ನಗರಸಭೆ ಸೌಲಭ್ಯ ದುರ್ಬಳಕೆ: ತಪ್ಪಿತಸ್ಥರ ವಿರುದ್ಧ ಕ್ರಮ
ಹಾಸನ

ನಗರಸಭೆ ಸೌಲಭ್ಯ ದುರ್ಬಳಕೆ: ತಪ್ಪಿತಸ್ಥರ ವಿರುದ್ಧ ಕ್ರಮ

May 21, 2019

ಅರಸೀಕೆರೆ: ನಗರಸಭೆ ವ್ಯಾಪ್ತಿ ಯಲ್ಲಿ ಪ್ರಭಾವಿ ವ್ಯಕ್ತಿಗಳ ಹಿಂಬಾಲಕರ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಖಾಸಗಿ ವಸತಿ ನಿವೇಶನಗಳ ಲೇಔಟ್‍ಗಳಲ್ಲಿ ನಗರ ಸಭೆಯ ನಾಗರಿಕ ಮೂಲ ಸೌಲಭ್ಯಗ ಳಾದ ರಸ್ತೆ, ಒಳಚರಂಡಿ ಮತ್ತು ಕುಡಿ ಯುವ ನೀರು ಯೋಜನೆಗಳನ್ನು ದುರು ಪಯೋಗ ಮಾಡಿಕೊಳ್ಳಲಾಗಿದ್ದು, ಇದರ ಹಿಂದೆ ಶಾಮೀಲಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಅರಸೀಕೆರೆ ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ವರದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆ ನಗರದಲ್ಲಿ ಸಾರ್ವ ಜನಿಕರು ಮುಖ್ಯವಾಗಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಒಳ ಚರಂಡಿ ನಿರ್ವ ಹಣೆ ಸೇರಿದಂತೆ ಸ್ವಚ್ಛತೆಗಳ ಬಗ್ಗೆ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಇವುಗಳನ್ನು ನಗರಸಭೆ ಆಯುಕ್ತ ಚಲಪತಿ ಮತ್ತು ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರುಗಳ ನೇತೃತ್ವದಲ್ಲಿ ಬಗೆ ಹರಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದರು.

ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ವಾಗಿರುವ ನೂತನ ಖಾಸಗಿ ವಸತಿ ಬಡಾ ವಣೆ ನಿರ್ಮಾಣ ಸಮಯದಲ್ಲಿ ಹಾಗೂ ಇನ್ನೂ ಜನವಸತಿ ಇಲ್ಲದ ಲೇಔಟ್‍ಗಳಿಗೆ ನಗರಸಭೆಯಿಂದ ವಿವಿಧ ಹಣಕಾಸು ಯೋಜನೆಗಳ ಅಡಿಯಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳ ಸ್ಥಾಪನೆ, ಕುಡಿಯುವ ನೀರು ಸರಬರಾಜು ಪೈಪ್‍ಗಳ ಅಳವಡಿಕೆ, ರಸ್ತೆ ನಿರ್ಮಾಣ ಮತ್ತು ಒಳ ಚರಂಡಿ ನಿರ್ಮಾಣದಂತಹ ಕಾಮಗಾರಿಗಳನ್ನು ಮಾಡಿಸುವುದರ ಮೂಲಕ ಸ್ಥಳೀಯ ಅಧಿಕಾರಿಗಳು ಕರ್ತವ್ಯ ಲೋಪವನ್ನು ಮಾಡಿದ್ದಾರೆ. ಈಗಾಗಲೇ ಈ ಗಂಭೀರ ಬೆಳವಣಿಗಳ ಕಡತಗಳನ್ನು ಅವಲೋಕನ ಮಾಡಿದ್ದು, ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ವರದಿ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದರು.

ನಿವೇಶನಗಳ ಮಾಲೀಕರು ಮತ್ತು ಈ ದುರುಪಯೋಗಗಳ ಬಗ್ಗೆ ಅಂದಿನ ಕೆಲವು ಆಡಳಿತ ಜನ ಪ್ರತಿನಿಧಿಗಳ ಕೈವಾಡವಿ ರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ತನಿಖೆ ವೇಳೆಯಲ್ಲಿ ಎಲ್ಲಾ ಈ ಅಂಶಗಳು ದೃಢ ಪಟ್ಟಲ್ಲಿ ಕಾನೂನಾತ್ಮಕವಾಗಿ ಕ್ರಮ ತೆಗೆದು ಕೊಳ್ಳಲಾಗುವುದು. ಈ ನಿವೇಶನಗಳ ಖಾತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಅವರಿಗೂ ಶೋಕಾಸ್ ನೋಟೀಸ್ ನೀಡು ವುದರ ಮೂಲಕ ಕರ್ತವ್ಯ ಲೋಪದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗು ವುದು ಎಂದರು.

ನಗರಸಭೆ ಅಧಿಕಾರದ ವ್ಯಾಪ್ತಿಯಲ್ಲಿ 2019-20ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಮಾಸಿಕಗಳಲ್ಲಿ ಸುಮಾರು ಎರಡು ಕೋಟಿ ತೆರಿಗೆ ಸಂಗ್ರಹವಾಗಿರುವುದು ನಗರ ಸಭೆ ಆಯುಕ್ತ ಮತ್ತು ಸಿಬ್ಬಂದಿಯ ಶ್ರಮ ಇರುವುದರೊಂದಿಗೆ ಸ್ಥಳೀಯ ಸಾರ್ವ ಜನಿಕರ ಸಹಕಾರವೂ ಈ ಅಗಾಧ ಮಟ್ಟದ ತೆರಿಗೆ ಸಂಗ್ರಹವಾಗಲು ಮೂಲ ಕಾರಣ ವಾಗಿದೆ. ಇದು ಶ್ಲಾಘನೀಯ ಕೆಲಸ ವಾಗಿದ್ದು, ಬಜೆಟ್‍ನ ಕೊರತೆಯಿಂದಾಗಿ ಕೆಲವೆಡೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿತ್ತು. ಹೆಚ್ಚುವರಿ ಹಣ ಶೀಘ್ರ ಬಿಡು ಗಡೆಯಾಗಲಿದೆ. ನಂತರ ಕೆಲಸಗಳು ಸುಗಮವಾಗಿ ಸಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯ ಕರ್ತ ರಾಘವೇಂದ್ರ, ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳಾದ ಹೆಚ್.ಟಿ. ಮಹದೇವ್, ನವಲಗುಂದ್, ಚಂದ್ರಪ್ಪ, ಬಿಜೆಪಿ ಮುಖಂಡರಾದ ರಮೇಶ್ ನಾಯ್ಡು, ಮನೋಜ್ ಕುಮಾರ್, ಆನಂದ್, ಮತ್ತಿ ತರ ಸಂಘಟನೆ ಕಾರ್ಯಕರ್ತರು ವಿವಿಧ ವಿಚಾರಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ದರು. ಸಭೆಯಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಪೌರಾಯುಕ್ತ ಛಲಪತಿ ಮತ್ತಿತರ ಅಧಿಕಾರಿಗಳು, ನಗರ ಸಭೆ ಸದಸ್ಯರುಗಳು ಉಪಸ್ಥಿತರಿದ್ದರು.

Translate »