ಪೌಷ್ಠಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ವೃದ್ಧಿ
ಹಾಸನ

ಪೌಷ್ಠಿಕ ಆಹಾರದಿಂದ ರೋಗ ನಿರೋಧಕ ಶಕ್ತಿ ವೃದ್ಧಿ

July 24, 2019

ಬೇಲೂರು: ಪೌಷ್ಠಿಕ ಆಹಾರ ಎಂದರೆ ನಮ್ಮ ದೇಹದ ಆರೋಗ್ಯ ಕಾಪಾ ಡುವ ಸಮತೋಲನ ಆಹಾರ. ಆಹಾರದ ಎಲ್ಲಾ ಘಟಕಗಳನ್ನೂ ಒಳಗೊಂಡಿರು ವುದರಿಂದ ತಯಾರಿಸಿದ ಪೌಷ್ಠಿಕ ಆಹಾರ ದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮುಖ್ಯವಾಗಿ ಮಕ್ಕಳಲ್ಲಿ ಮಾನಸಿಕ-ದೈಹಿಕ ಬೆಳವಣಿಗೆಗೆ ಸಹಾಯಕ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ರತಿದೇವಿ ಹೇಳಿದರು.

ತಾಲೂಕಿನ ಹೆಬ್ಬಾಳು ಗ್ರಾಮದ ಸಮು ದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿ ಕೊಂಡ ಪೌಷ್ಠಿಕ ಆಹಾರ ಮೇಳದಲ್ಲಿ ಮಾತ ನಾಡಿ, ಮನುಷ್ಯನಿಗೆ ಒಳ್ಳೆಯ ಹಾಗೂ ಪೌಷ್ಠಿಕವಾದ ಆಹಾರ ಅತಿಮುಖ್ಯ. ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ತಿನ್ನುವುದರಿಂದ ಪೌಷ್ಟಿಕಾಂಶ ದೊರಕುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯ ಬೇಕು. ಕಲಬೆರಕೆ ಆಹಾರ, ಜಂಕ್ ಫುಡ್‍ನ ಹೆಚ್ಚು ಸೇವನೆ ಅಪೌಷ್ಠಿಕತೆಗೆ ಕಾರಣವಾಗುತ್ತದೆ ಎಂದರು.

ಹೆಬ್ಬಾಳು ವೃತ್ತ ಆರೋಗ್ಯ ಸಹಾಯಕಿ ಚಂದನ ಮಾತನಾಡಿ, ಅಪೌಷ್ಠಿಕತೆಯಿಂ ದಾಗಿ ಮಕ್ಕಳ ಬೆಳವಣಿಗೆ ಕುಂಠಿತ ಗೊಂಡು ರಕ್ತಹೀನತೆ, ಅತಿಸಾರ, ನ್ಯುಮೊ ನಿಯಾ ಸೋಂಕಿನಿಂದ ರಾಜ್ಯದಲ್ಲಿ ನೂರಾರು ಮಕ್ಕಳು ಅಪೌಷ್ಟಿಕಾಂಶದ ಕೊರತೆಯಿಂದ ಸಾವು ಸಂಭವಿಸುತ್ತಿರುವ ಘಟನೆಯನ್ನು ಕಂಡ ಸರ್ಕಾರ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ, ಮಗು ಜನಿಸಿದ ತಕ್ಷಣ ಜೋಪಾನವಾಗಿ ಆರೈಕೆ ಮಾಡಬೇಕು, ಕಡ್ಡಾಯವಾಗಿ ಎದೆಹಾಲು ನೀಡಬೇಕು. ಅಲ್ಲದೆ ಅಪೌಷ್ಟಿಕತೆ ಕಂಡ ಬಂದ ತಕ್ಷಣವೇ ಸರ್ಕಾರಿ ಆಸ್ಪತ್ರೆಗಳ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಬೇಕು ಎಂದು ಪ್ರತಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪೌಷ್ಟಿಕ ಪುನ ಶ್ಚೇತನ ಕೇಂದ್ರಗಳನ್ನು ಸ್ಥಾಪಿಸಿದೆ. ಬೇಲೂರಿನ ಪೌಷ್ಠಿಕ ಪುನಶ್ಚೇತನ ಕೇಂದ್ರ ದಲ್ಲಿ ಈಗಾಗಲೇ ವಿಶೇಷ ಕೊಠಡಿಯನ್ನು ತೆರೆದು ಕೆಲಸ ಮಾಡುತ್ತಿದೆ, ಈ ನಿಟ್ಟಿನಲ್ಲಿ ಎಲ್ಲರೂ ಪೌಷ್ಠಿಕ ಆಹಾರ ಸೇವಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಯೋಜ ನೆಯ ಜಯಲಕ್ಷ್ಮಿ, ಹೆಬ್ಬಾಳು ಗ್ರಾಪಂ ಅಧ್ಯಕ್ಷೆ ಮಲ್ಲಿಗಮ್ಮ, ಸದಸ್ಯೆ ಹೇಮಾ, ಧರ್ಮಸ್ಥಳ ಸಂಘದ ದೀಪಾ, ಪ್ರಗತಿ ಬಂಧು ಸಂಘದ ದೊಡ್ಡಮ್ಮ, ಆಶಾ ಕಾರ್ಯಕರ್ತೆ ಸಿದ್ದಮ್ಮ, ಪತ್ರಕರ್ತ ಹೆಬ್ಬಾಳು ಹಾಲಪ್ಪ ಮತ್ತಿತರರಿದ್ದರು.

Translate »