ಮಡಿಕೇರಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಉಮೇದು ವಾರಿಕೆಯನ್ನು ಹಿಂತೆಗೆದುಕೊಳ್ಳಲು ಶನಿ ವಾರ(ಅ.20) ಕೊನೆಯ ದಿನವಾಗಿತ್ತು. ಆ ನಿಟ್ಟಿನಲ್ಲಿ ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೆ ನಡೆಯುತ್ತಿರುವ ಚುನಾ ವಣೆ ಸಂಬಂಧ ಶನಿವಾರ 12 ಮಂದಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದು, 145 ಮಂದಿ ಕಣದಲ್ಲಿದ್ದಾರೆ.
ವಿರಾಜಪೇಟೆ ಪ.ಪಂ.ಯಲ್ಲಿ 18 ವಾರ್ಡ್‍ಗಳಿದ್ದು 8 ಮಂದಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದು 55 ಮಂದಿ ಕಣದಲ್ಲಿದ್ದಾರೆ. ಸೋಮವಾರಪೇಟೆ ಪ.ಪಂ. ಯಲ್ಲಿ ಒಟ್ಟು 11 ವಾರ್ಡ್‍ಗಳಿದ್ದು ಇಬ್ಬರು ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದು, 26 ಮಂದಿ ಕಣದಲ್ಲಿದ್ದಾರೆ. ಕುಶಾಲನಗರ ಪ.ಪಂ.ಯಲ್ಲಿ 16 ವಾರ್ಡ್‍ಗಳಿದ್ದು, ಇಬ್ಬರು ನಾಮಪತ್ರ ವಾಪಸ್ಸು ಪಡೆದಿದ್ದು, 64 ಮಂದಿ ಕಣದಲ್ಲಿದ್ದಾರೆ.
ಮತದಾನವು ಅಕ್ಟೋಬರ್, 28 ರಂದು ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಅಕ್ಟೋಬರ್, 30 ರಂದು ಬೆಳಗ್ಗೆ 7 ರಿಂದ 5 ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆಯು ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಅಕ್ಟೋಬರ್, 31 ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ.