Tag: MCC Polls

ಫೆ. 9ರಂದು ಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆ
ಮೈಸೂರು

ಫೆ. 9ರಂದು ಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆ

January 26, 2020

ಜ.28 ನಾಮಪತ್ರ ಸಲ್ಲಿಕೆಗೆ ಕಡೇ ದಿನ, ಬಿಜೆಪಿ, ಕಾಂಗ್ರೆಸ್‍ನಲ್ಲಿ ತಲಾ ಮೂವರು ಆಕಾಂಕ್ಷಿಗಳು ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಜೆಡಿಎಸ್‍ನ ರಾಜು ಮತ್ತೆ ಸ್ಪರ್ಧೆಗೆ ಚಿಂತನೆ ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ ಸದಸ್ಯ ಸ್ಥಾನಕ್ಕೆ ಫೆಬ್ರವರಿ 9ರಂದು ಉಪ ಚುನಾವಣೆ ನಡೆಯಲಿದೆ. ಮೈಸೂರಿನ ಆಕಾಶವಾಣಿ ಸರ್ಕಲ್‍ನಲ್ಲಿರುವ ಪಾಲಿಕೆ ವಲಯ ಕಚೇರಿ-4ರಲ್ಲಿ ಚುನಾವಣಾಧಿಕಾರಿ ಕಚೇರಿ ಯಲ್ಲಿ ಜನವರಿ 1ರಿಂದ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ನಾಲ್ವರು ಮಾತ್ರ ನಾಮ ಪತ್ರಗಳ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಹೋಗಿದ್ದಾರಾದರೂ ಇಂದು…

ಮೈಸೂರು ಪಾಲಿಕೆ ಅಧಿಕಾರ ಜೆಡಿಎಸ್‍ಗೆ ನೀಡುವಂತೆ ಸಿಎಂ ಕುಮಾರಸ್ವಾಮಿ ಪಟ್ಟು
ಮೈಸೂರು

ಮೈಸೂರು ಪಾಲಿಕೆ ಅಧಿಕಾರ ಜೆಡಿಎಸ್‍ಗೆ ನೀಡುವಂತೆ ಸಿಎಂ ಕುಮಾರಸ್ವಾಮಿ ಪಟ್ಟು

September 8, 2018

ಬೆಂಗಳೂರು: ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಮತ್ತೆ ಅತಂತ್ರ ಸ್ಥಿತಿ ತಲುಪಿರುವ ಮೈಸೂರು ಮತ್ತು ತುಮಕೂರು ಮಹಾನಗರ ಪಾಲಿಕೆಗಳ ಅಧಿಕಾರ ಚುಕ್ಕಾಣಿಯನ್ನು ಜಾತ್ಯತೀತ ಜನತಾದಳಕ್ಕೆ ಬಿಟ್ಟು ಕೊಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಮೈಸೂರು, ತುಮಕೂರು ಎರಡು ಮಹಾ ನಗರ ಪಾಲಿಕೆಗಳು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಅತಂತ್ರ ಸ್ಥಿತಿಯಲ್ಲಿವೆ. ಈ ಎರಡು ನಗರ ಪಾಲಿಕೆ ಸೇರಿದಂತೆ 24 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾ…

ಮೈಸೂರು ನಗರ ಪಾಲಿಕೆ ಮತ್ತೆ `ಅತಂತ್ರ’
ಮೈಸೂರು

ಮೈಸೂರು ನಗರ ಪಾಲಿಕೆ ಮತ್ತೆ `ಅತಂತ್ರ’

