮುದಾಯದ ಆಪ್ತ ಸಮಾಲೋಚಕರಾದ ವರ್ಷ ಹಾಸನ್ ಮಾತನಾಡಿ, ನಮ್ಮನ್ನೂ ಮನುಷ್ಯರಂತೆ ಕಾಣಬೇಕು. ಯಾರೋ ಮಾಡಿದ ಯಾವುದೋ ತಪ್ಪಿಗೆ ನಮ್ಮತ್ತ ಬೆರಳು ಮಾಡಿ ತೋರಿಸಬಾರದು ಎಂದು ಮನವಿ ಮಾಡಿದರು. ಹಿಂದೆ ಹಾಸನದಲ್ಲಿ 13 ಮಂದಿ ತೃತೀಯ ಲಿಂಗಿಗಳನ್ನು ಪೊಲೀಸರು ಬಂಧಿಸಿದರು. ಅವರಲ್ಲಿ ಅಮಾಯಕರೂ ಇದ್ದರು. ಹೊಸ ಬಸ್‍ನಿಲ್ದಾಣ ಎದುರಿನ ಕಟ್ಟಡದಲ್ಲಿ 4 ಶವ ದೊರಕಿವೆ. ಪೊಲೀಸರು ನಮ್ಮನ್ನೇ ಆರೋಪಿಗಳಾಗಿ ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಡಿಎಪಿಸಿಯು ಮೇಲ್ವಚಾರಕ ರವಿಕುಮಾರ್ ಮಾತನಾಡಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ನಾಗೇಶ್ ಆರಾಧ್ಯ, ಸಂಗಮ್ ಸಮರ್ಥ್ ಯೋಜನ ವ್ಯವಸ್ಥಾಪಕ. ಅಶ್ವಥ್, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್ ಪರಿಮಳ, ಪ್ರಕೃತಿ ಸಮುದಾ ಯದ ನಿಧಿ, ಶರತ್, ಅಂಜಲಿ ಹಾಸನ್, ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

Translate »