ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಎಡಿಸಿ ಸೂಚನೆ
ಹಾಸನ

ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ಎಡಿಸಿ ಸೂಚನೆ

October 21, 2018

ಹಾಸನ: ಜಿಲ್ಲಾ ಕ್ರೀಡಾಂಗಣ ದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ವೈಶಾಲಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯ ಕ್ರಮಕ್ಕೆ ಜನಪ್ರತಿನಿಧಿಗಳನ್ನು ಖುದ್ದು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸುವಂತೆ ತಿಳಿಸಿದರು.

ನಗರಸಭೆಯಿಂದ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣದ ಜೊತೆಗೆ ಹೂವಿನ ಅಲಂಕಾರ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ತಳಿರು-ತೋರಣ ಹಾಕಲು ಕ್ರಮವಹಿಸಲು ತಿಳಿಸಿದರಲ್ಲದೆ, ವೇದಿಕೆ ಬಳಿ ಹೂವಿನ ಕುಂಡಗಳ ಜೋಡಣೆಗೆ ಕ್ರಮ ವಹಿಸುವಂತೆ ತೋಟಗಾರಿಕೆ ಅಧಿ ಕಾರಿಗಳು ನಿರ್ದೇಶನ ನೀಡಿದರು.

ಪ್ರತಿಯೊಂದು ಸರ್ಕಾರಿ ಕಚೇರಿ, ಕಟ್ಟಡ ಗಳಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ದೀಪಾಲಂಕಾರ ಮಾಡಲು ಕ್ರಮ ವಹಿ ಸಲು ಹಾಗೂ ಎಲ್ಲಾ ಇಲಾಖೆ ಅಧಿಕಾರಿ ಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯ ವಾಗಿ ಭಾಗವಹಿಸಬೇಕು ಎಂದರು.
ನೈಜತೆಗೆ ತಕ್ಕಂತೆ ಸ್ತಬ್ಧ ಚಿತ್ರಗಳನ್ನು ತಯಾ ರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಕ್ರೀಡಾಂಗಣದಿಂದ ಮೆರವಣಿಗೆಯು ನಗರದ ಎಂ.ಜಿ ರಸ್ತೆ, ಬಿ.ಎಂ ರಸ್ತೆ ಮಾರ್ಗದ ಮೂಲಕ ಹಾಸನಾಂಬ ಕಲಾ ಕ್ಷೇತ್ರಕ್ಕೆ ಸುಗಮವಾಗಿ ಸಾಗಲು ಬಂದೋಬಸ್ತ್ ನೀಡುವಂತೆ ಪೆÇಲೀಸ್ ಇಲಾಖೆ ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ಪಥಸಂಚಲನ ಆಕರ್ಷಕವಾಗಿ ಮೂಡಿ ಬರಲು ಅ. 27, 29 ಹಾಗೂ 30ರಂದು ತಾಲೀಮು ನಡೆಸಲು ತಿಳಿಸಿದ ಅಪರ ಜಿಲ್ಲಾಧಿಕಾರಿ ಅವರು, ರಾಷ್ಟ್ರಗೀತೆ, ನಾಡಗೀತೆ, ವಂದೇ ಮಾತರಂ ಹಾಡಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅಂದು ಸಂಜೆ ಕಲಾಭವನದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.

ಕ್ರೀಡೆ, ಸಾಹಿತ್ಯ, ನಾಟಕ, ನೃತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿ ಉಪ ಸಮಿತಿಯಲ್ಲಿ ಆಯ್ಕೆ ಮಾಡಿ ಪಟ್ಟಿ ಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸು ವಂತೆ ತಿಳಿಸಿದರಲ್ಲದೆ, ವಾರ್ತಾ ಇಲಾಖೆ ಯಿಂದ ರಾಜ್ಯೋತ್ಸವ ಸಂದೇಶ ಸಿದ್ಧಪಡಿ ಸಲು ತಿಳಿಸಿದರು ಉಪ ಸಮಿತಿಗಳು ಸಭೆ ನಡೆಸಿ ಅ. 27ರ ಒಳಗೆ ಸಭಾ ನಡವಳಿ ಸಲ್ಲಿಸುವಂತೆ ಸೂಚಿಸಿದ ಅವರು, ಅ. 29ಕ್ಕೆ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಮಾಜ ಸೇವಕರಾದ ಡಾ.ಗುರುರಾಜ ಹೆಬ್ಬಾರ್ ಮತ್ತು ಡಾ.ವೈ.ಎಸ್.ವೀರಭದ್ರಪ್ಪ ಸೇರಿ ದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Translate »