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮತ್ತೆ ಅತಂತ್ರ ಪರಿಸ್ಥಿತಿಗೆ ಗುರಿಯಾಗಿದೆ. ಪಾಲಿಕೆಯ 65 ವಾರ್ಡ್‌ಗಳ ಪೈಕಿ ಬಿಜೆಪಿ 22 ಸ್ಥಾನ ಗಳಿಸಿದೆಯಾದರೂ, ಮೈಸೂರು ಪಾಲಿಕೆ ಅಧಿಕಾರ ಹಿಡಿಯಲಾಗದ ಪರಿಸ್ಥಿತಿ ಉಂಟಾಗಿದ್ದು, ಮೈತ್ರಿ ಮುಂದು ವರೆಯಬೇಕಾದ ಅನಿವಾರ್ಯತೆ ಇದೆ. 22 ವಾರ್ಡ್‍ಗಳಲ್ಲಿ ಬಿಜೆಪಿ, 19ರಲ್ಲಿ ಕಾಂಗ್ರೆಸ್, 18ರಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ಜಯಭೇರಿ ಬಾರಿಸಿದ್ದಾರೆ. ಉಳಿದಂತೆ ಐವರು ಪಕ್ಷೇತರರು ಹಾಗೂ ಓರ್ವ ಬಿಎಸ್‍ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಇಲ್ಲ. ಮೈತ್ರಿ ಆಡಳಿತ…

ಐಎಎಸ್ ಕನಸು ಕಂಡಿದ್ದ ಯುವಕ ಈಗ ಅತೀ ಕಿರಿಯ ಕಾರ್ಪೊರೇಟರ್!
ಮೈಸೂರು

ಐಎಎಸ್ ಕನಸು ಕಂಡಿದ್ದ ಯುವಕ ಈಗ ಅತೀ ಕಿರಿಯ ಕಾರ್ಪೊರೇಟರ್!

September 4, 2018

ಮೈಸೂರು: ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ಕನಸು ಕಂಡಿದ್ದ ಈ ಯುವಕ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಲ್ಲದೆ, ಮೈಸೂರು ನಗರಪಾಲಿಕೆ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ ಕಾರ್ಪೊರೇಟರ್ ದಾಖಲೆಯನ್ನು ನಿರ್ಮಿಸಿದ್ದಾರೆ. ನಗರಪಾಲಿಕೆಯ ಸಾತಗಳ್ಳಿ ಬಡಾವಣೆ ಒಂದನೇ ಹಂತದ 35ನೇ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಸಾತ್ವಿಕ್ ಸಂದೇಶ್‍ಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಎಸ್.ಸಾತ್ವಿಕ್ ನಗರಪಾಲಿಕೆಯ ಅತೀ ಕಿರಿಯ ಕಾರ್ಪೊರೇಟರ್.ಇವರ ದೊಡ್ಡಪ್ಪ ಸಂದೇಶ್ ನಾಗರಾಜ್ ವಿಧಾನಪರಿಷತ್ ಸದಸ್ಯರು. ಇನ್ನು ತಂದೆ…

ಎನ್.ಆರ್.ಕ್ಷೇತ್ರದ 23 ವಾರ್ಡ್ ಪೈಕಿ 13ರಲ್ಲಿ ಕಾಂಗ್ರೆಸ್ ಜಯಭೇರಿ
ಮೈಸೂರು

ಎನ್.ಆರ್.ಕ್ಷೇತ್ರದ 23 ವಾರ್ಡ್ ಪೈಕಿ 13ರಲ್ಲಿ ಕಾಂಗ್ರೆಸ್ ಜಯಭೇರಿ

September 4, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 13 ಸ್ಥಾನ ಗಳನ್ನು ಪಡೆಯುವ ಮೂಲಕ ಈ ಕ್ಷೇತ್ರ ದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಾಂಗ್ರೆಸ್ 13 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದರೆ, 6 ವಾರ್ಡ್‍ಗಳಲ್ಲಿ ಜಾತ್ಯತೀತ ಜನತಾದಳ, 3ರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆಲುವು ದಾಖಲಿಸಿದ ವಾರ್ಡ್‍ಗಳೆಂದರೆ, 8ನೇ ವಾರ್ಡ್ (ಬನ್ನಿ ಮಂಟಪ ಹುಡ್ಕೋ…

