ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ
ಹಾಸನ

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ

October 21, 2018

ರಾಮನಾಥಪುರ: ಕೃಷ್ಣರಾಜ ಅಣೆಕಟ್ಟೆಯ ಕಟ್ಟೇಪುರ ನಾಲೆ ಹಂತ, ಹಾರಂಗಿ, ಹೇಮಾವತಿ ನಾಲಾ ಹಂತದ ಬಯಲಲ್ಲಿ ಈ ಬಾರಿ ಭತ್ತದ ಬೆಳೆ ನಳ ನಳಿಸುತ್ತಿದ್ದು, ಅನ್ನದಾತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಮೂರು ವರ್ಷದಿಂದ ಮಳೆ ಇಲ್ಲದೇ ಬರದಿಂದ ಪರಿತಪಿಸುತ್ತಿದ್ದ ನಾಲಾ ವ್ಯಾಪ್ತಿಯ ಪ್ರದೇಶಗಳಲ್ಲಿ ಭತ್ತ ಬೆಳೆಯದೆ ಗದ್ದೆ ಪಾಳು ಬಿದ್ದಿತ್ತು. ಸದ್ಯ ಈ ಬಾರಿ ವರುಣನ ಕೃಪೆಯಿಂದ ಜಲಾಶಯಗಳು ಭರ್ತಿಯಾಗಿ ಕೆರೆ-ಕಟ್ಟೆಗಳು ಮತ್ತು ನಾಲೆ ಗಳಲ್ಲಿ ನೀರು ಸಮೃದ್ಧವಾಗಿ ಹರಿಯು ತ್ತಿದ್ದು, ಮೂರು ವರ್ಷಗಳಿಂದ ಬರಡಾಗಿದ್ದ ವಿಸ್ತಾರವಾದ ಭೂಪ್ರದೇಶ ಈಗ ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತಿದ್ದು, ಅನ್ನದಾತನ ಮುಖದಲ್ಲಿ ಮಂದಹಾಸ ಹೆಚ್ಚಿಸಿದೆ.

ಕೃಷಿ ಇಲಾಖೆ ಮಾಹಿತಿಯಂತೆÀ 2015ನೇ ಸಾಲಿನಲ್ಲಿ 14.600 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಪೈರು ನಾಟಿ ಮಾಡಲಾಗಿತ್ತು. ರಸಗೊಬ್ಬರ ಹಾಕಿ ಕಷ್ಟಪಟ್ಟು ಬೆಳೆಸಿದ ಭತ್ತದ ಹೊಡೆ ಕಡೆಯುವ ವೇಳೆಗೆ ನಾಳೆಗೆ ನೀರು ನಿಲ್ಲಿಸಿದ್ದರಿಂದ ಬೆಳೆ ಒಣ ಗಿತ್ತು.

ಇದರಿಂದ ಸಾವಿರಾರು ರೂ. ಸಾಲ ಪಡೆದು ಬಿತ್ತನೆ ಮಾಡಿದ್ದ ಬೆಳೆ ಕೈಗೆ ಬಾರದೇ ಅನ್ನದಾತನ ಕುಟುಂಬಗಳು ಬೀದಿಪಾಲಾ ಗುವ ದುಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಕೆಲ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆಗೂ ಶರಣಾಗಿದ್ದರು. 2015-16 ಸಾಲಿನಲ್ಲಿ 14,700 ಹೆಕ್ಟೇರ್‍ನಲ್ಲಿ ನಾಟಿಯಾಗಿದ್ದ ಬತ್ತವು ಬರದ ಪರಿಣಾಮ ನೀರಿನ ಕೊರತೆಯಿಂದ ಸಂಪೂರ್ಣ ಹಾಳಾಗಿತ್ತು. 2016-17ನೇ ಸಾಲಿನಲ್ಲಿ ಕೇವಲ 3.435 ಹೆಕ್ಟೇರ್‍ನಲ್ಲಿ ನಾಟಿ ಮಾಡಲಾಗಿತ್ತಾದರೂ ನೀರಿಲ್ಲದೆ ಇಳುವರಿ ಕುಂಠಿತಗೊಂಡು, ಬೆಳೆ ಒಣಗಿ ಹೊಗಿತ್ತು. ಈ ಬಾರಿ ವರುಣನ ಕೃಪೆ ತೋರಿದ್ದರಿಂದ ಈ ಬಾರಿ ತಾಲೂಕಿ ನಲ್ಲಿ ಸುಮಾರು 14.700 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುವ ಗುರಿ ಹೊಂದಿದ್ದು. 16,500 ಹೆಕ್ಟೇರ್‍ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡ ಲಾಗಿದೆ ಎನ್ನಲಾಗಿದೆ. ಸದ್ಯ ಬೆಳೆಗಾರರ ಅದೃಷ್ಟವೆಂಬಂತೆ ಆಗಾಗ್ಗೆ ಜೋರು ಮಳೆಯೂ ಬೀಳುತ್ತಿರುವುದರಿಂದ ರೋಗಬಾಧೆ ನಿಯಂತ್ರಣದಲ್ಲಿದೆ. ಹೀಗಾಗಿ ಅನ್ನದಾತ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾನೆ.

Translate »