ಚನ್ನಕೇಶವಸ್ವಾಮಿ ದಾಸೋಹ ಭವನ ಪುನಾರಂಭ
ಹಾಸನ

ಚನ್ನಕೇಶವಸ್ವಾಮಿ ದಾಸೋಹ ಭವನ ಪುನಾರಂಭ

October 21, 2018

ಬೇಲೂರು:ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನ 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಭಕ್ತರ ಸೇವೆಗೆ ಮುಕ್ತವಾಗಿದೆ.

ಪಟ್ಟಣದ ಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ದಾಸೋಹದ ಕೊಠಡಿ ಸೇರಿದಂತೆ ಇನ್ನಿತರ ಹಲವು ಅಭಿ ವೃದ್ಧಿ ಕೆಲಸಗಳನ್ನು ಮಾಡಿದ್ದು, ವಿಜಯ ದಶಮಿಯಂದು ಶಾಸಕ ಕೆ.ಎಸ್.ಲಿಂಗೇಶ್ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ ದರು. 2008ರಿಂದ ಪ್ರತಿನಿತ್ಯ ದಾಸೋಹ ನಡೆಯುತ್ತಿದೆ. ಆದರೆ ಅಗತ್ಯ ಸ್ಥಳಾವಕಾಶ ಇರದ ಕಾರಣ ದಾಸೋಹಕ್ಕೆ ಹೆಚ್ಚು ಭಕ್ತರು ಕೂರಲು ಆಗುತ್ತಿರಲಿಲ್ಲ. ಇದೀಗ ದೇಗು ಲದ ವ್ಯವಸ್ಥಾಪನಾ ಸಮಿತಿಯವರು ಈ ಭವನವನ್ನು ಜೀರ್ಣೋದ್ಧಾರ ಮಾಡಿ ಹೆಚ್ಚು ಭಕ್ತರು ದಾಸೋಹಕ್ಕೆ ಕೂರಲು ಅನುಕೂಲ ಕಲ್ಪಿಸಿದ್ದು, ಇದರೊಂದಿಗೆ ಇನ್ನಿತರ ಸೌಕರ್ಯಗಳ ಕಲ್ಪಿಸಿದ್ದಾರೆ. ದಾಸೋಹದ ಮೇಲ್ಭಾಗದಲ್ಲಿ ಬಡವರು ವಿವಾಹ ಮಾಡಲು ಅನುಕೂಲ ಆಗುವಂತೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದು, ಹೆಚ್ಚಿನ ಸೌಕರ್ಯ ಕಲ್ಪಿಸಲು ಶಾಸಕರು, ಸಂಸದರ ನಿಧಿಯಿಂದ 5 ಲಕ್ಷ ರೂ. ನೀಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋಧರ್ ಮಾತನಾಡಿ, ಶ್ರೀಚನ್ನಕೇಶವಸ್ವಾಮಿ ದೇಗುಲದ ಮಧ್ಯಾ ಹ್ನದ ಅನ್ನ ದಾಸೋಹ ಕೇಂದ್ರವು ಹೈಟೆಕ್ ವ್ಯವಸ್ಥೆಯೊಂದಿಗೆ ಪುನರಾರಂಭಗೊಂಡಿದೆ. ದೇಗುಲಕ್ಕೆ ಆಗಮಿಸುವ ಪ್ರವಾಸಿಗರ ಹಿತ ದೃಷ್ಟಿಯಿಂದ ಮಧ್ಯಾಹ್ನ ದಾಸೋಹದ ವ್ಯವಸ್ಥೆ ಯನ್ನು ಈ ಹಿಂದೆಯ ಶಿವರುದ್ರಪ್ಪ ಅವರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಕಲ್ಪಿಸಲಾಗಿತ್ತು. ನಂತರ ಶಿಥಿಲಗೊಂಡಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಸದ್ಯ ದೇಗುಲದ 80 ಲಕ್ಷರೂ. ಅನುದಾನದಲ್ಲಿ ವಿಶಾಲ ವಾದ ಊಟದ ಕೊಠಡಿಗಳು, ಸಭಾಂಗಣ, ದಾಸ್ತಾನು ಕೋಣೆ, ಅಡುಗೆ ತಯಾರಿಕೆಗೆ ಅಗತ್ಯವಿರುವ ಹೊಗೆ ಮುಕ್ತ ಗ್ಯಾಸ್ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಭಕ್ತರ ಊಟಕ್ಕೆ ಹೆಚ್ಚುವರಿಯಾಗಿ ಅಗತ್ಯವಿರುವ 100 ಟೇಬಲ್ ನೀಡುವುದಾಗಿ ದಾನಿಗಳು ಭರವಸೆ ನೀಡಿದ್ದಾರೆ. ಇದೀಗ ಶಾಸಕರು 5 ಲಕ್ಷ ರೂ. ಅನುದಾನ ನೀಡುತ್ತೇನೆಂದು ಭರವಸೆ ನೀಡಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಹೋಮ, ಹವನಗಳನ್ನು ದೇಗುಲ ಅರ್ಚಕರಾದ ಕೃಷ್ಣಸ್ವಾಮಿ ಭಟ್, ಶ್ರೀನಿವಾಸಭಟ್ ನೆರವೇರಿಸಿದರು.
ಈ ಸಂದರ್ಭ ದೇಗುಲದ ಇಓ ವಿದ್ಯುನ್ ಲತಾ, ತಾಪಂ ಉಪಾಧ್ಯಕ್ಷೆ ಕಮಲಾ ಚಿಕ್ಕಣ್ಣ, ಪುರಸಭಾ ಸದಸ್ಯ ಶ್ರೀನಿಧಿ, ವ್ಯವಸ್ಥಾಪನಾ ಸಮಿತಿಯ ವೆಂಕಟೇಗೌಡ, ಬಿ. ಎಂ.ರವೀಶ್, ಜಗದೀಶ್ ಮುಂತಾದವರಿದ್ದರು.

Translate »