ಮೈಸೂರು ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಬಿಸಿಎಗೆ ಮೀಸಲು
ಮೈಸೂರು

ಮೈಸೂರು ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಬಿಸಿಎಗೆ ಮೀಸಲು

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾತಿ ನಿಗದಿ ಪಡಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಅತಂತ್ರ ಫಲಿತಾಂಶ ಹೊಂದಿರುವ ಮೈಸೂರು ನಗರಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ 7 ಹಾಗೂ ಜೆಡಿಎಸ್‍ನಲ್ಲಿ 11 ಮಹಿಳೆಯರು ಅರ್ಹರಾಗಿದ್ದು, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಓರ್ವ ಮಹಿಳೆ ಸೇರಿ 6 ಮಂದಿ ಹಾಗೂ ಜೆಡಿಎಸ್‍ನಲ್ಲಿ ಇಬ್ಬರು…

3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ!
ಮೈಸೂರು

3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ!

September 4, 2018

ಮೈಸೂರು: ಮೈಸೂರು ಮಹಾನಗರಪಾಲಿಕೆಯ 65 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ 393 ಅಭ್ಯರ್ಥಿಗಳಲ್ಲಿ 3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ. ಹೌದು, ಪಾಲಿಕೆ ಚುನಾವಣೆಯಲ್ಲಿ ಶೇ.0.89ರಷ್ಟು ಮತದಾರರು ತಮಗೆ ಯಾರೂ ಇಷ್ಟವಾಗಿಲ್ಲ ಎಂದು ನೋಟಾ ದಾಖಲಿಸಿದ್ದಾರೆ. 65 ವಾರ್ಡ್‍ಗಳಲ್ಲಿ ಚಲಾಯಿತ 3,99,428 ಮತಗಳ ಪೈಕಿ 3522 ಮಂದಿ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ 393 ಅಭ್ಯರ್ಥಿಗಳ ಪೈಕಿ ನಮಗೆ ಯಾರೊಬ್ಬರೂ ಇಷ್ಟವಾಗಿಲ್ಲ ಎಂದು ನೋಟಾ ಮೂಲಕ ತಿರಸ್ಕರಿಸಿದ್ದಾರೆ.

ಚಾಮುಂಡೇಶ್ವರಿಯ 3ರಲ್ಲಿ ಬಿಜೆಪಿಗೆ 2, ಜೆಡಿಎಸ್ 1ರಲ್ಲಿ ಗೆಲುವು
ಮೈಸೂರು

ಚಾಮುಂಡೇಶ್ವರಿಯ 3ರಲ್ಲಿ ಬಿಜೆಪಿಗೆ 2, ಜೆಡಿಎಸ್ 1ರಲ್ಲಿ ಗೆಲುವು

September 4, 2018

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ಮೂರು ವಾರ್ಡ್‍ಗಳಲ್ಲಿ ಬಿಜೆಪಿ 2 ಹಾಗೂ ಜೆಡಿಎಸ್ 1ರಲ್ಲಿ ಗೆಲುವು ಸಾಧಿಸಿದ್ದರೆ, ಇಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ. ವಾರ್ಡ್ 44ರಲ್ಲಿ (ಜನತಾನಗರ) ಜೆಡಿಎಸ್‍ನ ಸವಿತಾ ಸುರೇಶ್ ಜಯ ಗಳಿಸಿದ್ದರೆ, ವಾರ್ಡ್ 46ರಲ್ಲಿ (ದಟ್ಟಗಳ್ಳಿ) ಬಿಜೆಪಿಯ ಎಂ.ಲಕ್ಷ್ಮಿ ಹಾಗೂ ವಾರ್ಡ್ 58ರಲ್ಲಿ (ರಾಮಕೃಷ್ಣನಗರ) ಬಿಜೆಪಿಯ ಆರ್.ಕೆ.ಶರತ್‍ಕುಮಾರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ 44ರಲ್ಲಿ 2701 ಮತಗಳನ್ನು ಪಡೆದ ಜೆಡಿಎಸ್‍ನ ಸವಿತಾ ಸುರೇಶ್ 115 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ….

