ಹಾಸನದಲ್ಲಿ ನಾಳೆ ಜಲಜಾಗೃತಿ ಮ್ಯಾರಥಾನ್
ಹಾಸನ

ಹಾಸನದಲ್ಲಿ ನಾಳೆ ಜಲಜಾಗೃತಿ ಮ್ಯಾರಥಾನ್

July 24, 2019

ಹಾಸನ: ಸಾರ್ವಜನಿಕರಲ್ಲಿ ಜಲಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಜು.25ರ ಗುರುವಾರ ನಗರದಲ್ಲಿ ವಿಶೇಷ ಜಲಜಾಗೃತಿ ಮ್ಯಾರಥಾನ್ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.

ಡಿಡಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿ, ಜಲ ಜಾಗೃತಿ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕು. ಜಲಥಾನ್‍ನಲ್ಲಿ ಭಾಗವ ಹಿಸುವವರಿಗೆ ಪ್ರಮಾಣಪತ್ರ ನೀಡ ಲಾಗುವುದು ಎಂದರು.

ಜಲಶಕ್ತಿ ಅಭಿಯಾನದಲ್ಲಿ ಹಾಸನ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿಯೂ ಈ ಸ್ಥಾನ ಕಾಪಾಡಿಕೊಳ್ಳ ಬೇಕು. ಅದಕ್ಕಾಗಿ ಜನಜಾಗೃತಿ ಅಗತ್ಯ. ಸ್ಥಳೀಯ ಸಂಸ್ಥೆಗಳ ಮೂಲಕ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಅನುಷ್ಠಾನಕ್ಕೆ ನಿರ್ದೇಶನ ನೀಡಲಾಗಿದೆ. ಅರಸೀಕೆರೆ, ಚನ್ನರಾಯ ಪಟ್ಟಣ ತಾಲೂಕುಗಳಲ್ಲಿನ ಕಲ್ಯಾಣಿ ಗಳನ್ನು ಗುರುತಿಸಿ ಅಂತರ್ಜಲ ವೃದ್ಧಿ ಗಾಗಿ ಹೂಳೆತ್ತುವ ಕೆಲಸವನ್ನು ಗ್ರಾಮ ಸ್ಥರ ಸಹಕಾರದೊಂದಿಗೆ ಮಾಡಲಾ ಗುವುದು. ಜಲಶಕ್ತಿ ಅಭಿಯಾನ ಪೂರ್ಣ ಗೊಂಡ ನಂತರ ಇತರೆ ತಾಲೂಕುಗಳಲ್ಲಿಯೂ ಅಂತರ್ಜಲ ವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಹೆಚ್.ಎಲ್. ನಾಗರಾಜ್ ಮಾತನಾಡಿ, ಜು.25ರ ಬೆಳಿಗ್ಗೆ 8.30ಕ್ಕೆ ಡಿಸಿ ಕಚೇರಿ ಆವರಣದಿಂದ ಜಲ ಮ್ಯಾರಥಾನ್ ಹೊರಡಲಿದೆ. ಎನ್‍ಆರ್ ವೃತ್ತ ಮೂಲಕ ಹೇಮಾವತಿ ಪ್ರತಿಮೆ, ಸಾಲಗಾಮೆ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣ ತಲುಪಲಿದೆ. ಜಲಜಾಗೃತಿಗೆ ಸಮುದಾಯದ ಪಾಲ್ಗೊಳ್ಳುವಿಕೆ ಅತಿಮುಖ್ಯ ಎಂದರು.

ಘೋಷಣಾ ಫಲಕಗಳನ್ನು ಸಿದ್ಧಪಡಿಸಿ, ಮ್ಯಾರಥಾನ್ ಸಾಗುವ ಮಾರ್ಗದಲ್ಲಿ ಬ್ಯಾನರ್ ಹಾಕಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸುಬ್ಬಸ್ವಾಮಿ, ಪಾಷಾ, ಸುರೇಶ್ ಗುರೂಜಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತ ವೀರಭದ್ರಪ್ಪ ಮಾತನಾಡಿ, ಜಲಜಾಗೃತಿ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಹಲವು ಸಲಹೆ ಗಳನ್ನು ನೀಡಿದರು. ಉಪ ಅರಣ್ಯ ಸಂರ ಕ್ಷಣಾಧಿಕಾರಿ ಅನುಪಮ, ಎಸಿಎಫ್ ಕೆ. ಹರೀಶ್, ತಹಸಿಲ್ದಾರ್ ಮೇಘನ, ಆಹಾರ- ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸವಿತ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಾಪ ಭೋವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷÀ ಕೃಷ್ಣೇಗೌಡ, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿದ್ದರು.

Translate »