ರಾಮನಾಥಪುರ: ಪ್ರವಾಹದಿಂದ 72.20 ಕೋಟಿ ರೂ. ಹಾನಿ
ಹಾಸನ

ರಾಮನಾಥಪುರ: ಪ್ರವಾಹದಿಂದ 72.20 ಕೋಟಿ ರೂ. ಹಾನಿ

August 22, 2018

ರಾಮನಾಥಪುರ: ಜೀವನದಿ ಕಾವೇರಿ ಪ್ರವಾಹದಿಂದ ಇಲ್ಲಿನ ವಿವಿಧ ಬಡಾವಣೆಗಳು ಹಾನಿಗೊಳಗಾಗಿ ಅಂದಾಜು 72.20 ಕೋಟಿ ರೂ. ನಷ್ಟ ಸಂಭವಿಸಿದ್ದು, ಇಂದೇ ಬೆಂಗಳೂರಿಗೆ ತೆರಳಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡುವೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ತಿಳಿಸಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರದಿಂದ ಶಿರದನ ಹಳ್ಳಿಯ ಕನಕಭವನದಲ್ಲಿ, ಐಬಿ ಸರ್ಕಲ್ ನಲ್ಲಿರುವ ಯಾತ್ರಿನಿವಾಸ, ವಿಶ್ವಕರ್ಮ ಸಮುದಾಯ ಭವನ, ಹಿರಿಯ ಪ್ರಾಥ ಮಿಕ ಶಾಲೆ, ಸಂಕ್ರಾಂತಿ ಕಲ್ಯಾಣ ಮಂಟಪ ಹಾಗೂ ಕೇರಳಾಪುರ ಮುಂತಾದೆಡೆ ನೆರೆ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಅಗತ್ಯ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದ ಅವರು, ರಾಮನಾಥಪುರದಲ್ಲಿ ಮಾತ್ರ ಹೆಚ್ಚಿನ ಹಾನಿ ಸಂಭವಿಸಿದೆ ಎಂದರು.

ಅತಿವೃಷ್ಟಿಯಿಂದ ವಿವಿಧ ಇಲಾಖೆ ಗಳ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ 23.95 ಕೋಟಿ ರೂ., ಜಿಪಂ ವ್ಯಾಪ್ತಿಯ ರಸ್ತೆ, ಶಾಲಾಕಟ್ಟಡ, ಅಂಗನವಾಡಿ, ಪಶು ಆಸ್ಪತ್ರೆ, ಸಾರ್ವಜನಿಕ ಅಸ್ಪತ್ರೆ ವಿದ್ಯಾರ್ಥಿ ನಿಲಯಗಳು ಸೇರಿದಂತೆ 22.65 ಕೋಟಿ ರೂ., ಕೃಷಿ ಇಲಾಖೆಗೆ ಸೇರಿದಂತೆ 4.750 ಎಕರೆ ಬೆಳೆಗಳಿಂದ 12.85 ಕೋಟಿ ರೂ., ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಹಾನಿಯಾಗಿದೆ. ಸಾವಿರಕ್ಕೂ ಅಧಿಕ ಹೆಚ್ಚು ಮನೆಗಳು ಕುಸಿದಿದೆ. ಕೆಲವು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, 5 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದರು.

ರಾಮನಾಥಪುರದಲ್ಲಿ ನೆರೆ ಹಾವಳಿಗೆ ತುತ್ತಾಗಿ ಮನೆ ಕಳೆದುಕೊಂಡ ವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಪಂ ವ್ಯಾಪ್ತಿಯ ಕೂಟವಾಳು ಗ್ರಾಮದ ಸರ್ವೇ ನಂ. 12ರಲ್ಲಿ ಕಳೆದ 12 ವರ್ಷಗಳ ಹಿಂದೆಯೇ ನಿವೇಶನ ರಹಿತರಿಗೆ 6 ಎಕರೆ ಪ್ರದೇಶದಲ್ಲಿ ಜಾಗ ಕಾಯ್ದಿರಿಸಲಾಗಿದೆ. ವಸತಿ ರಹಿತರಿಗೆ ಅಲ್ಲಿ ವಸತಿ ಸೌಲಭ್ಯ ಕಲ್ಪಿಸಿ, ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ತಹಶೀ ಲ್ದಾರ್ ನಂದೀಶ್, ಇಓ ಯಶಂತ್, ತಾಲೂಕು ಅರೋಗ್ಯಾಧಿಕಾರಿ ಸ್ವಾಮೀಗೌಡ, ಪಿಡಿಓ ವಿಜಯ ಕುಮಾರ್, ಉಪ ತಹಶೀಲ್ದಾರ್ ಜಿ.ಸಿ. ಚಂದ್ರು ರಾಜಸ್ವ ನೀರೀಕ್ಷಕ ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಧರ್ಮೇಶ್, ಗ್ರಾಪಂ ಕಾರ್ಯದರ್ಶಿ ಕುಮಾರ್ ಇತರರಿದ್ದರು.

ಭೂಕಂಪ ಅನುಭವ: 100ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

ಸಕಲೇಶಪುರ: ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿರುವ ಜಿಲ್ಲೆಯಲ್ಲೀಗ ಭೂಕಂಪ ಭೀತಿ ಎದುರಾಗಿದೆ. ತಾಲೂಕಿನ ಹಿಜ್ಜನಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿದ ಅನುಭವವಾಗಿದೆ. ಪರಿಣಾಮ ಸುಮಾರು 4 ಕಿ.ಮೀ.ನಷ್ಟು ಕಾಂಕ್ರಿಟ್ ರಸ್ತೆ ಹುದುಗಿ ಹೋಗಿದ್ದು, ಭಾರೀ ಗಾತ್ರದ ಬಂಡೆಯೊಂದು ಛಿದ್ರಗೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಭೂಕುಸಿತದಿಂದಾಗಿ 50 ಎಕರೆಗೂ ಹೆಚ್ಚು ಪ್ರದೇಶ ಹಾನಿಗೊಳ ಗಾಗಿದ್ದು, 100ಕ್ಕೂ ಹೆಚ್ಚು ಮನೆಗಳು ಬಿರುಕುಬಿಟ್ಟಿವೆ. ಕೆಲ ಮನೆಗಳು ನೆಲಸಮವಾಗಿವೆ.

Translate »