ಪಾಲಿಕೆ 6ನೇ ವಾರ್ಡ್‍ನಲ್ಲಿ ಹಾಲಿ ಕಾರ್ಪೊರೇಟರ್‍ಗಳ ಸೆಣಸಾಟ: ಎಸ್‍ಬಿಎಂ ಮಂಜುಗೆ ಒಲಿದ ವಿಜಯ
ಮೈಸೂರು

ಪಾಲಿಕೆ 6ನೇ ವಾರ್ಡ್‍ನಲ್ಲಿ ಹಾಲಿ ಕಾರ್ಪೊರೇಟರ್‍ಗಳ ಸೆಣಸಾಟ: ಎಸ್‍ಬಿಎಂ ಮಂಜುಗೆ ಒಲಿದ ವಿಜಯ

September 4, 2018

ಮೈಸೂರು:  ಗೋಕುಲಂ 6ನೇ ವಾರ್ಡ್ ನಿಜಕ್ಕೂ ತೀವ್ರ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಇಲ್ಲಿ ಹಾಲಿ ಮೂವರು ಪಾಲಿಕೆ ಸದಸ್ಯರಾದ ಜೆಡಿಎಸ್‍ನ ಎಸ್‍ಬಿಎಂ ಮಂಜು, ಬಿಜೆಪಿಯ ಟಿ. ಗಿರೀಶ್‍ಪ್ರಸಾದ್ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಸ್ನೇಕ್ ಶ್ಯಾಮ್ ಕಣದಲ್ಲಿದ್ದರಿಂದ ತೀವ್ರ ಕುತೂಹಲ ಕೆರಳಿಸಿತ್ತು. ತೀವ್ರ ಪೈಪೋ ಟಿಯ ನಡುವೆ ಅಂತಿಮವಾಗಿ ಜೆಡಿಎಸ್‍ನ ಎಸ್‍ಬಿಎಂ ಮಂಜು, ಬಿಜೆಪಿಯ ಟಿ.ಗಿರೀಶ್‍ಪ್ರಸಾದ್ ಅವರನ್ನು 193 ಮತಗಳ ಅಂತರದಲ್ಲಿ ಸೋಲಿಸಿ, ಪುನರಾಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಹಾಲಿ ಸದಸ್ಯ ಬಿಜೆಪಿ ಬಂಡಾಯ ಅಭ್ಯರ್ಥಿ…

ಪ್ರೇಮಕುಮಾರಿಗೆ ಹೀನಾಯ ಸೋಲು
ಮೈಸೂರು

ಪ್ರೇಮಕುಮಾರಿಗೆ ಹೀನಾಯ ಸೋಲು

September 4, 2018

ಮೈಸೂರು: ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಪದೇಪದೆ ಆರೋಪಗಳನ್ನು ಮಾಡುತ್ತಲೇ ಪ್ರಚಾರದಲ್ಲಿರುವ ಎಂ.ಪ್ರೇಮ ಕುಮಾರಿ ಜಡೇದ, ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋಲುಂಡಿದ್ದಾರೆ. 57ನೇ ವಾರ್ಡ್ (ಕುವೆಂಪುನಗರ) ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್ ಹಾಗೂ ಬಿಜೆಪಿಯ ಘಟಾ ನುಘಟಿ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದರು. ಹೊಲಿಗೆ ಯಂತ್ರ ಚಿಹ್ನೆ ಅವರದ್ದಾಗಿದ್ದು, ಮತದಾರರು ನನ್ನ ಕೈಹಿಡಿಯಲಿದ್ದಾರೆ ಎಂಬ ಆಶಯ ಹೊಂದಿದ್ದರು. ಆದರೆ ಮತದಾರರು ಅವರನ್ನು ಸಂಪೂರ್ಣ ವಾಗಿ ತಿರಸ್ಕರಿಸಿದ್ದು, ಅವರಿಗೆ ಕೇವಲ 16 ಮತಗಳು ಮಾತ್ರ ಬಿದ್ದಿವೆ.

1 2 3 6
Translate »