ಮೈಸೂರು ಪಾಲಿಕೆ ಚುನಾವಣೆ 44 ನಾಮಪತ್ರ ತಿರಸ್ಕøತ
ಮೈಸೂರು

ಮೈಸೂರು ಪಾಲಿಕೆ ಚುನಾವಣೆ 44 ನಾಮಪತ್ರ ತಿರಸ್ಕøತ

August 22, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾ ವಣೆಗೆ ನಾಮಪತ್ರ ಸಲ್ಲಿಸಿದ್ದ 484 ಅಭ್ಯರ್ಥಿಗಳ ಪೈಕಿ 25 ಅಭ್ಯರ್ಥಿಗಳ 44 ನಾಮಪತ್ರ ತಿರಸ್ಕøತಗೊಂಡಿದ್ದು, 459 ಉಮೇದುವಾರಿಕೆ ಸಿಂಧುವಾಗಿವೆ.

ಆ.13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಂದಿನಿಂದ ಕಡೇ ದಿನವಾದ ಸೋಮವಾರದವರೆಗೆ 65 ವಾರ್ಡ್‍ನಿಂದ 484 ಅಭ್ಯರ್ಥಿಗಳಿಂದ 541 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ ಕಡೇ ದಿನವಾದ ಸೋಮ ವಾರ 495 ನಾಮಪತ್ರಗಳು ಸಲ್ಲಿಕೆ ಯಾಗಿದ್ದವು. ಚುನಾವಣಾಧಿಕಾರಿಗಳು ಮಂಗಳವಾರ ನಾಮಪತ್ರಗಳ ಪರಿ ಶೀಲನೆ ನಡೆಸಿದ ವೇಳೆ ವಿವಿಧ ಕಾರಣ ಗಳಿಂದ 25 ಅಭ್ಯರ್ಥಿಗಳ 44 ನಾಮಪತ್ರ ಗಳು ತಿರಸ್ಕøತಗೊಂಡಿದ್ದು, ಉಳಿದ 459 ಮಂದಿ ನಾಮಪತ್ರ ಕ್ರಮಬದ್ಧ ವಾಗಿವೆ. ನಾಮಪತ್ರ ಹಿಂಪಡೆಯಲು ಆ.23 ಕಡೆ ದಿನವಾಗಿದ್ದು, ಅಂದು ಅಂತಿಮವಾಗಿ ಎಷ್ಟು ಮಂದಿ ಕಣ ದಲ್ಲಿ ಉಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.ಆ.31ರಂದು ಮತದಾನ ನಡೆಯಲಿದ್ದು, ಮತದಾನಕ್ಕೆ 8 ದಿನಗಳು ಮಾತ್ರ ಬಾಕಿ ಉಳಿದಿದೆ.

ತಿರಸ್ಕøತ: 10ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಜಸೀಮ್ ಮಹಮದ್ ಮತ್ತು ಇ.ಟಿ.ಇಮ್ಯಾನುಲ್, ಜೆಡಿಎಸ್ ಅಭ್ಯರ್ಥಿ ಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಸಯ್ಯದ್ ರಸುಲ್ ಆಯಾಯ ಪಕ್ಷದ ಬಿ ಫಾರಂ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ನಾಮಪತ್ರಗಳು ತಿರಸ್ಕøತಗೊಂಡಿವೆ.

43 ಮತ್ತು 47ನೇ ವಾರ್ಡ್‍ನಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಎನ್. ಸತ್ಯನಂದವಿಟ್ಟು, ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿದ್ದ 22ನೇ ವಾರ್ಡ್‍ನ (ಪಡುವಾರಹಳ್ಳಿ) ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ಅವರ ನಾಮಪತ್ರ ತಿರಸ್ಕøತಗೊಂಡಿದೆ.
6ನೇ ವಾರ್ಡಿನಿಂದ ಎಸ್‍ಬಿಎಂ ಮಂಜು ಮತ್ತು 23ನೇ ವಾರ್ಡಿನಿಂದ ಪುಷ್ಪಾ ರವರು ಜೆಡಿಎಸ್ ಅಭ್ಯರ್ಥಿ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.

Translate »